ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧ
ಬೆಂಗಳೂರು, ಡಿಸೆಂಬರ್ 17: ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಎಲಿವೇಟೆಡ್ ಟೋಲ್ ವೇ ಲಿಮಿಟೆಡ್ ತಿಳಿಸಿದೆ.
ಸೋಮವಾರ ಸಂಜೆ 6 ಗಂಟೆಯ ಬಳಿಕ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತಿದೆ.
ಕಾರು, ದ್ವಿಚಕ್ರವಾಹನಗಳು ಸೇರಿದಂತೆ ಲಘು ವಾಹನಗಳ ಸಂಚಾರ ಎಂದಿನಂತೆ ಇರುತ್ತದೆ. ಮರಳು, ಸಿಮೆಂಟ್ ಲಾರಿಗಳು, ದೊಡ್ಡ ಟ್ರಕ್ ಸೇರಿದಂತೆ ಕೇವಲ ಬೃಹತ್ ವಾಹನಗಳು ಸಂಚರಿಸುವಂತಿಲ್ಲ.

ಮೇಲ್ಸೇತುವೆ ಮೇಲಿನ ರಸ್ತೆ ಮತ್ತು ಜಾಯಿಂಟ್‍ಗಳ ನಿರ್ವಹಣೆ ಹಾಗೂ ಪಾಟ್ ಹೋಲ್ಸ್ ನಿರ್ವಹಣೆಯ ನಡೆಯಲಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡ್‌ಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ, ಈ ಸೇತುವೆ ನಿರ್ಮಾಣವಾಗಿ ಇದೀಗ ಎಂಟು ವರ್ಷಗಳು ಕಳೆದಿದ್ದರಿಂದ ನಿರ್ವಹಣೆಗಾಗಿ ಭಾರಿ ಗಾತ್ರದ ವಾಹನಗಳಿಗೆ ತಡೆ ಹೇರಲಾಗಿದೆ.












Click it and Unblock the Notifications