ಬ್ಲೇಡ್ ನುಂಗಿದ್ದೀನಿ ಎಂದು ನಾಟಕ ಆಡಿ ಪೊಲೀಸರಿಗೆ ಯಾಮಾರಿಸಿದ ಬರ್ನಲ್

ಬೆಂಗಳೂರು, ಡಿ. 01: ಆತನ ಹೆಸರು ಬರ್ನಲ್ ಸಿದ್ಧಕಿ ! ಮುಖ ನೋಡಿದರೆ ಎಂಥವರೂ ಬೆಚ್ಚಿ ಬೀಳುತ್ತಾರೆ. ಮಚ್ಚು ಹಿಡಿದು ರೋಡಿಗೆ ಇಳಿದ್ರೆ ಹಾಡಹಗಲೇ ನಾಲ್ಕೈದು ಅಂಗಡಿಯವರಿಗೆ ಲಾಂಗು ತೋರಿಸಿ ರಾಬರಿ ಮಾಡಿ ಎಸ್ಕೇಪ್ ಆಗುತ್ತಾನೆ. ವಸಂತನಗರದಲ್ಲಿ ಹಾಡಹಗಲೇ ಲಾಂಗು ಬೀಸಿ ಹಣ ಸುಲಿಗೆ ಮಾಡಿದ್ದ ಬರ್ನಲ್‌ಸಿದ್ಧಕಿ ಪೊಲೀಸರ ಮುಂದೆ ಬ್ಲೇಡ್ ನುಂಗಿದ ನಾಟಕವಾಡಿ ಸಿಕ್ಕಿ ಬಿದ್ದಿದ್ದಾನೆ. ಈ ವಂಚಕನ ಅಸಲಿ ವಿವರ ಇಲ್ಲಿದೆ.

ಬರ್ನಲ್ ಸಿದ್ಧಕಿ ಕಾಡುಗೊಂಡನಹಳ್ಳಿ ನಿವಾಸಿ. ಅದ್ಯಾವ ಕೃತ್ಯ ಎಸಗಿದನೋ ಗೊತ್ತಿಲ್ಲ, ಈತನ ಕುತ್ತಿಗೆ ಬರ್ನ್ ಆಗಿ ಹೋಗಿದೆ. ಈತನ ಮುಖ ನೋಡಿದರೆ ಎಂಥವರೂ ಬೆಚ್ಚಿ ಬೀಳುವಂತಹ ವಿರೂಪಗೊಂಡಿದ್ದಾನೆ. ಇತ್ತೀಚೆಗೆ ವಸಂತನಗರದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಬರ್ನಲ್ ಸಿದ್ಧಕಿ ಅಂಗಡಿ ಮಾಲೀಕನ ಮೇಲೆ ಲಾಂಗು ಬೀಸಿ 25 ಸಾವಿರ ರೂ. ಹಣ ಸುಲಿಗೆ ಮಾಡಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಬೆಂಗಳೂರು ಪೊಲೀಸ್ ಆಯುಕ್ತರು ಕಿರಾತಕನ್ನು ಬಂಧಿಸುವಂತೆ ಸೂಚಿಸಿದ್ದರು. ಸಿಸಿಟಿವಿ ದೃಶ್ಯ ಆಧರಿಸಿ ಬರ್ನಲ್ ಸಿದ್ಧಕಿಯನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ನಡೆದ ಘಟನೆ ಇಡೀ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಯಾವುದಕ್ಕೂ ಸೊಪ್ಪು ಹಾಕದ ಪೊಲೀಸರು ಎಡೆ ಮುರಿ ಕಟ್ಟಿ ಜೈಲಿಗೆ ಕಳುಹಿಸಿದ್ದಾರೆ.

ಲಾಂಗು ಹಿಡಿದು ದ್ವಿಚಕ್ರ ವಾಹನದಲ್ಲಿ ತೆರಳಿದರೆ ಹಾಡಹಗಲೇ ಏರಿಯಾಗಳಲ್ಲಿ ಜನರನ್ನು ಹೆದರಿಸಿ ಸುಲಿಗೆ ಮಾಡುತ್ತಾನೆ. ಈತನನ್ನು ನೋಡಿ ಜನರು ಭಯ ಬೀಳುತ್ತಾರೆ. ಅಂತಹ ವಿಕೃತ ಮುಖ ಹೊಂದಿರುವ ಬರ್ನಲ್‌ ಸಿದ್ಧಕಿ ಇತ್ತೀಚೆಗೆ ವಸಂತನಗರದ ಎಂಟನೇ ಕ್ರಾಸ್ ನಲ್ಲಿ ಅಂಗಡಿ ಮಾಲೀಕನಿಗೆ ಬೆದರಿಸಿ ಸುಲಿಗೆ ಮಾಡಿದ್ದ. ಸಿದ್ಧಕಿ ಬೆದರಿಕೆಗೆ ಹೆದರಿ ಹಣ ನೀಡಿದ್ದ ಅಂಗಡಿ ಮಾಲೀಕ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದ.

 High Ground Police Arrest Burnol Siddiqui Over Robbery Case in Vasanth Nagar

ಸಿಸಿಟಿವಿ ಆಧರಿಸಿ ಆರೋಪಿಯನ್ನು ಬಂಧಿಸಿದಾಗ, ನಾನು ಬ್ಲೇಡ್ ನುಂಗಿದ್ದೇನೆ, ಸ್ವಲ್ಪದರಲ್ಲಿ ಸತ್ತು ಹೋಗುತ್ತೇನೆ. ಲಾಕಪ್ ಡೆತ್ ಆಗುತ್ತದೆ ಎಂದು ಪೊಲೀಸರ ಮುಂದೆ ನಾಟಕವಾಡಿದ್ದಾನೆ. ಇದಕ್ಕೆ ಹೆದರಿದ ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಈ ವೇಳೆ ಸಿದ್ಧಕಿ ಯಾವುದೇ ಬ್ಲೇಡ್ ನುಂಗಿಲ್ಲ ಎಂಬ ವಿಚಾರ ಗೊತ್ತಾಗಿದೆ. ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಲು ಈ ನಾಟಕವಾಡಿದ್ದು, ಪೊಲೀಸರು ಸ್ಕ್ಯಾನ್ ಮಾಡಿಸುವ ಮೂಲಕ ಆತನ ತಪ್ಪಿಸಿಕೊಂಡು ಪರಾರಿಯಾಗುವ ನಾಟಕಕ್ಕೆ ಬ್ರೇಕ್ ಹಾಕಿದ್ದಾರೆ.

ಈ ವಿಚಾರ ತಿಳಿದ ಬಳಿಕ ಬರ್ನಲ್ ಸಿದ್ಧಕಿಯನ್ನು ಹೈಗ್ರೌಂಡ್ಸ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ತಪ್ಪಿಸಿಕೊಂಡು ಹೋಗಲು ಪೊಲೀಸರ ಮುಂದೆ ನಾಟಕವಾಡಿದ್ದಾಗಿ ತಿಳಿಸಿದ್ದಾನೆ. ಈತನ ವೃತ್ತಾಂತ ತೆಗೆದಾಗ ಅನೇಕ ಠಾಣೆಗಳಲ್ಲಿ ಇದೇ ರೀತಿಯ ನಾಟಕವಾಡಿ ತಪ್ಪಿಸಿಕೊಂಡು ಪರಾರಿಯಾಗಿರುವ ಸಂಗತಿಗಳು ಹೊರ ಬಿದ್ದಿದೆ. ಕಳ್ಳತನ ಸುಲಿಗೆ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದರೆ, ಖಾಲಿ ಪೇಪರ್ ನುಂಗಿ ಸೈನೈಡ್ ನುಂಗಿದ್ದೇನೆ ಎಂದು ಡ್ರಾಮಾ ಆಡುತ್ತಿದ್ದನಂತೆ. ಸತ್ತು ಹೋದರೆ ಸಮಸ್ಯೆ ಎದುರಾದೀತು ಎಂದು ಕೆಲ ಪೊಲೀಸರು ಬರ್ನಲ್‌ ಸಿದ್ಧಕಿಯನ್ನು ಬಿಟ್ಟು ಕಳುಹಿಸಿದ್ದಾರೆ. ಈ ಹೈಡ್ರಾಮಾ ಸಂಗತಿ ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.

ಪೊಲೀಸರಿಗೆ ಚಳ್ಳೆ ಹಣ್ಣು:

ಇನ್ನು ಈ ಬರ್ನಲ್ ಸಿದ್ಧಕಿ ವಿರುದ್ಧ ಅನೇಕ ಕಳ್ಳತನ ಸುಲಿಗೆ ಪ್ರಕರಣಗಳು ದಾಖಲಾಗಿವೆ. ಕೋರ್ಟ್‌ಗೆ ಹಾಜರಾಗದೇ , ಪೊಲೀಸರ ಕೈಗೂ ಸಿಗದೇ ತಲೆಮರೆಸಿಕೊಂಡು ತಿರುಗುತ್ತಿದ್ದಾನೆ. ಈತನ ವಿರುದ್ಧ ಸುಮಾರು 20 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಗಳಿಂದ ಸಮನ್ಸ್ ಜಾರಿಯಾದರೂ ಹಾಜರಾಗಿಲ್ಲ. ಇದೀಗ ಹಾಡು ಹಗಲೇ ರಾಬರಿ ಮಾಡಿ ಸಿಕ್ಕಿಬಿದ್ದಿದ್ದು, ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬರ್ನಲ್ ಸಿದ್ಧಕಿಯನ್ನು ಯಾವುದೇ ಪ್ರಕರಣದಲ್ಲಿ ಬಂಧಿಸಿದರೂ ಮೊದಲು ಬ್ಲೇಡ್ ನುಂಗಿದ್ದೀನಿ, ಸೈನೈಡ್ ಕುಡಿದಿದ್ದೀನಿ ಎಂದು ನಾಟಕವಾಡುತ್ತಾನೆ. ಈ ಮೂಲಕ ತಪ್ಪಿಸಿಕೊಂಡು ಪರಾರಿಯಾಗುತ್ತಾನೆ. ಅನೇಕ ಪ್ರಕರಣದಲ್ಲಿ ಪೊಲೀಸರಿಗೆ ಇದೇ ರೀತಿ ಚಳ್ಳೆ ಹಣ್ಣು ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಕೊನೆಗೂ ಈ ಎಸ್ಕೇಪ್ ರಾಜನ ನಾಟಕಕ್ಕೆ ಮರುಳಾಗದೇ ಹೈಗ್ರೌಂಡ್ಸ್ ಪೊಲೀಸರು ಕೈಗೆ ಕೋಳ ಹಾಕಿ ಜೈಲಿಗೆ ಕಳುಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+