Bengaluru Airport: ಬಹುಮಾದರಿ ಸಾರಿಗೆ ಸೌಲಭ್ಯ ಹೊಂದಿರುವ ಭಾರತದ ಏಕೈಕ ವಿಮಾನ ನಿಲ್ದಾಣ ಆಗಲಿದೆ

ಬೆಂಗಳೂರು, ಮಾರ್ಚ್‌ 29: ವಾರ್ಷಿಕವಾಗಿ ಗರಿಷ್ಠ ಸಂಖ್ಯೆ ಪ್ರಯಾಣಿಕರಿಗೆ ವಿಮಾನಯಾನ ಸೇವೆ ನೀಡುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಭಾರತದಲ್ಲೇ ಬಹುಮಾದರಿ ಸಾರಿಗೆ ಸೌಲಭ್ಯ ಹೊಂದಿರುವ ಏಕೈಕ ವಿಮಾನ ನಿಲ್ದಾಣ ಎಂಬ ಪಾತ್ರಕ್ಕೆ ಭಾಜನವಾಗಲಿದೆ.

ಸದ್ಯ ವಿಮಾನ ನಿಲ್ದಾಣದಲ್ಲಿ ಬಹುಮಾದರಿ ಸಾರಿಗೆ ಕೇಂದ್ರ ನಿರ್ಮಾಣದ ಹಂತದಲ್ಲಿದ್ದು, ಆದಷ್ಟು ತ್ವರಿಗತಿಯಲ್ಲಿ ಮುಗಿಸಲು ಚಿಂತನೆ ನಡೆದಿದೆ. ಈ ಮೂಲಕ ಬಹುಮಾದರಿ ಸಾರಿಗೆ ಕೇಂದ್ರ ಸೌಲಭ್ಯ ಹೊಂದಿರುವ ಝ್ಯೂರಿಚ್ ಮತ್ತು ಹೀಥ್ರೂ ವಿಮಾನ ನಿಲ್ದಾಣಗಳ ಸಾಲಿಗೆ KIA ಸೇರ್ಪಡೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Bengaluru International Airport Will Become The Only Airport In India With Multi Modal Transport Facility

ಬಹುಮಾದರಿ ಸಾರಿಗೆ ಕೇಂದ್ರವು ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣವನ್ನು ಒಂದೇ ಸೂರಿನಡಿ ಹೊಂದಿದೆ. ಇದು ಪ್ರಯಾಣಿಕರಿಗೆ ಯಾವುದೆ ತೊಂದರೆಯಿಲ್ಲದೆ ಮತ್ತು ತಡೆರಹಿತ ಪ್ರಯಾಣಕ್ಕೆ ಸಹಕಾರಿಯಾಗಲಿದೆ. ಈ ಕಾರಣಕ್ಕೆ ಆರಂಭವಾಗಿರುವ ಯೋಜನೆಯು ಶೀಘ್ರವೇ ಪೂರ್ಣಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತಿದೆ. ಅದರ ಕಾಮಗಾರಿಯೂ ಭರದಿಂದ ಸಾಗಿದೆ.

ಎಲ್ಲ ವಿಧದ ವಾಹನಗಳಿಗೂ ಪಾರ್ಕಿಂಗ್ ವ್ಯವಸ್ಥೆ

ಬೆಂಗಳೂರು ವಿಮಾನ ನಿಲ್ದಾಣವು ಭವಿಷ್ಯದಲ್ಲಿ ಖಾಸಗಿ ಕಾರು- ಟ್ಯಾಕ್ಸಿಯಂತಹ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಲಿದೆ. ಬಹುಮಾದರಿ ಸಾರಿಗೆ ಕೇಂದ್ರ ಸಾಮಾನು ವಿಂಗಡಣೆ ಸ್ಥಳವನ್ನು ಸಹ ಹೊಂದಿರಲಿದೆ. ಇಷ್ಟೇ ಅಲ್ಲದೇ ಮೆಟ್ರೋ ಮತ್ತು ಬಸ್ ನಿಲ್ದಾಣಗಳೆರಡೂ ಬಹುಮಾದರಿ ಸಾರಿಗೆ ಕೇಂದ್ರಕ್ಕೆ ಸಂಯೋಜಿಸಲ್ಪಟ್ಟಿದ್ದರಿಂದ ಪ್ರಯಾಣಿಕರಿಗೆ ವರದಾನವಾಗಿರಲಿದೆ.

Bengaluru International Airport Will Become The Only Airport In India With Multi Modal Transport Facility

ಖಾಸಗಿ ಕಾರು-ಟ್ಯಾಕ್ಸಿ ಬಿಎಂಟಿಸಿ, KSRTC ಮತ್ತು ಇಂಟರ್‌ಸಿಟಿ ಬಸ್‌ಗಳು ಒಂದೇ ಸೂರಿನಡಿ ಪಾರ್ಕಿಂಗ್ ಸೌಲಭ್ಯ ಪಡೆಯಲಿವೆ. ಆ ಮೂಲಕ ಸರಾಗ, ತಡೆ ರಹಿತ ಸೇವೆಯನ್ನು ಪ್ರಯಾಣಿಕರಿಗೆ ಒದಗಿಲಿದೆ. ಬೆಂಗಳೂರು ವಿಮಾನ ನಿಲ್ದಾಣವು ದಿನಕ್ಕೆ ಸುಮಾರು 1.05 ಲಕ್ಷ ಮಂದಿಗೆ ವಿಮಾನಯಾನ ಸೇವೆ ನೀಡುತ್ತಿದೆ. ಅದರಲ್ಲಿ ಶೇಕಡಾ 72ರಷ್ಟು ಮಂದಿ ಕಾರುಗಳು, ಟ್ಯಾಕ್ಸಿಗಳು ಮತ್ತು ಉಳಿದ 28 ಪ್ರತಿಶತದಷ್ಟು ಪ್ರಯಾಣಿಕರು ಬಸ್ಸುಗಳ ಮೂಲಕ ಪ್ರಯಾಣಿಸುತ್ತಾರೆ ಎಂದು ಬೆಂಗಳೂರು ವಿಮಾನ ನಿಲ್ದಾಣ ವಕ್ತಾರರು ತಿಳಿಸಿದ್ದಾರೆ ಎಂದು ಮನಿಕಂಟ್ರೋ ಸೈಟ್​ ವರದಿ ಮಾಡಿದೆ.

ಟರ್ಮಿನಲ್‌ಗೆ ಬರಲು ಸೂಕ್ತ ವ್ಯವಸ್ಥೆ

ಪ್ರಗತಿಯಲ್ಲಿರುವ ಮಲ್ಟಿ ಟ್ರಾನ್ಸಪೋರ್ಟ್ ಸೆಂಡರ್ ನಿಂದ ಟರ್ಮಿನಲ್ 1 ರಿಂದ ಸುಮಾರು 800 ಮೀಟರ್ ಮತ್ತು ಟರ್ಮಿನಲ್ 2 ರಿಂದ 100 ಮೀಟರ್ ದೂರದಲ್ಲಿ ತಲೆ ಎತ್ತಲಿದೆ. ಟರ್ಮಿನಲ್​ಗಳನ್ನು ಬಹುಮಾದರಿ ಸಾರಿಗೆ ಕೇಂದ್ರಕ್ಕ ಸಂಪರ್ಕಿಸುವ ಬಸ್​ಗಳನ್ನು ಬಿಐಎಎಲ್ ನಿರ್ವಹಿಸಲಿದೆ. ಇದಲ್ಲದೇ ಈ ಕೇಂದ್ರಕ್ಕೆ ಮೆಟ್ರೋ ನಿಲ್ದಾಣಗಳಿಂದ ಪಾದಚಾರಿ ಮಾರ್ಗದ ಬರಲು ವ್ಯವಸ್ಥೆ ಮಾಡಲಾಗುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆಚ್ಚೆಚ್ಚು ಪ್ರಯಾಣಿಕರ ಆಗಮಿಸುತ್ತಾರೆ. ಅವರ ಪೈಕಿ ಖಾಸಗಿ ಮತ್ತು ksrtc ಪ್ರಯಾಣಿಕರನ್ನು ವಿಮಾನ ನಿಲ್ದಾಣದತ್ತ ಸೆಳೆಯಲು ಇಂಟರ್-ಸಿಟಿ ಬಸ್​​ ಸೌಲಭ್ಯ ಕ್ಕೂ ಇಲ್ಲಿ ಅವಕಾಶ ನೀಡಲಾಗಿದೆ.

ಉದಾಹರಣೆಗೆ, ಬೆಂಗಳೂರಿನಿಂದ ತಿರುಪತಿ ಮತ್ತು ಹೈದರಾಬಾದ್‌ಗೆ ಹೋಗುವವರು ಮೆಟ್ರೋ ಮಾರ್ಗ ಸಿದ್ಧವಾದ ಮೇಲೆ ಅದರ ಮೂಲಕ ವಿಮಾನ ನಿಲ್ದಾಣ ತಲುಪಬಹುದಾಗಿದೆ.

ಕೆಐಎಗೆ 2026ರ ವೇಳೆಗೆ ಮೆಟ್ರೋ ಸಂಚಾರ

ಬಹುಮಾದರಿ ಸಾರಿಗೆ ಕೇಂದ್ರದ ಮೊದಲನೇ ಹಂತ ಒಂದೆರಡು ತಿಂಗಳಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ಮೆಟ್ರೋ ನಿಲ್ದಾಣದ ಎರಡನೇ ಹಂತ 2026 ರಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ. ಈ ಕುರಿತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಮತ್ತು ಬಿಐಎಎಲ್ ಒಪ್ಪಂದ ಮಾಡಿಕೊಂಡಿವೆ. ಒಪ್ಪಂದದಂತೆ ಇಲ್ಲಿ ಎರಡು ನಿಲ್ದಾಣಗಳು ಸ್ಥಾಪನೆಗೊಳ್ಳಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+