ಬೆಂಗಳೂರಿನಲ್ಲಿ ಬಸ್ ಚಾಲಕಿಯಾದ ಐಎಎಸ್ ಅಧಿಕಾರಿ ಶಿಖಾ
ಬೆಂಗಳೂರು, ಜನವರಿ 14: ಐಎಎಸ್ ಅಧಿಕಾರಿ ಹಾಗೂ ಬಿಎಂಟಿಸಿ ಎಂಡಿ ಸಿ.ಶಿಖಾ ತಮ್ಮ ಚಾಲನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.
ಬಿಎಂಟಿಸಿ ವೋಲ್ವಾ ಬಸ್ ಚಲಾಯಿಸಿದ್ದು, ಇದೀಗ ಹಲವರ ಕೆಂಗಣ್ಣಿಗೂ ಇದು ಕಾರಣವಾಗಿದೆ. ಶಿಖಾ ಬಿಎಂಟಿಯ ಎಂಡಿ ಆಗಿದ್ದು ಅವರು ಬಿಎಂಟಿಸಿಯ ವೋಲ್ವೊ ಬಸ್‌ನ್ನು ಓಡಿಸಿದ್ದಾರೆ. ಶಾಸಕ ರೇಣುಕಾಚಾರ್ಯ ಕೂಡ ಈ ಮೊದಲು ಸರ್ಕಾರಿ ಬಸ್‌ನ್ನು ಓಡಿಸಿದ್ದರು.
ಆದರೆ ಅವರು ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಕೆಲವರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೊಲ್ಲರಹಳ್ಳಿ, ಬೆನಕಹಳ್ಳಿ, ಉಜ್ಜನಿಪುರ, ಉಜ್ಜನಿಪುರ ತಾಂಡ, ಹುಡ್ಕಾಪುರ, ಬೀರಗೊಂಡನಹಳ್ಳಿ, ರಾಂಪುರ, ಸಾಸ್ವೇಹಳ್ಳಿ ಗ್ರಾಮಗಳಿಗೆ ತೆರಳಿ ನಂತರ ಇದೇ ಗ್ರಾಮಗಳ ಮೂಲಕ ಹೊನ್ನಾಳಿ ತಲುಪಿದ್ದ ಶಾಸಕರು, ಸಂಜೆ ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದಿಂದ ರಾಮೇಶ್ವರ, ನ್ಯಾಮತಿ ಮಾರ್ಗವಾಗಿ ಶಿವಮೊಗ್ಗ ತಲುಪಿದ್ದರು. ರೇಣುಕಾಚಾರ್ಯ ತಮ್ಮ ಫೇಸ್‌ಬುಕ್ ಖಾತೆಯಲ್ಲೂ ಬಸ್ ಓಡಿಸಿದ್ದ ಬಗ್ಗೆ ಫೋಟೋ ಶೇರ್ ಮಾಡಿದ್ದರು.
ರೇಣುಕಾಚಾರ್ಯ ಅವರು ಯಾರ ಪರವಾನಗಿ ಪಡೆದು ಸಾರಿಗೆ ಸಂಸ್ಥೆಯ ಬಸ್ ಚಲಾವಣೆ ಮಾಡಿದ್ದಾರೆಂಬ ವಿಷಯ ವೈರಲ್ ಆಗುತ್ತಿದ್ದಂತೆಯೇ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಡಿಪೋ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆಂಬ ವಿಷಯ ಕೇಳಿಬಂದಿತ್ತು. ಈಗ ಶಿಖಾ ಅವರ ವಿರುದ್ಧವೂ ಇಂಥದೇ ಆರೋಪ ಕೇಳಿಬಂದಿದೆ.












Click it and Unblock the Notifications