Viral Video: ಬೆಂಗಳೂರು ಪೊಲೀಸರನ್ನ ಬೋ**ಕೆ ಎಂದು ಕೆಟ್ಟ ಪದಗಳಿಂದ ಬೈದ ಹಿಂದಿ ಮಹಿಳೆ
ಬೆಂಗಳೂರಿಗೆ ಬಂದು ತುಂಬಿ ತುಂಬಿಕೊಳ್ಳುತ್ತಿರುವ ವಲಸಿಗರ ದರ್ಪ ಹೆಚ್ಚಾಗಿದೆ. ಇಲ್ಲಿವರೆಗೆ ಕನ್ನಡ, ಕನ್ನಡಿಗರ ವಿಚಾರವಾಗಿ ಕಾಲುಕೆರೆದು ಜಗಳ ಮಾಡುತ್ತಿದ್ದ ಹಿಂದಿ ಭಾಷಿಕರು ಇದೀಗ ಬೆಂಗಳೂರು ಪೊಲೀಸರ ಮೇಲೆಯೇ ಎಗರಾಡುವ ಮಟ್ಟಕ್ಕೆ ತಲುಪಿದ್ದಾರೆ. ಬೆಂಗಳೂರಿಗೆ ವಲಸೆ ಬಂದಿರುವ ಹಿಂದಿ ಮಹಿಳೆಯೊಬ್ಬರು ಟ್ರಾಫಿಕ್ ಪೊಲೀಸರನ್ನೇ ಅಸಭ್ಯ ಪದಗಳಿಂದ ನಿಂದಿಸಿ ನಡುರಸ್ತೆಯಲ್ಲೇ ಅವಾಜ್ ಕೂಡ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಯಲಹಂಕ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ವಾಹನ ತಪಾಸಣೆ ವಿಚಾರವಾಗಿ ಪೊಲೀಸರು ಆ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಹಿಂದಿ ಮಹಿಳೆ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಎಗರಾಡಿದ್ದಾರೆ. ಅಲ್ಲದೇ ಪೊಲೀಸರಿಗೆ ಕೈತೋರಿಸಿ ಬೋ***ಕೆ ಅಂತೆಲ್ಲ ಹಿಂದಿ ಭಾಷೆಯಲ್ಲಿ ಅಸಭ್ಯ ಪದಗಳನ್ನ ಬಳಸಿ ನಿಂದಿಸಿದ್ದಾರೆ. ತನ್ನೊಂದಿಗೆ ಮತ್ತೊಬ್ಬ ಯುವಕ ಕೂಡ ಇದ್ದು, ಪೊಲೀಸರು ಆತನಿಗೆ ಹೀಗೆಲ್ಲ ಮಾಡಿದ್ರೆ ಅರೆಸ್ಟ್ ಆಗ್ತೀಯ ಎಂದು ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಆದರೂ ಸುಮ್ಮನಾಗದ ಹಿಂದಿ ಮಹಿಳೆ ಅವನನ್ನ ಮುಟ್ಟಲು ನಿನಗೆ ಎಷ್ಟು ಧೈರ್ಯ? ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ.

ತಾಕತ್ತಿದ್ರೆ ಅರೆಸ್ಟ್ ಮಾಡು ಎಂದು ಅರೆಬರೆ ಕನ್ನಡದಲ್ಲೇ ಮಹಿಳೆ ಅವಾಜ್ ಕೂಡ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಆಕೆಯನ್ನು ಬಂಧಿಸುವಂತೆ ಪೊಲೀಸರನ್ನು ಆಗ್ರಹಿಸಿದ್ದರು. ಆ ಇಬ್ಬರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದ್ದು, ಸದ್ಯ ಜೈಲು ಸೇರಿದ್ದಾರೆ.
ಕರ್ತವ್ಯದಲ್ಲಿದ ಪೊಲೀಸ್ ಸಿಬ್ಬಂದಿಗಳ ಮೇಲೆ ಅವ್ಯಾಚ ಪದಗಳಿಂದ ನಿಂದಿಸಿ ದೌರ್ಜನ್ಯ ಮಾಡಿದ ಈ ವಲಸೆ ಮಹಿಳೆಯ ಮೇಲೆ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಹಲವು ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಬೆಂಡೆತ್ತಿದ್ದಾರೆ. ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ. ಅಸಭ್ಯ ಪದಗಳು ಮತ್ತು ಬೆದರಿಕೆಗಳು ನಿಮಗೆ ವಿಶೇಷ ವ್ಯಕ್ತಿಯಂತೆ ವಿಶೇಷ ಉಪಚಾರದ ಪಾಸ್‌ಗೆ ಕಾರಣವಾಗಬಹುದು. ಅದುವೇ ನೇರ ಪೊಲೀಸ್ ಠಾಣೆಗೆ. ಎಚ್ಚರಿಕೆ! ಬೆಂಗಳೂರು ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದು ಈ ವಿಡಿಯೋ ಹಂಚಿಕೊಂಡಿದ್ದಾರೆ. ಎಲ್ಲಿಂದಲೋ ಬಂದು, ಇಲ್ಲಿನ ಪೊಲೀಸರ ಮೇಲೆ ಎಗರಾಡಿದ್ದಕ್ಕೆ ತಕ್ಕ ಶಾಸ್ತಿಯೇ ಆಗಿದೆ.
ವಲಸಿಗರಿಗೆ ಈಗಲೇ ಮೂಗುದಾರ ಹಾಕಿ
ಬೆಂಗಳೂರಿನಲ್ಲಿ ಇತ್ತೀಚೆಗೆ ವಲಸಿಗರ ಹಾವಳಿ ಹೆಚ್ಚಾಗಿ ಇಂತಹ ಘಟನೆಗಳು ನಡೆಯತ್ತಿವೆ. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬರುವ ಪರಭಾಷಿಕರಿಗೆ ಈ ನೆಲದ ಮೇಲಾಗಲಿ, ಇಲ್ಲಿನ ಜನರ ಮೇಲಾಗಲಿ ಯಾವುದೇ ಗೌರವ ಇಲ್ಲ. ಹೀಗಿರುವಾಗ ಅಂತವರಿಗೆ ರಾಜ್ಯದಲ್ಲಿ ಆಶ್ರಯ ನೀಡುವುದೇ ತಪ್ಪು ಎಂದು ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.
ಅದೆಷ್ಟು ದುರಹಂಕಾರ ನೋಡಿ, ರಾಜ್ಯದ ಪೊಲೀಸರನ್ನೇ ಇಂತಹ ಕೀಳು ಭಾಷೆಯಲ್ಲಿ ಮಾತನಾಡ್ತಾರೆ ಅಂದ್ರೆ, ಇವರೆಗೆಷ್ಟು ಕೊಬ್ಬು ಇರಬೇಕು. ನಮ್ಮ ಮೇಲೆಯೇ ಹಲ್ಲೆ, ಪೊಲೀಸರನ್ನೇ ಬೆದರಿಸೋದು ಏನಿದು? ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಈ ವೈರಲ್ ವಿಡಿಯೋಗಳಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ಆರೋಪಿತರನ್ನು ವಶಕ್ಕೆ ಪಡೆದು ಆರೋಪಿತರ ಮೇಲೆ ಕಾನೂನು ಬದ್ಧವಾಗಿ ತನಿಖೆಯನ್ನು ಕೈಗೊಂಡಿರುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications