ಸಾರಿಗೆ ಇಲಾಖೆಯ ನೂತನ ಸಹಾಯವಾಣಿ ಆರಂಭ!

ಬೆಂಗಳೂರು, ಫೆಬ್ರವರಿ 07 : ಆರ್ ಟಿ ಓ ಕಚೇರಿಯಲ್ಲಿ ಭ್ರಷ್ಟಾಚಾರ, ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡದಿರುವುದು, ಅಧಿಕಾರಿಗಳ ಬೇಜವಾಬ್ದಾರಿ ಮುಂತಾದ ದೂರು-ಸಲಹೆಗಳ ಸ್ವೀಕಾರಕ್ಕಾಗಿ ಸಾರಿಗೆ ಇಲಾಖೆ ನೂತನ ಸಹಾಯವಾಗಿ ಪ್ರಾರಂಭಿಸಿದೆ.

ಕಳೆದ ವರ್ಷ ಪ್ರಾಯೋಗಿಕವಾಗಿ ಸಹಾಯವಾಣಿ ಪ್ರಾರಂಭಿಸಲಾಗಿತ್ತು. ಇದು ಯಶಸ್ವಿಯಾದ್ದರಿಂದ ಶಾಶ್ವತ ಸಹಾಯವಾಣಿ ಆರಂಭಿಸಲಾಗಿದೆ. ಈ ಕೇಂದ್ರವು ಭಾನುವಾರ ಹಾಗೂ ಸಾರ್ವತ್ರಿಕ ರಜೆ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 9 ರಿಂದ 6 ರವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ.

ಜಾಲತಾಣ ಆಕ್ಟಿವ್: ಸಹಾಯವಾಣಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಇಲಾಖೆ ಇನ್ನುಮುಂದೆ ಆಕ್ಟಿವ್ ಆಗಿರಲಿದೆ. ವಾಟ್ಸ್ ಆ್ಯಪ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆಗಳನ್ನೂ ತೆರೆದಿದ್ದು, ಇವುಗಳ ಮೂಲಕವೂ ಸಾರ್ವಜನಿಕರು ಅಹವಾಲು ಸಲ್ಲಿಸಬಹುದು ಎಂದು ತಿಳಿಸಿದರು.

Helpline on Corruption in RTO

ಆರ್ ಟಿ ಓ ನೇಮಕಾತಿ: ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ 10 ಆರ್ ಟಿಓ ಅಧಿಕಾರಿಗಳ ನೇಮಕಾತಿ ನಡೆದಿದ್ದು, ತರಬೇತಿಯಲ್ಲಿದ್ದಾರೆ. 1998 , 2017ರಲ್ಲಿ ಆರ್ ಟಿ ಓ ನೇಮಕಾತಿ ನಡೆದಿದೆ. ಕೆಪಿಎಸ್ಸಿ ಮೂಲಕ 150 ಮೋಟಾರ್ ವೆಹಿಕಲ್ ಇನ್ ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಚೇರಿ ಸಿಬ್ಬಂದಿ ನೇಮಕಾತಿಯೂ ಶೀಘ್ರ ಆಗಲಿದೆ ಎಂದರು.
ಸಹಾಯವಾಣಿ ಸಂಖ್ಯೆ- 080 25136500 ವಾಟ್ಸ್ ಆ್ಯಪ್ ನಂಬರ್-9449863459

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+