Bengaluru Property: ಬೆಂಗಳೂರಿನಲ್ಲಿ ಮನೆ, ಫ್ಲಾಟ್ ಖರೀದಿ ಮಾಡುವವರಿಗೆ ಶಾಕ್‌

Bengaluru house price increase: ಬೆಂಗಳೂರು ಸೇರಿದಂತೆ ಮೆಟ್ರೋ ಸಿಟಿಗಳಲ್ಲಿ ಮನೆ ಜಾಗದ ಬೆಲೆ ಭರ್ಜರಿ ಹೆಚ್ಚಳವಾಗಿದೆ. 2023 -24ನೇ ಸಾಲಿನಲ್ಲಿದ್ದ ಮನೆ ಬೆಲೆಗೂ ಈಗ ಇರುವ ಬೆಲೆಗೂ ಸಾಕಷ್ಟು ವ್ಯತ್ಯಾಸವಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 7 ನಗರಗಳಲ್ಲಿ ಮನೆಗಳ ಬೆಲೆ ಭರ್ಜರಿ ಹೆಚ್ಚಳವಾಗಿದೆ. 2023ನೇ ಸಾಲಿನ ಡಿಸೆಂಬರ್‌ ಹಾಗೂ 2024ನೇ ಸಾಲಿನ ಡಿಸೆಂಬರ್‌ ಅಂತ್ಯದ ವರೆಗೆ ಮನೆಗಳ ಬೆಲೆ ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ವಿವಿಧ ರಿಯಲ್ ಎಸ್ಟೇಟ್ ಸಂಸ್ಥೆಗಳು ಈ ಅಧ್ಯಯನ ವರದಿಯನ್ನು ಪ್ರಕಟಿಸಿವೆ.

ಬೆಂಗಳೂರಿನಲ್ಲಿ ಈ ಅವಧಿಯಲ್ಲಿ ಪ್ರತಿ ಚದರ ಮೀಟರ್‌ (Per square meter)ಗೆ ಶೇ 28 ಪ್ರತಿಶತ ಹೆಚ್ಚಳವಾಗಿದೆ. ಮನೆ ಹಾಗೂ ಫ್ಲಾಟ್‌ಗಳ ಬೆಲೆ ಹೆಚ್ಚಳವಾಗುತ್ತಿರುವುದು ಮನೆ ಖರೀದಿ ಮಾಡಬೇಕು ಎನ್ನುವ ಆಸೆಯಲ್ಲಿ ಇರುವವರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಯಾವ ನಗರದಲ್ಲಿ ಎಷ್ಟು ಮನೆಗಳ ಬೆಲೆ ಹೆಚ್ಚಳವಾಗಿದೆ ಎನ್ನುವ ವಿವರ ಇಲ್ಲಿದೆ.

House and Flat Prices in Bengaluru Increase by 28

ಬೆಂಗಳೂರು, ದೆಹಲಿ ಎನ್‌ಸಿಆರ್‌, ಹೈದರಾಬಾದ್‌, ಮುಂಬೈ, ಪುಣೆ, ಚೆನ್ನೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಮನೆ ಹಾಗೂ ಫ್ಲಾಟ್‌ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಈ ನಗರಗಳಲ್ಲಿ ಪ್ರತಿ ಚದರ ಮೀಟರ್‌ಗೂ ಶೇ 30ರಿಂದ 21ರಷ್ಟು ಬೆಲೆ ಹೆಚ್ಚಳವಾಗಿದೆ. ನಗರಗಳು ಬೆಳೆಯುತ್ತಿದ್ದಂತೆಯೇ ಆಯಾ ಪ್ರದೇಶದ ಮನೆ ಹಾಗೂ ಫ್ಲಾಟ್‌ ಸೇರಿದಂತೆ ಭೂಮಿಯ ಬೆಲೆ ಹೆಚ್ಚಳವಾಗುತ್ತಿದೆ. ಮುಖ್ಯವಾಗಿ ಮೆಟ್ರೋ ಸಿಟಿಗಳನ್ನು ಮಾತ್ರ ಗಮನದಲ್ಲಿ ಇರಿಸಿಕೊಂಡು ನೋಡುವುದಾದರೆ, ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಮನೆ ಹಾಗೂ ಭೂಮಿಯ ಬೆಲೆ ಷೇರುರೀತಿ ಏರಿಕೆಯಾಗಿದೆ.

2023 ಹಾಗೂ 2024ನೇ ಸಾಲಿನಲ್ಲಿ ಹೆಚ್ಚು ಬೆಲೆ ಏರಿಕೆ ಕಂಡ ನಗರಗಳಲ್ಲಿ ದೆಹಲಿ ಹಾಗೂ ಎನ್‌ಸಿಆರ್‌ ಪ್ರಥಮ ಸ್ಥಾನದಲ್ಲಿ ಇದ್ದರೆ. ಬೆಂಗಳೂರು ಎರಡನೇ ಸ್ಥಾನದಲ್ಲಿ ಇದೆ. ಹೌದು ಬೆಂಗಳೂರಿನಲ್ಲಿ ಮನೆ ಖರೀದಿ ಬೆಲೆ ಹೆಚ್ಚಳವಾಗಿದೆ. ಆದರೆ, ದೆಹಲಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ. ಮೆಟ್ರೋ ಸಿಟಿಗಳಲ್ಲಿ ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ಕಡಿಮೆ ಬೆಲೆಗೆ ಮನೆಗಳು ಸಿಗುತ್ತಿವೆ. ಬೆಂಗಳೂರು ಹಾಗೂ ದೆಹಲಿಯಲ್ಲಿ ಮನೆಗಳ ಬೆಲೆ ಹೆಚ್ಚಳವಾದರೂ, ಮನೆಗಳ ಖರೀದಿ ಮಾಡುವ ಸಂಖ್ಯೆ ಏನು ಇಳಿಕೆಯಾಗಿಲ್ಲ.

House and Flat Prices in Bengaluru Increase by 28

ಬೆಂಗಳೂರಿನಲ್ಲಿ ಎಷ್ಟು ಹೆಚ್ಚಾಗಿದೆ: ಬೆಂಗಳೂರಿನಲ್ಲಿ 2023 - 24ನೇ ಸಾಲಿನಲ್ಲಿ ಮನೆಗಳ ಬೆಲೆ ಭರ್ಜರಿ ಹೆಚ್ಚಳ ಕಂಡಿದ್ದು. ರಿಯಲ್‌ ಎಸ್ಟೇಟ್‌ಗೆ ಬೂಸ್ಟ್‌ ಬಂದಿದೆ. ರಿಯಲ್‌ ಎಸ್ಟೇಟ್‌ಗೆ ಈ ಅವಧಿಯಲ್ಲಿ ಭರ್ಜರಿ ಲಾಭವಾಗಿದೆ. ಈ ಅವಧಿಯಲ್ಲಿ ಮನೆ ಮಾರಾಟ ಮಾಡಿರುವವರು ಒಳ್ಳೆಯ ದುಡ್ಡು ನೋಡಿದ್ದಾರೆ. ಬೆಂಗಳೂರಿನಲ್ಲಿ 2023ನೇ ಸಾಲಿನ ಡಿಸೆಂಬರ್‌ನಲ್ಲಿ ಮಾರಾಟ ಮಾಡುವ ಮನೆ ಹಾಗೂ ಫ್ಲಾಟ್‌ಗಳ ಬೆಲೆಯು ಪ್ರತಿ ಚದರ ಮೀಟರ್‌ಗೆ 6,550 ರೂಪಾಯಿ ಇದ್ದರೆ. 2024ನೇ ಸಾಲಿನ ಡಿಸೆಂಬರ್‌ನಲ್ಲಿ 8,380 ರೂಪಾಯಿ ಆಗಿದೆ. ಈ ಮೂಲಕ ಶೇ 28ರಷ್ಟು ಬೆಲೆ ಹೆಚ್ಚಳವಾಗಿದೆ.

ಮನೆ ಖರೀದಿ ಮಾಡುವವರಿಗೆ ಶಾಕ್‌: 2023 -2024ನೇ ಸಾಲಿನಲ್ಲಿ ಮನೆ ಹಾಗೂ ಫ್ಲಾಟ್‌ಗಳ ಬೆಲೆಯು ಭರ್ಜರಿ ಹೆಚ್ಚಳವಾಗಿ ರಿಯಲ್‌ ಎಸ್ಟೇಟ್‌ದಾರರಿಗೆ ಲಾಭವಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಮನೆ ಹಾಗೂ ಫ್ಲಾಟ್ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಸಂಕಷ್ಟ ಎದುರಾಗಿದೆ. ವರ್ಷದಿಂದ ವರ್ಷಕ್ಕೆ ಮನೆ ಹಾಗೂ ಫ್ಲಾಟ್ ಜಾಗಗಳ ಬೆಲೆ ಹೆಚ್ಚಳವಾಗಿರುವುದು ನೋಡಿ ಖರೀದಿ ಮಾಡಬೇಕು ಎಂದು ಕನಸು ಕಂಡವರು ಶಾಕ್‌ ಆಗಿದ್ದಾರೆ.

7 ಮೆಟ್ರೋ ಸಿಟಿಗಳಲ್ಲಿ ಬೆಂಗಳೂರಲ್ಲೇ ಹೆಚ್ಚು: ದೇಶದ 7 ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಜಾಗ, ಮನೆಗಳ ಬೆಲೆಯನ್ನು ಪರಿಶೀಲನೆ ಮಾಡಲಾಗಿದೆ. ಅದರಲ್ಲಿ ಬೆಂಗಳೂರಿನಲ್ಲೇ ಬೆಲೆ ಏರಿಕೆ ಆಗಿರುವುದು ಕಂಡು ಬಂದಿದೆ. ಈ ಅವಧಿಯಲ್ಲಿ ರಿಯಲ್‌ ಎಸ್ಟೇಟ್‌ಗೂ ಬಂಪರ್‌ ಆಗಿದೆ. ಮನೆಗಳ ಬೆಲೆಯಲ್ಲಿ ಮಾತ್ರವಲ್ಲ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೆಲೆಯೂ ಸಿಕ್ಕಾಪಟ್ಟೆ ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+