ಜಾಹೀರಾತು ಫಲಕ ತೆರವು ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು, ಸೆಪ್ಟೆಂಬರ್ 17: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ವರ್ಷ ಫ್ಲೆಕ್ಸ್, ಬ್ಯಾನರ್ ಗಳನ್ನು ನಿಷೇಧಿಸಿರುವ ಬಿಬಿಎಂಪಿ ನಿರ್ಣಯಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಜಾಹೀರಾತು ಫಲಕಗಳನ್ನು ನೇತುಹಾಕುವ ರಚನೆಗಳ ತೆರವಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳು, ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಗಳು ರಾರಾಜಿಸುತ್ತಿದ್ದವು ಹಾಗಾಗಿ ಹೋಟೆಲ್, ಮದುವೆ ಮಂಟಪಗಳು, ದೇವಸ್ಥಾನ, ಮಾಲ್ ಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ನಿಷೇಧಿಸಿ ಬಿಬಿಎಂಪಿ ಸುತ್ತೋಲೆ ಹೊರಡಿಸಿತ್ತು.
ಒಂದೊಮ್ಮೆ ಅನಧಿಕೃತವಾಗಿ ಫಲಕಗಳನ್ನು ಅಳವಿಡಿಸದರೆ 1 ಲಕ್ಷ ರೂ ದಂಡವನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿತ್ತು, ಇದೀಗ ಆ ಜಾಹೀರಾತುಗಳನ್ನು ನೇತುಹಾಕಲು ಬಳಸುವ ಸ್ಟ್ರಕ್ಚರ್ ಗಳ ತೆರವಿಗೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು, ಆ ಅರ್ಜಿಯನ್ನು ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ಡಿಜಿಟಲ್ ಜಹೀರಾತು ಫಲಕಗಳಿರುವಾಗ ಅಷ್ಟು ದೊಡ್ಡ ಜಾಹೀರಾತು ಫಲಕಗಳ ಅವಶ್ಯಕತೆ ಇದೆಯೇ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ. ಬಿಬಿಎಂಪಿ ಕ್ರಮ ಸೂಕ್ತವಾಗಿದೆ ಎಂದು ಮೌಖಿಕ ಅಭಿಪ್ರಾಯಪಟ್ಟಿದೆ.
ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ, ಈ ಹಂತದಲ್ಲಿ ಅರ್ಜಿ ವಿಚಾರಣೆ ಅಗತ್ಯವಿದೆಯೇ ಎಂದು ಜಾಹಿರಾತು ಕಂಪನಿಗಳ ಪರ ವಕೀಲರನ್ನು ಪ್ರಶ್ನಿಸಿ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿತು.












Click it and Unblock the Notifications