ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಿಕ್ಸ್ ಪಟ್ಟಿ: ಭಾರತೀಯ ವಿಜ್ಞಾನ ಸಂಸ್ಥೆಗೆ 25ನೇ ಸ್ಥಾನ

|
Google Oneindia Kannada News

ಬೆಂಗಳೂರು, ಡಿ.4: ಬ್ರಿಕ್ಸ್( ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ) ವಿಶ್ವದ ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಭಾರತದಲ್ಲೇ ಅತ್ಯುತ್ತಮ ಸ್ಥಾನ ಮಾನ ಹೊಂದಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪಟ್ಟಿಯಲ್ಲಿ 25 ನೇ ಸ್ಥಾನ ಪಡೆದುಕೊಂಡಿದೆ.

ಒಟ್ಟು 18 ದೇಶಗಳ ವಿವಿಧ ವಿಶ್ವವಿದ್ಯಾಲಯಗಳ ಸ್ಥಿತಿ ಗತಿ, ಶಿಕ್ಷಣ ಪದ್ಧತಿ ಎಲ್ಲವನ್ನು ಅಧ್ಯಯನ ನಡೆಸಿ ಪಟ್ಟಿ ತಯಾರಿಸಲಾಗಿದೆ. ಟಾಪ್ 40 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ 4 ವಿಶ್ವ ವಿದ್ಯಾಲಯಗಳು ಸ್ಥಾನ ಪಡೆದಿವೆ.[ಸಂಶೋಧನಾ ವಿಭಾಗದಲ್ಲಿ ಐಐಎಸ್ಸಿಗೆ 11ನೇ ಸ್ಥಾನ]

bengaluru

ಬ್ರಿಕ್ಸ್ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್ ಸಿ, ಐಐಟಿ ಮುಂಬೈ. ರೊರ್ಕೆ ಐಐಟಿ, ಚಂಡಿಘಡದ ಪಂಜಾಬ್ ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿವೆ, ಅಲ್ಲದೇ ಟಾಪ್ 100 ವಿವಿಗಳಲ್ಲಿ ಭಾರತದ 7 ವಿಶ್ವವಿದ್ಯಾಲಯಗಳು ಸ್ಥಾನ ಪಡೆದುಕೊಂಡಿವೆ.

ಸಂಶೋಧನಾ ವಿಭಾಗದಲ್ಲಿ ಸಾಧನೆ
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್) ಮತ್ತೊಮ್ಮೆ ವಿಶ್ವಮಟ್ಟದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದು ಕಳೆದ ಸಪ್ಟೆಂಬರ್ ನಲ್ಲಿ ಕ್ವಾಕ್‌ಕ್ವಾರೆಲ್ಲಿ ಸೈಮಂಡ್ಸ್‌(ಕ್ಯೂಎಸ್‌) ಬಿಡುಗಡೆ ಮಾಡಿದ್ದ ವಿಶ್ವದ ಅತ್ಯುತ್ತಮ ವಿವಿಗಳ ಪಟ್ಟಿಯ ಸಂಶೋಧನಾ ವಿಭಾಗದಲ್ಲಿ ಐಐಎಸ್‌ಸಿ 11 ನೇ ಸ್ಥಾನ ಪಡೆದುಕೊಂಡಿತ್ತು.

ಪೂರಕ ಸಂಶೋಧನಾ ವಿಭಾಗ ಅಂದರೆ ಒಂದು ದೊಡ್ಡ ಸಂಶೋಧನೆಗೆ ಅಗತ್ಯವಾದ ಚಿಕ್ಕ ಚಿಕ್ಕ ಸಂಶೋಧನೆಗಳನ್ನು ಪ್ರಚುರಪಡಿಸುವಲ್ಲಿ ವಿವಿ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತೋರಿರುವ ಪ್ರಗತಿ ಮೆಚ್ಚುವಂಥದ್ದು ಎಂದು ಪಟ್ಟಿ ತಿಳಿಸಿತ್ತು.

English summary
The Indian Institute of Science (Bangaluru)) is India's top ranked university but stands at 25 in a ranking of universities from BRICS and other emerging economies according to new data. The Times Higher Education BRICS & Emerging Economies Rankings 2015 covering 18 countries was published early on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X