ಅಸಮಾಧಾನ ನಿಜ ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಇಲ್ಲ: ಬಿಸಿ ಪಾಟೀಲ್

Recommended Video

      Karnataka Budget 2019: ಬಿಸಿ ಪಾಟೀಲ್ ದಿಢೀರನೆ ಈ ಮಾತು ಹೇಳಿದ್ದೇಕೆ? | Oneindia Kannada

      ಬೆಂಗಳೂರು, ಫೆಬ್ರವರಿ 9: ಪಕ್ಷದ ಬಗ್ಗೆ ಅಸಮಾಧಾನವಿರುವುದು ನಿಜ ಆದರೆ ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಶಾಸಕ ಬಿಸಿ ಪಟೀಲ್ ಸ್ಪಷ್ಟಪಡಿಸಿದ್ದಾರೆ.

      ಇವರ ಹೇಳಿಕೆಯಿಂದಾಗಿ ಅತೃಪ್ತ ಶಾಸಕರ ತಂಡಕ್ಕೆ ಬಿಸಿ ಪಾಟೀಲ್ ಕೂಡ ಸೇರ್ಪಡೆಗೊಂಡಂತಾಗಿದೆ. ನಾನು ಯಾರ ಜೊತೆಯೂ ಇಲ್ಲ, ಸರ್ಕಾರದ ವಿರುದ್ಧ ಅಸಮಾಧಾನವಿದೆ ಅದು ಸತ್ಯ ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ.

      ನಾನು ಮುಂಬೈನಲ್ಲಿಲ್ಲ, ಭರಮಸಾಗರದಲ್ಲಿದ್ದೇನೆ. ಇದುವರೆಗೂ ಬೆಂಗಳೂರಿನಲ್ಲಿದ್ದ ನಾನು ಈಗ ನನ್ನ ಕ್ಷೇತ್ರಕ್ಕೆ ತೆರಳುತ್ತಿದ್ದೇನೆ. ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನವಿದೆ. ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಮಾತಿಲ್ಲ.

      I am unhappy but will not quit the party

      ರಮೇಶ್‌ ಜಾರಕಿಹೊಳಿ ಜತೆಯಲ್ಲಿದ್ದೇನೆ ಎನ್ನುವುದೆಲ್ಲಾ ಸುಳ್ಳು ಎಂದರು. ಸೋಮವಾರದಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುವೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಅಧಿವೇಶನ ಮುಗಿದ ನಂತರ ಶಾಸಕನಾಗಿ ಕ್ಷೇತ್ರಕ್ಕೆ ಮಾಡಬೇಕಿರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

      ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲವು ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದಾರೆ, ಅದರಲ್ಲಿ ಬಿಸಿ ಪಾಟೀಲ್ ಕೂಡ ಸೇರಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ನಾನು ಎಲ್ಲಿಯೂ ಹೋಗಿಲ್ಲ, ರಮೇಶ್ ಜಾರಕಿಹೊಳಿ ಜೊತೆಗೆ ನಾನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+