ಏರ್‌ಪೋರ್ಟ್‌ ಫ್ಲೈಓವರ್ ಮೇಲೆ ವಾಹನಗಳ ನಿಷೇಧ?

ಬೆಂಗಳೂರು, ಜೂನ್ 4: ಏರ್‌ಪೋರ್ಟ್ ಫ್ಲೈಓವರ್ ಮೇಲೆ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸುವ ಕುರಿತು ಚರ್ಚೆ ನಡೆಯುತ್ತಿದೆ.

ಹೆದ್ದಾರಿ ಪ್ರಾಧಿಕಾರ, ಸಂಘಟನೆಗಳ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತಿದೆ. ಅಪಘಾತಗಳ ನಿಯಂತ್ರಣಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.

ಫ್ಲೈಓವರ್ ಮೇಲೆ ಲಾರಿ ಹಾಗೂ ಲಘು ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಫ್ಲೈಓವರ್ ಮೇಲೆ ದಿನನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ. ನಿಧಾನಗತಿಯಲ್ಲಿ ಸಾಗುವ ಮತ್ತು ಪಥ ಶಿಸ್ತು ಪಾಲಿಸದೆ ಅಡ್ಡಾದಿಡ್ಡಿಯಾಗಿ ಚಲಿಸುವ ಸರಕು ವಾಹನಗಳು ಅಪಘಾತಗಳಿಗೆ ಕಾರಣವಾಗುತ್ತವೆ ಎನ್ನಲಾಗಿದೆ.

Heavy Vehicle ban on Airport flyover?

ಫ್ಲೈಓವರ್ ಮೇಲೆ ಎಲ್ಲಾ ಮಾದರಿಯ ವಾಹನಗಳಿಗೆ 80 ಕಿ.ಮೀ ವೇಗಮಿತಿ ಇದೆ. ನಿಧಾನಗತಿಯ, ಸರಕು ವಾಹನಗಳು ರಸ್ತೆಯ ಎಡ ಭಾಗದಲ್ಲೇ ಸಂಚರಿಸಬೇಕು ಆದರೆ ಸಾಕಷ್ಟು ವಾಹನಗಳು ಶಿಸ್ತು ಪಾಲಿಸದಿರುವುದು ಗಮನಕ್ಕೆ ಬಂದಿದೆ.

ಗಂಭೀರ ಸ್ವರೂಪದ ಅಪಘಾತಗಳು ರಾತ್ರಿ ಹೊತ್ತಿನಲ್ಲಿ ಸಂಭವಿಸುತ್ತವೆ. ಕಾರು, ಬಸ್ ಮುಂಗಾತ ಲಘು ವಾಹನಗಳು ವೇಗವಾಗಿ ಸಂಚರಿಸುವ ಕಾರಣ ರಾತ್ರಿ ವೇಳೆ ಸೂಕ್ತ ಪ್ರತಿಫಲನ ಲೈಟ್ ಇಲ್ಲದೆ ಲಾರಿಗಳು ಕಾಣಿಸುವುದಿಲ್ಲ, ಹೀಗಾಗಿ ಅಂತಹ ವಾಹನಗಳಿಗೆ ವೇಗದ ವಾಹನಗಳು ಡಿಕ್ಕಿ ಹೊಡೆಯುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+