ಬೆಂಗಳೂರು: ಆನ್‌ಲೈನ್ ನಲ್ಲಿ ಸುಲಭವಾಗಿ ಆಸ್ತಿ ತೆರಿಗೆ ಪಾವತಿಸುವ ವಿಧಾನ ತಿಳಿಯಿರಿ
ಬೆಂಗಳೂರು, ನವೆಂಬರ್ 06: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೆಂಗಳೂರಿನ ನಾಗರಿಕರ ಸೇವೆಗಳಿಗೆ ಸಂಪೂರ್ಣವಾಗಿ ಸಮರ್ಪಿತವಾಗಿದೆ. ಘನ ತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ವಹಣೆ ಮತ್ತು ಆಸ್ತಿ-ಸಂಬಂಧಿತ ಸೇವೆಗಳಂತಹ ಅಗತ್ಯ ಸೇವೆಗಳ ಸಮರ್ಥ ವಿತರಣೆಯು ಪರಿಣಾಮಕಾರಿ ನಗರ ಆಡಳಿತಕ್ಕೆ ನಿರ್ಣಾಯಕವಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಬೆಂಗಳೂರು ಬಿಬಿಎಂಪಿಗೆ ಬರುವ ಪ್ರಮುಖ ಆದಾಯ ಮೂಲಗಳ ಪೈಕಿ ಆಸ್ತಿ ತೆರಿಗೆಯು ಪ್ರಮುಖ ಮತ್ತು ಪ್ರಾಥಮಿಕ ಆದಾಯದ ಮೂಲವಾಗಿದೆ. ಈ ಆದಾಯವು ಬಿಬಿಎಂಪಿಯ ಕಾರ್ಯ ನಿರ್ವಹಣೆ ಮತ್ತು ಅದರ ಸೇವೆ ವಿತರಣೆಗೆ ನಿರ್ಣಾಯಕವಾಗಿದೆ.

ಎಲ್ಲಾ ಮಾಲೀಕರು ತಮ್ಮ ಸ್ವತ್ತಿಗೆ ಆಸ್ತಿತೆರಿಗೆಯನ್ನು ತ್ವರಿತವಾಗಿ ಪಾವತಿಸಲು ಬಿಬಿಎಂಪಿ ವಿನಂತಿಸುವ ಜೊತೆಗೆ ಒಂದಷ್ಟು ಆನ್‌ಲೈನ್ ಪಾವತಿ ವಿಧಾನಗಳನ್ನು ತಿಳಿಸಿದೆ.
ಫಾವತಿಸುವ ವಿಧಾನ-ಹೇಗೆ?
ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಭೂ ಸ್ವತ್ತು, ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಯನ್ನು ಸುಲಭವಾಗಿ ಕಟ್ಟಲು ಕೆಲವು ವ್ಯವಸ್ಥೆಗಳನ್ನು ಅನುಸರಿಸುತ್ತಿದೆ, ಈ ಪೈಕಿ ಇದರಲ್ಲಿ ಮಾಲೀಕರುಗಳಿಗೆ SMS ಮೂಲಕ ಸಂದೇಶಗಳು ಮತ್ತು ಪತ್ರಗಳು/ ನೋಟಿಸ್‌ಗಳನ್ನು ಕಳುಹಿಸುವುದು ಒಂದಾಗಿದೆ.
ಇವುಗಳ ಆಧಾರದಲ್ಲಿ ಆನ್‌ಲೈನ್ ಇಲ್ಲವೇ ಖುದ್ದು ಭೌತಿಕವಾಗಿ ಹತ್ತಿರ ಕಚೇರಿಗೆ ತೆರಳಿ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ.

ಉಳಿದಂತೆ ಆನ್‌ಲೈನ್ ಮೂಲಕವು ಪಾವತಿಗೆ ಅವಕಾಶ ಇದೆ. ಇಲ್ಲಿ ಸಾರ್ವಜನಿಕರು ಮೊದಲು ಬಿಬಿಎಂಪಿ ನೀಡಿರುವ ಅಧಿಕೃತ ಆನ್‌ಲೈನ್ ಲಿಂಕ್ https://bbmptax.karnataka.gov.in ಮೂಲಕ ಬಿಲ್ ಪಾವತಿಸಬೇಕು.
ಲಿಂಕ್ ಮೂಲಕ ವೆಬ್‌ಸೈಟ್ ಪ್ರವೇಶಿಸಿದ ಕೂಡಲೇ ಪಾಪರ್ಟಿ ಟ್ಯಾಕ್ಸ್ ವ್ಯವಸ್ಥೆ ಪರದೆ ಕಾಣುತ್ತದೆ. ಅಲ್ಲಿ ಬಲಬದಿಗೆ ಕಾಣುವ ಕಾಲಂ ನಲ್ಲಿ ಹತ್ತು ಸಂಖ್ಯೆಯ ಅಪ್ಲಿಕೇಷನ್ ಫಾರ್ಮ್ ನಂಬರ್ ಇಲ್ಲವೇ ಪಿಐಡಿ ನಂಬರ್ ಹಾಕಬೇಕು.
ಸಹಾಯವಾಣಿಗೆ ಕರೆ ಮಾಡಿ ಮಾತನಾಡಿ
ನಂತರ ಕೆಳಗೆ ಕೇಳಲಾಗುವ ಸ್ಥಳದಲ್ಲಿ ಭೂ ಮಾಲೀಕರು ಪೂರ್ಣ ಹೆಸರು ನಮೂದಿಸಿಬೇಕು. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ನಲ್ಲಿರುವ ಇತರ ಆಯ್ಕೆಗಳನ್ನು ಪರಿಶೀಲಿಸಿಕೊಳ್ಳಬೇಕು. ಇಲ್ಲವೇ ಗೊಂದಲಗಳು ಇದ್ದಲ್ಲಿ ದಯವಿಟ್ಟು ನಮ್ಮ ಸಹಾಯವಾಣಿ 1533 ಸಂಖ್ಯೆಗೆ ಕರೆ ಮಾಡಬೇಕು. ಸಹಾಯ ಮಾಡಲು ಮತ್ತು ಸ್ಪಷ್ಟೀಕರಣವನ್ನು ಒದಗಿಸಲು ನಾವು ಸದಾ ಸಿದ್ದರಿದ್ದೇವೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರು ಮಾಹಿತಿ ನೀಡಿದ್ದಾರೆ.
ನಗರದ ಅಭಿವೃದ್ಧಿಗಾಗಿ, ನಾಗರೀಕರು ಮತ್ತು ಬಿಬಿಎಂಪಿಯು ಒಂದಾಗಿ ಕೈಜೋಡಿಸಿ ಕುಟುಂಬವಾಗಿ ಕೆಲಸ ಮಾಡಿ ನಮ್ಮ ಜವಾಬ್ದಾರಿಗಳನ್ನು ಪೂರೈಸೋಣ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಮುನೀಶ್ ಮೌದ್ಗಿಲ್ ರವರು ತಿಳಿಸಿದ್ದಾರೆ.












Click it and Unblock the Notifications