ಡಿಕೆಶಿ ಬಳಿಯಿದ್ದ ಮಹತ್ವದ ಡೈರಿ ವಶಕ್ಕೆ ಪಡೆದ ಐಟಿ ಅಧಿಕಾರಿಗಳು

ಡಿಕೆ ಶಿವಕುಮಾರ್ ಅವರಿಂದ ಡೈರಿ ವಶಕ್ಕೆ ಪಡೆದ ಐಟಿ ಅಧಿಕಾರಿಗಳು. ಡೈರಿಯಲ್ಲಿ ಮಹತ್ವದ ಮಾಹಿತಿ ಇರುವುದಾಗಿ ತಿಳಿಸಿದ ಮೂಲಗಳು.

ಬೆಂಗಳೂರು, ಆಗಸ್ಟ್ 3: ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಬಳಿಯಿತ್ತು ಎನ್ನಲಾಗಿರುವ ಡೈರಿಯೊಂದನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆ ಡೈರಿಯಲ್ಲಿ ಡಿಕೆಶಿಯ ಎಲ್ಲಾ ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ಇದೆಯೆಂದು ಹೇಳಲಾಗಿದ್ದು, ಇದರಲ್ಲಿ ಅನೇಕರಿಗೆ ಕೋಟಿ ಕೋಟಿ ರು.ಗಳಷ್ಟು ಹಣವನ್ನು ಡಿಕೆಶಿ ಕಡೆಯಿಂದ ಹೋಗಿರುವ ಬಗ್ಗೆ ಉಲ್ಲೇಖವಿದೆ ಎನ್ನಲಾಗಿದೆ.

DK Shivakumar

ಇದರಲ್ಲಿ ಎಐಸಿಸಿ (ಕಾಂಗ್ರೆಸ್ ಪಕ್ಷ) 3 ಕೋಟಿ ರು. ನಗದನ್ನು ಡಿಕೆಶಿ ಅವರು ವರ್ಗಾಯಿಸಿರುವ ಮಾಹಿತಿ ಇದೆ ಎನ್ನಲಾಗಿದೆ. ಇದೇ ವರ್ಷ ಜನವರಿ 5ರಂದು ಎಐಸಿಸಿಗೆ 3 ಕೋಟಿ ರು. ಕೊಟ್ಟಿರುವುದಾಗಿ ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಡಿಕೆಶಿ ಹೇಳಿಕೆ.

ಬುಧವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ನಿವಾಸಗಳು, ಕಚೇರಿಗಳು, ಉದ್ಯಮಗಳ ಮೇಲೆ ಏಕಾಏಕಿ ದಾಳಿ ನಡೆಸಿದಾಗ, ಇದೇ ಡೈರಿಯಲ್ಲಿದ್ದ ಕೆಲವು ಪುಟಗಳನ್ನು ಅವರು ಹರಿದುಹಾಕಿದ್ದರೆಂದು ಹೇಳಲಾಗಿತ್ತು. ಅವೇ ಹರಿದ ಪುಟಗಳನ್ನು ಒಟ್ಟುಗೂಡಿಸಿರುವ ಆದಾಯ ತೆರಿಗೆ ಇಲಾಖೆಯು ಆ ಪುಟಗಳಲ್ಲಿರುವ ಮಾಹಿತಿಗಳನ್ನು ಹೆಕ್ಕಿ ತೆಗೆಯಲು ಮುಂದಾಗಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+