OLX ನಲ್ಲಿ ಕಾರು ಮಾರೋಕೆ ಹೋದ್ರೆ ಪಂಗನಾಮ ಗ್ಯಾರೆಂಟಿ ಹುಷಾರ್

ಬೆಂಗಳೂರು, ಮೇ 23: ನೀವು ಕಾರನ್ನು ಮಾರಬೇಕು ಎಂದು ಭಾವಿಸಿ OLX ನಲ್ಲಿ ಪೋಸ್ಟ್ ಹಾಕಿದ್ದೀರಾ? ಹಾಗಿದ್ದರೆ ಒಎಲ್ ಎಕ್ಸ್‌ನಲ್ಲಿ ನಿಮ್ಮ ಪೋಸ್ಟ್ ನೋಡಿಕೊಂಡು ಬರುವ ಗಿರಾಕಿಗಳಿಗೆ ನಿಮ್ಮ ಕಾರು ಟೆಸ್ಟ್ ಡ್ರೈವ್ ಕೊಡುವ ಮುನ್ನ ಹುಷಾರ್. ಟೆಸ್ಟ್ ಡ್ರೈವ್ ಹೆಸರಿನಲ್ಲಿ ಕಾರು ತೆಗೆದುಕೊಂಡು ಎಸ್ಕೇಪ್ ಆಗುವ ಕಿರಾತಕರ ಸಂಖ್ಯೆ ಬೆಂಗಳೂರಿನಲ್ಲಿ ಜಾಸ್ತಿಯಾಗಿದೆ.

ಟೆಸ್ಟ್ ಡ್ರೈವ್ ಹೆಸರಿನಲ್ಲಿ ಕಾರನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ನಾಯಕ್ ಬಂಧಿತ ಅರೋಪಿ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಅಮೃತನಗರ ನಿವಾಸಿ. ತನ್ನ ಕಾರನ್ನು ಮಾರಾಟ ಮಾಡುವುದಾಗಿ ಅಮೃತಹಳ್ಳಿ ಕಾಫಿ ಬೋರ್ಡ್ ನಿವಾಸಿ ರವೀಂದ್ರ ಎಲ್ಲೂರಿ ಒಎಲ್ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ. ಮಾರುತಿ ಬ್ರಿಜ್ಝಾ ಕಾರನ್ನು ಮಾರಾಟ ಮಾಡುವುದಾಗಿ ಪೋಟೋ ಸಮೇತ ಎಲ್ಲೂರಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ನೋಡಿ 5 ಮಂದಿ ಕರೆ ಮಾಡಿದ್ದರು.

ಅಮೃತಹಳ್ಳಿಯಲ್ಲಿ ನಡೆದ ಅಪರೂಪದ ಘಟನೆ

ಅಮೃತಹಳ್ಳಿಯಲ್ಲಿ ನಡೆದ ಅಪರೂಪದ ಘಟನೆ

ಅರೋಪಿ ವೆಂಕಟೇಶ್ ಕಾರು ಖರೀದಿ ಮಾಡುವ ಸೋಗಿನಲ್ಲಿ ಎಲ್ಲೂರಿಗೆ ಕರೆ ಮಾಡಿದ್ದಾರೆ. ಮನೆ ಬಳಿ ಬರುವಂತೆ ಎಲ್ಲೂರಿಗೂ ತಿಳಿಸಿದ್ದರು. ಅದರಂತೆ ವೆಂಕಟೇಶ್ ನಾಯಕ್ ಅಮೃತಹಳ್ಳಿಯ ಕಾಫಿ ಬೋರ್ಡ್ ಸಮೀಪದ ಎಲ್ಲೂರಿ ಮನೆ ಹತ್ತಿರ ಹೋಗಿದ್ದಾರೆ. ಕಾರನ್ನು ನೋಡಿ ಖರೀದಿ ಮಾಡುವುದಾಗಿ ಮಾತುಕತೆ ನಡೆಸಿದ್ದಾರೆ. ಆ ಬಳಿಕ ನಿನ್ನ ಕಾರ್‌ನ ಕಂಡೀಷನ್ ನೋಡುವುದಾಗಿ ಹೇಳಿ ಟೆಸ್ಟ್ ಡ್ರೈವ್ ಪಡೆದು ಕಾರು ಸಮೇತ ಎಸ್ಪೇಪ್ ಆಗಿದ್ದಾರೆ. ಟೆಸ್ಟ್ ಡ್ರೈವ್ ಅಂತ ಕಾರು ಸಮೇತ ಹೋದ ವೆಂಕಟೇಶ್ ಎಸ್ಕೇಪ್ ಆಗಿದ್ದ. ಈ ಕುರಿತು ಎಲ್ಲೂರಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕದ್ದ ಮೊಬೈಲ್ ಬಳಿಸಿ OLX ಗಿರಾಕಿಗೆ ಕರೆ ಮಾಡಿದ್ದ ಭೂಪ

ಕದ್ದ ಮೊಬೈಲ್ ಬಳಿಸಿ OLX ಗಿರಾಕಿಗೆ ಕರೆ ಮಾಡಿದ್ದ ಭೂಪ

ಈ ಕುರಿತು ಎಲ್ಲೂರಿ ನೀಡಿದ ದೂರಿನ ಮೇಲೆ ಪೊಲೀಸರು ತನಿಖೆ ನಡೆಸಿದಾಗ, ಕರೆ ಮಾಡಲು ಬಳಿಸಿದ್ದ ಪೋನ್ ಕಳ್ಳತನ ಮಾಡಿದ್ದು ಆಗಿತ್ತು. ಹೀಗಾಗಿ ಮೊಬೈಲ್ ನಂಬರ್‌ನಿಂದ ಆರೋಪಿಯನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಸುಮಾರು OLX ನಿಂದ 2500 ಐಪಿ ಅಡ್ರೆಸ್ ಪಡೆದು ಪರಿಶೀಲನೆ ನಡೆಸಿದ ಅಮೃತಹಳ್ಳಿ ಪೊಲೀಸರು ಆರೋಪಿ ವೆಂಕಟೇಶ್ ನಾಯ್ಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೆಬ್ ಐಪಿ ಅಡ್ರಸ್ ವಿಳಾಸ ಜಾಡು ಹಿಡಿದು ಅರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚುನಾವಣೆ ಸಾಲ ತೀರಿಸಲು ಕಾರು ಕದ್ದಿದ್ದ

ಚುನಾವಣೆ ಸಾಲ ತೀರಿಸಲು ಕಾರು ಕದ್ದಿದ್ದ

ಈ ಕುರಿತು ಆರೋಪಿ ವೆಂಕಟೇಶ್ ನಾಯ್ಕ್ ನನ್ನು ವಿಚಾರಣೆ ನಡೆಸಿದಾಗ, 2020 ರಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ನಿ ಸ್ಪರ್ಧಿಸಿದ್ದರು. ಇದ್ದ ಹಣವನ್ನು ಚುನಾವಣೆಗೆ ವೆಚ್ಚ ಮಾಡಿ ಸಾಲಗಾರನಾಗಿದ್ದ. ಈ ವೇಳೆ ಸಾಲ ತೀರಿಸಲು ತನ್ನ ಸ್ವಂತ ಕಾರು ಮಾರುತಿ ಬ್ರಿಜ್ಜಾ ಕಾರನ್ನು ಮಾರಾಟ ಮಾಡಿದ್ದ. ಆದರೆ ಇದರಿಂದ ಊರಿನಲ್ಲಿ ಅವಮಾನಕ್ಕೆ ಗುರಿಯಾಗಿದ್ದ. ಕಾರು ಇಲ್ಲದೇ ಓಡಾಡಿದರೆ ಮರ್ಯಾದೆ ಹೋಗುತ್ತೆ ಅಂತ ಭಾವಿಸಿ ಎಲ್ಲೂರಿ ಕಾರು ಅನ್ನು ಖರೀದಿ ಮಾಡುವ ಸೋಗಿನಲ್ಲಿ ಕದ್ದಿದ್ದ. ಅದೂ ಕದ್ದ ಪೋನ್ ಬಳಿಸ ಟೆಸ್ಟ್‌ ಡ್ರೈವ್ ಹೆಸರಿನಲ್ಲಿ ಪಡೆದುಕೊಂಡು ಅದರ ನಂಬರ್ ಬದಲಿಸಿ ತಿರುಗಾಡುತ್ತಿದ್ದ ಎಂಬ ಸಂಗತಿ ಗೊತ್ತಾಗಿದೆ. ಆರೋಪಿಯಿಂದ ಕಾರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಡ್ವಾಸ್ ಹೆಸರಲ್ಲಿ ಖರೀದಿದಾರರಿಗೂ ಟೋಪಿ

ಅಡ್ವಾಸ್ ಹೆಸರಲ್ಲಿ ಖರೀದಿದಾರರಿಗೂ ಟೋಪಿ

ಒಎಲ್ ಎಕ್ಸ್ ನಲ್ಲಿ ಬೈಕ್ ಮತ್ತು ಕಾರು ಮಾರಾಟ ಮಾಡುವರನ್ನು ಟಾರ್ಗೆಟ್ ಮಾಡಿ ವಂಚಿಸುವ ದೊಡ್ಡ ಗ್ಯಾಂಗ್ ಹುಟ್ಟಿಕೊಂಡಿದೆ. ಅದರಲ್ಲಿ ಕೆಲವು ಖರೀದಿದಾರರಿಗೆ ಮೋಸ ಮಾಡಿದರೆ, ಇನ್ನೂ ಕೆಲವರು ಮಾರಾಟಗಾರರಿಗೆ ಮೋಸ ಮಾಡುತ್ತಾರೆ. ಹೊಸ ಬೈಕ್‌ನ ಚಿತ್ರ ಹಾಕಿ ಅತಿ ಕಡಿಮೆ ಬೆಲೆಗೆ ಬೈಕ್ ಮಾರಾಟ ಮಾಡುವುದಾಗಿ ಪೋಸ್ಟ್ ಹಾಕುತ್ತಾರೆ. ಇದನ್ನು ನಂಬಿ ಕರೆ ಮಾಡಿದ್ರೆ, 5 ಸಾವಿರ ರೂ. ಅಡ್ವಾನ್ಸ್ ಕಳಿಸಿ ಎಂದು ಆನ್‌ಲೈನ್ ನಲ್ಲಿ ಹಣ ವರ್ಗಾವಣೆ ಮಾಡಿಸಿಕೊಂಡು ಸ್ವಿಚ್‌ ಆಫ್ ಮಾಡಿಕೊಳ್ಳುತ್ತಾರೆ. ಈ ತರಹದ ಅನೇಕ ಪ್ರಕರಣ ವರದಿಯಾದರೂ ಯಾರೂ ದೂರು ನೀಡಲ್ಲ. ಈ ರೀತಿಯ ಅನೇಕ ಅಪರಾಧಗಳು ಪದೇ ಪದೇ ವರದಿಯಾಗುತ್ತಿವೆ.

ನಂಬಿಸಿ ಕಾರು. ಬೈಕ್ ಪಡೆದು ಮೋಸ ಹುಷಾರ್

ನಂಬಿಸಿ ಕಾರು. ಬೈಕ್ ಪಡೆದು ಮೋಸ ಹುಷಾರ್

ಇನ್ನು ಕಾರನ್ನು ಮಾರಾಟ ಮಾಡುವುದಾಗಿ ಪೋಸ್ಟ್ ಹಾಕುವರ ಕಾರು, ಬೈಕ್ ಟೆಸ್ಟ್ ಡ್ರೈವ್ ಪಡೆಯುವ ಸೋಗಿನಲ್ಲಿ ಪಡೆದು ವಂಚಿಸುವ ಕಿರಾತಕರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾನ್ಯರಂತೆ ಬಿಂಬಿಸಿಕೊಂಡು ಎಲ್ಲಾ ವ್ಯಾಪಾರ ಮುಗಿಸಿ ಟೆಸ್ಟ್ ಡ್ರೈವ್ ಹೆಸರಿನಲ್ಲಿ ಪಡೆದು ನಾಮ ಹಾಕುತ್ತಾರೆ. ಈತರಹದ ಪ್ರಕರಣಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ. ಟೆಸ್ಟ್ ಡ್ರೈವ್ ಕೊಡಲೇಬಾರದು ಎನ್ನುತ್ತಾರೆ ಪೊಲೀಸರು.

ಒಎಲ್‌ಎಕ್ಸ್‌ನಲ್ಲಿ ಕಾರು ಮಾರೊಕೆ ಹೋಗಿ ಟೆಕ್ಕಿ ಕಣ್ಮರೆ

ಒಎಲ್‌ಎಕ್ಸ್‌ನಲ್ಲಿ ಕಾರು ಮಾರೊಕೆ ಹೋಗಿ ಟೆಕ್ಕಿ ಕಣ್ಮರೆ

ಇದು ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದ್ದ ಪ್ರಕರಣ. 2017 ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು. ಬೆಂಗಳೂರಿನ ಟೆಕ್ಕಿ ಅಜಿತಾಬ್ ಐದು ವರ್ಷದ ಹಿಂದೆ OLX ನಲ್ಲಿ ಕಾರು ಮಾರಲು ಹೋಗಿದ್ದ. ಟೆಸ್ಟ್ ಡ್ರೈವ್ ಎಂದು ಕಾರು ತೆಗೆದುಕೊಂಡು ಹೋಗಿದ್ದ ಅಜಿತಾಬ್ ವಾಪಸು ಮನೆಗೆ ಬಂದಿರಲಿಲ್ಲ. ಅಜಿತಾಬ್ ನಾಪತ್ತೆ ಬಗ್ಗೆ ದೂರು ಕೊಟ್ಟರೂ ಎಲ್ಲೂ ಪತ್ತೆಯಾಗಲಿಲ್ಲ. ಕೊನೆಗೆ ಸಿಬಿಐ ತನಿಖೆ ನಡೆಸಿದರೂ ಅಜಿತಾಬ್ ಸುಳಿವು ಸಿಗಲೇ ಇಲ್ಲ. ಈಗಲೂ ಅವರ ತಂದೆ ಅಜಿತಾಬ್ ಗಾಗಿ ಪರಿತಪಿಸುತ್ತಿದ್ದಾರೆ. ಹೀಗೆ ಒಎಲ್ಎಕ್ಸ್‌ ನಲ್ಲಿ ಕಾರು ಮಾರಲು ಹೋದ ಅಜಿತಾಬ್ ಕಣ್ಮರೆಯಾಗಿ ಹೋದವ ಐದು ವರ್ಷವಾದ್ರೂ ಪತ್ತೆಯಾಗಿಲ್ಲ. ಅಜಿತಾಬ್ ಬದುಕಿದ್ದಾನೆ ಎಂಬುದೂ ಗೊತ್ತಿಲ್ಲ. ಅವರ ಕುಟುಂಬ ಮಾತ್ರ ಇನ್ನೂ ಕಣ್ಣೀರು ಸುರಿಸುತ್ತಿದೆ.

ಕಾರು ಹೋದ್ರೆ OLX ಜವಾಬ್ದಾರಿ ಅಲ್ಲ

ಕಾರು ಹೋದ್ರೆ OLX ಜವಾಬ್ದಾರಿ ಅಲ್ಲ

ಒಎಲ್‌ಎಕ್ಸ್ ಒಂದು ಜನರು ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮಾರಾಟ ಮಾಡಲು ಹಾಗೂ ಖರೀದಿ ಮಾಡಲು ವೇದಿಕೆ ಕಲ್ಪಿಸಿರುವ ಆನ್‌ಲೈನ್ ಜಾಲ ಆಣ. ಯಾವ ಮಧ್ಯವರ್ತಿಗಳ ನೆರವು ಇಲ್ಲದೇ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಆದರೆ ಇಲ್ಲಿ ಹಾಕುವ ಪೋಸ್ಟ್ ಗಳಿಗೂ ಆಗುವ ವಂಚನೆಗಳಿಗೂ ಒಎಲ್‌ಎಕ್ಸ್ ಸಂಸ್ಥೆಗೂ ಸಂಬಂಧ ಇರಲ್ಲ. ಕಾರು ಅಥವಾ ಬೈಕ್ ಕಳೆದುಕೊಂಡರೆ ಒಎಲ್‌ಎಕ್ಸ್ ಜವಾಬ್ಧಾರಿ ಆಗಿರುವುದಿಲ್ಲ. ಹೀಗಾಗಿ ವಸ್ತುಗಳನ್ನು ಮಾರಾಟ ಮಾಡುವಾಗ ಸಾರ್ವಜನಿಕರೇ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಮೋಸ ಹೋಗುವುದು ಗ್ಯಾರಂಟಿ. ಮೋಸಕ್ಕೂ ಕಂಪನಿಗೂ ಯಾವುದೇ ಸಂಬಂಧ ಇರುವುದಿಲ್ಲ.

ಒಎಲ್‌ಎಕ್ಸ್ ಒಂದು ಜನರು ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮಾರಾಟ ಮಾಡಲು ಹಾಗೂ ಖರೀದಿ ಮಾಡಲು ವೇದಿಕೆ ಕಲ್ಪಿಸಿರುವ ಆನ್‌ಲೈನ್ ಜಾಲ ಆಣ. ಯಾವ ಮಧ್ಯವರ್ತಿಗಳ ನೆರವು ಇಲ್ಲದೇ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಆದರೆ ಇಲ್ಲಿ ಹಾಕುವ ಪೋಸ್ಟ್ ಗಳಿಗೂ ಆಗುವ ವಂಚನೆಗಳಿಗೂ ಒಎಲ್‌ಎಕ್ಸ್ ಸಂಸ್ಥೆಗೂ ಸಂಬಂಧ ಇರಲ್ಲ. ಕಾರು ಅಥವಾ ಬೈಕ್ ಕಳೆದುಕೊಂಡರೆ ಒಎಲ್‌ಎಕ್ಸ್ ಜವಾಬ್ಧಾರಿ ಆಗಿರುವುದಿಲ್ಲ. ಹೀಗಾಗಿ ವಸ್ತುಗಳನ್ನು ಮಾರಾಟ ಮಾಡುವಾಗ ಸಾರ್ವಜನಿಕರೇ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಮೋಸ ಹೋಗುವುದು ಗ್ಯಾರಂಟಿ. ಮೋಸಕ್ಕೂ ಕಂಪನಿಗೂ ಯಾವುದೇ ಸಂಬಂಧ ಇರುವುದಿಲ್ಲ.

Recommended Video

      Zameer Ahmed ಏಕತೆಯನ್ನು ಮೆರೆದಿದ್ದು ಹೀಗೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+