2011ರ ಕೆಪಿಎಸ್ ಸಿ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ
ರೇಣುಕಾಂಬಾ ಎಂಬುವರು ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ವಿಭಾಗೀಯ ಪೀಠದಿಂದ ನೇಮಕಾತಿಗೆ ತಡೆಯಾಜ್ಞೆ.
ಬೆಂಗಳೂರು, ಏಪ್ರಿಲ್ 5: ಕರ್ನಾಟಕ ಲೋಕಾ ಸೇವಾ ಆಯೋಗದಿಂದ 2011ರಲ್ಲಿ ಮಾಡಲಾಗಿದ್ದ 362 ಗೆಜೆಟೆಡ್ ಅಧಿಕಾರಿಗಳ ನೇಮಕಾತಿಗೆ ರಾಜ್ಯ ಹೈಕೋರ್ಟ್ ಬುಧವಾರ (ಏಪ್ರಿಲ್ 5) ತಡೆಯಾಜ್ಞೆ ನೀಡಿದೆ.
ಈ ನೇಮಕಾತಿಗಳಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ರೇಣುಕಾಂಬಾ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ವಿಭಾಗೀಯ ಪೀಠ ನೇಮಕಾತಿಗೆ ತಡೆಯಾಜ್ಞೆ ನೀಡಿತು.

2011ರಲ್ಲಿ ಕರ್ನಾಟಕ ಆಡಳಿತ ನ್ಯಾಯಾಧೀಕರಣ ಹಾಗೂ ರಾಜ್ಯ ಸರ್ಕಾರಗಳು 362 ಗೆಜೆಟೆಡ್ ಹುದ್ದೆಗಳ ಭರ್ತಿಗಾಗಿ ಆದೇಶ ನೀಡಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗವು ಪರೀಕ್ಷೆ ನಡೆಸಿತ್ತು.












Click it and Unblock the Notifications