HSRP: ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್ಸ್, ಗಡುವು ವಿಸ್ತರಣೆ ಬಗ್ಗೆ ಅಲ್ಲ
ನೀವಿನ್ನೂ ಎಚ್‌ಎಸ್‌ಆರ್‌ಪಿ ಅಳವವಿಸಿಕೊಂಡಿಲ್ವಾ. ಮಾಡ್ಸಿ ಆಗಿದೆಯಾ ಇಬ್ಬರೂ ಓದಬೇಕಾದ ಸುದ್ದಿ ಇದು. ಎಚ್‌ಎಸ್‌ಆರ್‌ಪಿ ಅಂದರೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಅಪ್ಡೇಟ್ ನೀಡಿದೆ. ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಿ ಅಂತ ರಾಜ್ಯ ಸರ್ಕಾರ ಇಲ್ಲಿಯವರೆಗೆ ನಾಲ್ಕಕ್ಕೂ ಹೆಚ್ಚು ಬಾರಿ ಗಡುವುಗಳನ್ನು ನೀಡಿದೆ. ಇದೀಗ ರಾಜ್ಯ ಸರ್ಕಾರವು ಸೆಪ್ಟೆಂಬ್ 15ರ ವರೆಗೆ ಅಂತಿಮ ಗಡುವು ನೀಡಿತ್ತು. ಈ ಬಾರಿ ಖಡಕ್ ಎಚ್ಚರಿಕೆ ನೀಡಿರುವ ಸಾರಿಗೆ ಇಲಾಖೆಯು ಎಚ್‌ಎಸ್‌ಆರ್‌ಪಿ ಅಳವಡಿಸದವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಈ ಬಾರಿ ಯಾವುದೇ ಕಾರಣಕ್ಕೂ ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನು ಮೂರು ದಿನಗಳ ಅವಧಿಯಲ್ಲಿ ಅಂದರೆ ಸೆಪ್ಟೆಂಬರ್ 15ಕ್ಕೆ ರಾಜ್ಯ ಸರ್ಕಾರ ನೀಡಿರುವ ಅಂತಿಮ ಗಡುವು ಮುಕ್ತಾಯವಾಗಲಿದೆ. ಈ ಅವಧಿ ಮುಗಿದ ನಂತರ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ಮತ್ತೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಖಡಕ್ ಆಗಿ ಹೇಳಿದ್ದಾರೆ.

ಈಗಾಗಲೇ ನಾವು ಕಳೆದ ಒಂದು ವರ್ಷದಿಂದಲೂ ಅಂದರೆ 2023ನೇ ಸಾಲಿನಿಂದಲೂ ಅವಧಿಯನ್ನು ವಿಸ್ತರಿಸಿಕೊಂಡು ಬರಲಾಗುತ್ತಿದೆ. 2023ನೇ ಸಾಲಿನ ಆಗಸ್ಟ್‌ನಿಂದಲೂ ಗಡುವು ವಿಸ್ತರಿಸಿಕೊಂಡು ಬರಲಾಗುತ್ತಿದೆ. ಆದರೆ, ಈ ಬಾರಿ ವಿಸ್ತರಿಸುವ ಪ್ರಶ್ನೆ ಇಲ್ಲವೇ ಇಲ್ಲ. ಈ ಬಾರಿಯೂ ವಾಹನ ಸವಾರರು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದೆ ಇದ್ದರೆ, ಟ್ರಾಫಿಕ್ ಪೊಲೀಸರು ದಂಡ ವಿಧಿಸಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ಎಚ್‌ಎಸ್‌ಆರ್‌ಪಿಗೆ ಗಡುವು
ಎಚ್‌ಎಸ್‌ಆರ್‌ಪಿಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕು ಬಾರಿ ಗಡುವು ನೀಡಲಾಗಿದೆ. ಮೊದಲ ಬಾರಿ ಈ ನಿಯಮ ಜಾರಿ ಮಾಡಿದ ಸಂದರ್ಭದಲ್ಲಿ ಮೂರು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಅಂದರೆ, 2023ರ ಆಗಸ್ಟ್ 16ನೇ ತಾರೀಖಿನಿಂದ ನವೆಂಬರ್ 16ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ, ವಾಹನ ಸವಾರರು ಇದಕ್ಕೆ ಹೆಚ್ಚು ಸಕ್ರಿಯವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ, ಇದನ್ನು ಮತ್ತೊಂದು ಅವಧಿಗೆ ವಿಸ್ತರಿಸಲಾಯಿತು.
ಅಂದರಂತೆ 2023ರ ಫೆಬ್ರುವರಿ 17ರ ವರೆಗೆ ಮತ್ತೊಮ್ಮೆ ಅವಕಾಶ ನೀಡಲಾಗಿತ್ತು. ಆದರೆ, ಆಗಲೂ ಕೆಲವು ವಾಹನ ಸವಾರರು ಕ್ಯಾರೇ ಎನ್ನಲಿಲ್ಲ. ಮೂರನೇ ಬಾರಿ ಮೇ 31ರ ವರೆಗೆ ಮೂರನೇ ಬಾರಿಯೂ ಇದನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅಂತಿಮವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಸೆಪ್ಟೆಂಬರ್ 15ರ ವರೆಗೆ ಅವಕಾಶ ನೀಡಿದೆ. ಈ ಅವಕಾಶವನ್ನು ಇನ್ನು ಮೂರೇ ದಿನಗಳಲ್ಲಿ ಮುಕ್ತಾಯವಾಗಲಿದ್ದು, ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಈ ನಿಯಮವನ್ನು ಪಾಲನೆ ಮಾಡದವರ ಮೇಲೆ ದಂಡ ವಿಧಿಸುವುದಕ್ಕೆ ಮುಂದಾಗಿದೆ.
ಯಾವ ವಾಹನಗಳಿಗೆ ಅನ್ವಯವಾಗುತ್ತೆ ಎಚ್‌ಎಸ್‌ಆರ್‌ಪಿ
ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದು ಎಲ್ಲಾ ವಾಹನಗಳಿಗೂ ಅನ್ವಯವಾಗುವುದಿಲ್ಲ. ಒಂದೊಮ್ಮೆ ನೀವು 2019ಕ್ಕೂ ಮುಂಚೆ ನೀವು ವಾಹನಗಳನ್ನು ಖರೀದಿ ಮಾಡಿದ್ದರೆ ಇಲ್ಲವೇ 2019ರ ಏಪ್ರಿಲ್ 1ನೇ ತಾರೀಖಿಗಿಂತ ಮುಂಚಿತವಾಗಿ ವಾಹನ ಖರೀದಿ ಮಾಡಿದ್ದರೆ ಇದನ್ನು ನೀವು ಅಳವಡಿಸಿಕೊಳ್ಳಬೇಕು. 2019ರ ಏಪ್ರಿಲ್ 1ನೇ ತಾರೀಖಿನ ನಂತರ ನೋಂದಣಿಯಾಗುವ ವಾಹನಗಳಲ್ಲಿ ಈಗಾಗಲೇ ಎಚ್‌ಎಸ್‌ಆರ್‌ಪಿ ಇರುವುದರಿಂದ ಹೊಸದಾಗಿ ಅಳವಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.












Click it and Unblock the Notifications