ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹಿಂದಿಯಲ್ಲೇ ಮಾತಾಡ್ರಿ ಎಂದ ಮಹಿಳೆ, ವೈರಲ್ ವಿಡಿಯೋ!

Hindi vs Kannada: ಬೆಂಗಳೂರಿನಲ್ಲಿ ಕನ್ನಡ ಹಾಗೂ ಅನ್ಯಭಾಷಿಕರ ಹಾವಳಿ ಹೆಚ್ಚಾಗಿದೆ. ಇದೀಗ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣವೊಂದರಲ್ಲಿ ಹಿಂದಿಯಲ್ಲಿ ಮಾತನಾಡಿರುವ ಮಹಿಳೆ ಉದ್ಧಟತನ ಪ್ರದರ್ಶಿಸಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗದಲ್ಲಿ ಅನ್ಯಭಾಷಿಕರ ಹಾವಳಿ ಹೆಚ್ಚಾಗುತ್ತಿದ್ದು, ಅದರಲ್ಲೂ ಕೆಲವು ನಾರ್ಥ್ ಇಂಡಿಯಾದವರು ಹಿಂದಿಯಲ್ಲಿ ಮಾತನಾಡಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಇದೀಗ ಬೆಂಗಳೂರು ಮೆಟ್ರೋ ನಿಲ್ದಾಣದ ವಿಡಿಯೋ ವೈರಲ್ ಆಗುತ್ತಿದೆ.

ಕನ್ನಡ vs ಹಿಂದಿ ಎನ್ನುವ ಚರ್ಚೆ, ವಿವಾದ ಬೆಂಗಳೂರಿನಲ್ಲಿ ಮುಂದುವರಿದಿದೆ. ಇದೀಗ ನಗರದ ಪ್ರಮುಖ ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಭಾಷಾ ವಿಚಾರವಾಗಿ ವಾಕ್ಸಮರ ನಡೆದಿದೆ. ಬೆಂಗಳೂರಿನಲ್ಲಿ ಹಿಂದಿಯಲ್ಲಿ ಮಾತ್ರ ಮಾತನಾಡುತ್ತೇವೆ, ನೀವೂ ಹಿಂದಿಯಲ್ಲೇ ಮಾತನಾಡಿ ಎಂದು ಕನ್ನಡಿಗರಿಗೇ ಹಿಂದಿ ಭಾಷಿಕರು ಹೇಳುವ ವಿಡಿಯೋಗಳು ಈ ಹಿಂದೆಯೂ ವೈರಲ್ ಆಗಿರುವುದು ಇದೆ. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ಈ ಮೆಟ್ರೋ ಘಟನೆ. ಆದರೆ ವೈರಲ್ ವಿಡಿಯೋದಲ್ಲಿ ಬೇರೆ ವಿಚಾರವೂ ಇದೆ.

Hindi vs Kannada Woman asks to speak in Hindi at Bengaluru Namma Metro station viral video

ಹಿಂದಿ ಮಾತನಾಡಿ ಎಂದು ಕನ್ನಡದಲ್ಲೇ ಹೇಳಿರುವ ಮಹಿಳೆ, ಮತ್ತೊಬ್ಬ ಕನ್ನಡ ಮಹಿಳೆಯೊಂದಿಗೆ ವಾದಕ್ಕೆ ಇಳಿದಿದ್ದಾಳೆ. ಕನ್ನಡ ಮಾತನಾಡಿ ಎಂದು ಆಗ್ರಹಿಸಿರುವ ಕನ್ನಡತಿಗೆ ನೀವು ಹಿಂದಿಯಲ್ಲಿ ಮಾತನಾಡಿ ಎಂದು ಮಹಿಳೆ ಕನ್ನಡದಲ್ಲೇ ಹೇಳಿರುವುದು ವಿಡಿಯೋದಲ್ಲಿ ಇದೆ.

ಈ ಬಗ್ಗೆ ಮಾತನಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಅವರು, ಮೊದಲನೆಯದಾಗಿ ಕನ್ನಡ ಮಾತಾಡು ಎಂದು ದಿಟ್ಟವಾಗಿ ಧ್ವನಿ ಎತ್ತಿದ ಕನ್ನಡತಿಗೆ ಅಭಿನಂದನೆಗಳು..❤️ ಕನ್ನಡ ನಾಡಲ್ಲಿ ಹಿಂದಿ ಮಾತಾಡು ಅಂತ ದುರಹಂಕಾರ ತೋರುವುದು ಅವಿವೇಕಿತನ ಇದು ಕರ್ನಾಟಕ ನಮ್ಮ ಆಡಳಿತ ಭಾಷೆ ಕನ್ನಡ. ನಮ್ಮದು ಹಿಂದಿ ನಾಡಲ್ಲ.ಹಿಂದಿ ಮಾತಾಡು ಅಂತ ದುರಹಂಕಾರ ತೋರಿದ ಈ ಯುವತಿಗೆ ಧಿಕ್ಕಾರ ಎಂದು ಹೇಳಿದ್ದಾರೆ.

ಹಲವು ಕನ್ನಡಿಗರು ಇದಕ್ಕೆ ಧ್ವನಿಗೂಡಿಸಿದ್ದಾರೆ. ಕನ್ನಡ ನಮ್ಮ ಆಡಳಿತ ಭಾಷೆ, ನಮ್ಮ ಹೆಮ್ಮೆ. ನೀವು ಯಾವುದೇ ಭಾಷೆಯನ್ನು ಕಲಿಯಬಹುದು ಮತ್ತು ಮಾತನಾಡಬಹುದು, ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕನ್ನಡಕ್ಕಾಗಿ ಧ್ವನಿ ಎತ್ತಿದ ಯುವತಿಯ ಮನೋಭಾವ ಶ್ಲಾಘನೀಯ ಎಂದು ನೆಟ್ಟಿಗರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+