Bengaluru Cold Wave: ಅತ್ಯಧಿಕ ಚಳಿ ನಿರ್ಮಾಣ ಮುನ್ಸೂಚನೆ: ಜ.10ರ ನಂತರ ನಗರ ಬಿಡಿ ವಿಡಿಯೋ ವೈರಲ್..

ಬೆಂಗಳೂರು, ಜನವರಿ 07: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೈ ಕೊರೆವ ಚಳಿ, ಮಂಜಿನ ವಾತಾವರಣ ಮಂಗಳವಾರವು ಮುಂದುವರಿದಿದೆ. ನಗರದ ವಿವಿಧ ಬಡಾವಣೆಗಳಲ್ಲಿ 15 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ದಾಖಲಾಗುವ ಮೂಲಕ ಅತ್ಯಧಿಕ ಚಳಿ ವಾತಾವರಣ ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನವರಿ 10ರಿಂದ ನಾಲ್ಕು ದಿನ ಬೆಂಗಳೂರು ತೊರೆಯಿರಿ, ಏಕೆಂದರೆ ವಿಪರೀತ ಚಳಿ ಬೀಳುವ ಸಾಧ್ಯತೆ ಇದೆ ಎಂಬ ವಿಡಿಯೋಗಳು ಹರಿದಾಡಿವೆ.

ಕರ್ನಾಟಕ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಮುಂದಿನ ಇನ್ನೂ ಒಂದು ವಾರದ ನಗರದಲ್ಲಿ ಅಧಿಕ ಮೈಕೊರೆವ ಚಳಿ ಮುಂದುವರಿಯುವ ಲಕ್ಷಣಗಳು ಇವೆ. ಮಧ್ಯಾಹ್ನ ಶುಷ್ಕ ವಾತಾವರಣ ಸಹಿತ ಅತ್ಯಧಿಕ ಗರಿಷ್ಠ ಬಿಸಿಲು ದಾಖಲಾಗಲಿದೆ ಎಂದು ತಿಳಿಸಿದೆ.

IMD Predicted Heavy Cold will Cover Accrossed Benagaluru next Few Days See Weather Forecast

ಇಂದು ಮಂಗಳವಾರ ಬೆಂಗಳೂರಿನಲ್ಲಿ ಬೆಳಗ್ಗೆ 9 ಗಂಟೆ ಮಾಹಿತಿ ಪ್ರಕಾರ, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ (KIAL) 13.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್‌ನಲ್ಲಿ 15.5 ಕನಿಷ್ಠ ತಾಪಮಾನ ಹಾಗೂ ಬೆಂಗಳೂರು ನಗರದಲ್ಲಿ 16.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ನಗರದಲ್ಲಿ ಮುಂದಿನ ಮೂರು ದಿನ ಅಂದರೆ ಜನವರಿ 10ರವರೆಗೆ ಮಂಜು ಸಹಿತ ವ್ಯಾಪಕ ಚಳಿ ನಗರವನ್ನು ಆವರಿಸುವ ಸಾಧ್ಯತೆ ಇದೆ. ಮಧ್ಯಾಹ್ನ ಬಿರು ಬಿಸಿಲು ಕಂಡು ಬಂದರೂ ಸಹಿತಿ ಕತ್ತಲಾಗುತ್ತಿದ್ದಂತೆ ಚಳಿ ಹಾಗೂ ಬೆಳಗ್ಗೆ ಮಂಜು ಕವಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜನವರಿ 10ರ ನಂತರ ಬೆಂಗಳೂರು ಬಿಡಿ!

ಅಗ್ಗದ ದರಕ್ಕೆ ಜಿಬಿ ಗಟ್ಟಲೇ ಇಂಟರ್‌ನೆಟ್ ಸೇವೆ ಸಿಗುತ್ತಿರುವ ಇಂದಿನ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಿದೆ. ಸಾಮಾಜಿಕ ಜಾಲತಾಣದಲ್ಲಿ ಚಳಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಬೆಂಗಳೂರಿನಲ್ಲಿ ಜನವರಿ 10ರ ನಂತರ ಬೆಂಗಳೂರು ಬಿಡಿ. ಇಲ್ಲಿ ಸಿಕ್ಕಾಪಟ್ಟೆ ಚಳಿ ಆವರಿಸುವ ಸಾಧ್ಯತೆ ಇದೆ. ಈಗಲೇ ಮೈಕೊರೆವ ಚಳಿಗೆ ಸಾಕಾಗಿದೆ. ಮುಂದೆಯು ಇನ್ನಷ್ಟು ಚಳಿ ಆವರಿಸಲಿದೆ ಎಂಬ ಯುವತಿ ಹೇಳಿಕೆ ವಿಡಿಯೋ ವೈರಲ್ ಆಗಿದೆ.

ಇನ್ನೂ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧೆಡೆ ಚಳಿ ಪ್ರಮಾಣ ಹೆಚ್ಚಾಗಿದೆ. ಮಲೆನಾಡು, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ ಅತೀವ ಚಳಿ ಉಂಟಾಗಿದೆ. ಒಣಹವೆ ಜೊತೆಗೆ ಚಳಿ ಜನರನ್ನು ಬಾಧಿಸುತ್ತಿದೆ. ಅನಾರೋಗ್ಯಕ್ಕೆ ತುತ್ತಾಗಬಹುದೇ ಎಂಬ ಚಿಂತೆಯಲ್ಲಿ ಜನರಿದ್ದಾರೆ. ಕತ್ತಲಾಗುತ್ತಿದ್ದಂತೆ ಬೆಚ್ಚಗಿನ ಧಿರಿಸು ಧರಿಸಿಕೊಂಡು ಮನೆಯಲ್ಲಿ ಉಳಿಯುತ್ತಿದ್ದಾರೆ.

ಸಮುದ್ರ ಮಟ್ಟದಲ್ಲಿ ಉಂಟಾಗುವ ಸ್ಟ್ರಫ್ ಸುಳಿಗಾಳಿಯ ಬೀಸುವಿಕೆ ಪ್ರಮಾಣ ಹೆಚ್ಚಾದಾಗ ವಾತಾವರಣದಲ್ಲಿ ದಿಢೀರ್ ಬದಲಾವಣೆ ಆಗುತ್ತದೆ. ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಚಳಿ ಪ್ರಮಾಣ ಹೆಚ್ಚಿರುತ್ತದೆ. ಆದರೆ ಈ ಭಾರಿ ಅತ್ಯಧಿಕ ಪ್ರಮಾಣದಲ್ಲಿ ಚಳಿ ಏರಿಕೆ ಆಗಿದೆ. ಮುಂದಿನ ಒಂದು ವಾರದ ಬಳಿಕ ವಾತಾವರಣ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂಧು ಐಎಂಡಿ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+