ಇನ್ಮುಂದೆ ಕೈನಲ್ಲಿ ಪ್ಲಾಸ್ಟಿಕ್ ಹಿಡಿದಿದ್ದರೂ ಬೀಳುತ್ತೆ ದಂಡ
ಬೆಂಗಳೂರು, ಜುಲೈ 3: ಇನ್ನುಮುಂದೆ ಕೈನಲ್ಲಿ ಪ್ಲಾಸ್ಟಿಕ್ ಹಿಡಿದು ಬೆಂಗಳೂರಲ್ಲಿ ತಿರುಗಾಡಬೇಡಿ ಅದಕ್ಕೂ ದಂಡ ಕಟ್ಟಬೇಕಾದೀತು.
ಪ್ಲಾಸ್ಟಿಕ್ ಬಳಕೆ ನೀಷೇಧದ ಕುರಿತು ಬಿಬಿಎಂಪಿ ಎಷ್ಟೇ ಮನವಿ ಮಾಡಿಕೊಂಡರೂ ಪ್ರತಿ ಅಂಗಡಿಗಳಿಗೆ ಹೋಗಿ ಪ್ಲಾಸ್ಟಿಕ್ ಕವರ್ ಬಳಕೆ ಮಾಡಬೇಡಿ, ಬಟ್ಟೆ ಚೀಲಗಳನ್ನು ಬಳಸಿ, ಅಥವಾ ಗ್ರಾಹಕರಿಗೆ ನೀವು ಬ್ಯಾಗ್‌ಗಳನ್ನು ತರದೇ ಇದ್ದರೇ ತರಕಾರಿ ಕೊಡುವುದೇ ಇಲ್ಲ ಎಂದು ಹೇಳಿ ಎಂದೆಲ್ಲಾ ಹೇಳಿ ಪ್ರಯತ್ನ ಪಟ್ಟರೂ ಕದ್ದುಮುಚ್ಚಿ ಪ್ಲಾಸ್ಟಿಕ್ ಕವರ್ ಮಾರಾಟ ನಡೆಯುತ್ತಲೇ ಇದೆ.
ಇಷ್ಟು ದಿನ ಪ್ಲಾಸ್ಟಿಕ್ ಉತ್ಪಾದಕರು , ಸಗಟುಮಾರಾಟಗಾರರು ಮತ್ತು ಸಾಮಾನು ಸರಂಜಾಮುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿಕಟ್ಟಿಕೊಡುತ್ತಿದ್ದ ಹೋಟೆಲ್, ಮಾಲ್, ಅಂಗಡಿಗಳ ಮೇಲಷ್ಟೇ ದಾಳಿ ನಡೆಸಿ ದಂಡ ವಿಧಿಸುತ್ತಿದ್ದರು. ಆದರೆ ಇದೀಗ ಪ್ಲಾಸ್ಟಿಕ್ ಕವರ್ ಹಿಡಿದುಕೊಂಡವರ ಮೇಲೂ ದಂಡ ವಿಧಿಸಲು ಮುಂದಾಗಿದೆ.

ಬಿಬಿಎಂಪಿ ಅಧಿಕಾರಿಗಳ ಕಾಣ್ಣಿಗೆ ಬಿದ್ದರೆ ಸ್ಥಳದಲ್ಲೇ 500 ರೂ ದಂಡ ಕಟ್ಟಬೇಕಾಗುತ್ತದೆ. ಹಾಗಾಗಿ ಆದಷ್ಟು ಪ್ಲಾಸ್ಟಿಕ್ ಕವರ್‌ಗಳಿಂದ ದೂರವಿರಿ.ಜುಲೈ 11 ರಿಂದ ಜಾರಿಗೆ ಬರುವಂತೆ ಪ್ಲಾಸ್ಟಿಕ್ ಅನ್ನು ನಿಷೇಧಿಸಿದೆ. ಕೆಲ ಅಂಗಡಿಗಳು ಗ್ರಾಹಕರಿಗೆ ಪ್ಲಾಸ್ಟಿಕ್ ಕವರ್ ಗಳಲ್ಲೇ ಸವ್ತುಗಳನ್ನು ತುಂಬಿಕೊಡುತ್ತವೆ.
ವಾಣಿಜ್ಯ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಪತ್ತೆಯಾದರೆ ಮೊದಲ ಬಾರಿಗೆ 25 ಸಾವಿರ ರೂ ದಂಡ, ಎರಡನೇ ಬಾರಿಗೆ 50 ಸಾವಿರ ಮೂರನೇ ಬಾರಿಗೆ ಲಕ್ಷರೂ ವಿಧಿಸಲಾಗುತ್ತದೆ. ಸಣ್ಣಪುಟ್ಟ ಅಂಗಡಿಗಳಿಗೆ ಮೊದಲ ಬಾರಿಗೆ 500 ರೂ ಹಾಗೂ ಎರಡನೇ ಬಾರಿಗೆ ಸಾವಿರ ರೂ ವಿಧಿಸಲಾಗುತ್ತದೆ.
ಪ್ಲಾಸ್ಟಿಕ್ ಕೈಚೀಲಗಳಲ್ಲಿ ಸಾಮಾನುನೀಡುವ ಮಳಿಗೆಗಳಿಗಷ್ಟೇ ಅಲ್ಲದೆ ಪ್ಲಾಸ್ಟಿಕ್ ಚೀಲಗಳಲ್ಲಿ ವಸ್ತುಗಳನ್ನು ಕೊಂಡೊಯ್ಯುವ ಗ್ರಾಹಕನಿಗೂ ದಂಡ ಬೀಳಲಿದೆ.












Click it and Unblock the Notifications