ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರವೇ ಪ್ರೀಪೇಯ್ಡ್ ಕೌಂಟರ್

ಬೆಂಗಳೂರು, ನವೆಂಬರ್ 29 : ನಗರದಲ್ಲಿ ಕ್ಯಾಬ್ ಹಾಗೂ ಮೆಟ್ರೋ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇದರಿಂದಾಗಿ ಆಟೋ ಚಾಲಕರಿಗೆ ನಷ್ಟ ಉಂಟಾಗಿದ್ದು ಮೆಟ್ರೋ ನಿಲ್ದಾಣಗಳಲ್ಲಿ ಪ್ರೀಪೇಯ್ಟ್ ಕೌಂಟರ್ ಗಳನ್ನು ತೆರೆಯುವಂತೆ ನಗರ ಸಂಚಾರ ಪೊಲೀಸರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಪ್ರೀಪೇಯ್ಡ್ ಕೌಂಟರ್ ತೆರೆಯಲು ಅವಕಾಶ ಮಾಡಿಕೊಡುವಂತೆ ಸಂಚಾರ ಪೊಲೀಸರು ಬಿಎಂಆರ್ ಸಿಎಲ್ ಗೆ ಮನವಿ ಮಾಡಿದ್ದಾರೆ. ಈಗಾಗಲೇ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಈಗಾಗಲೇ ಪ್ರೀಪೇಯ್ಡ್ ಕೌಂಟರ್ ಆರಂಭಿಸಲಾಗಿದ್ದು ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಶೀಘ್ರದಲ್ಲಿ ಕೌಂಟರ್ ತೆರೆಯಲಾಗುತ್ತದೆ ಎಂದು ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ ಆರ್. ಹಿತೇಂದ್ರ ಹೇಳಿದ್ದಾರೆ.

ಮೆಟ್ರೋ ನಿಲ್ದಾಣಗಳಲ್ಲಿ ಪ್ರೀಪೇಯ್ಡ್ ಕೌಂಟರ್ ತೆರೆಯಲು ಈಗಾಗಲೇ ಆಟೋ ರಿಕ್ಷಾ ಚಾಲಕರ ಸಂಘದಿಂದ ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ಇದರಿಂದಾಗಿ ಚಾಲಕರಿಗೆ ಉತ್ತಮ ವೇತನ ಹಾಗೂ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಪ್ರಯಾಣಿಸಬಹುದಾಗಿದೆ.

Have Prepaid counters at all Metro stations

ಹೆಚ್ಚು ದೂರ ಪ್ರಯಾಣಿಸುವವರು ಓಲಾ, ಊಬರ್ ಹೀಗೆ ಮೊಬೈಲ್ ಅಪ್ಲಿಕೇಷನ್ ಬಳಕೆ ಮಾಡಿ ಪ್ರಯಾಣ ಮಾಡುತ್ತಾರೆ. ಆದರೆ ಅರ್ಥ ಅಥವಾ ಒಂದು ಕಿ.ಮೀ ವ್ಯಾಪ್ತಿಗೆ ತೆರಳುವವರು ಬಸ್ ಗಳಲ್ಲಿ ಪ್ರಯಾಣ ಮಾಡಬೇಕಿದೆ. ಅಂಥವರಿಗೆ ಆಟೋ ಅನುಕೂಲವಾಗಲಿದೆ.

ನಗರದಲ್ಲಿರುವ ಮೆಟ್ರೋ ನಿಲ್ದಾಣ, ಮಾಲ್ ಗಳು ಸೇರಿ ಒಟ್ಟು 58 ಜಾಗಗಳನ್ನು ಗುರುತಿಸಿ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಆದರ್ಶ ಆಟೋ ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿ ಸಿ. ಸಂಪತ್ ತಿಳಿಸಿದ್ದಾರೆ.

ಓಲಾ, ಊಬರ್ಗಳಲ್ಲಿ ಶೇರ್ ಮಾಡಿ ತೆರಳಲು ಅವಕಾಶ ನೀಡಿದ ಮೇಲೆ ಆಟೋದಲ್ಲಿ ಸಂಚರಿಸಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಆಟೋದಲ್ಲಿ ಈ ಅವಕಾಶವನ್ನು ನೀಡಿದರೂ ಕೂಡ ಕಾರುಗಳಲ್ಲಿ ಆರಾಮಾಗಿ ಕುಳಿತು ಪ್ರಯಾಣಿಸಬಹುದು ಎಂದು ಕ್ಯಾಬ್ ಗಳಲ್ಲಿ ತೆರಳುತ್ತಿದ್ದಾರೆ.

೨೦೧೩ರಲ್ಲಿ ಸಾರಿಗೆ ಇಲಾಖೆ ಮೊದಲ 1.9 ಕಿ.ಮೀಗೆ 25 ಹಾಗೂ ನಂತರದ ಕಿ.ಮೀಗೆ 13 ರೂನಂತೆ ನಿಗದಿ ಮಾಡಿತ್ತು. ಅದಾದ ನಂತರ ಆಟೋ ಚಾಲಕರ ಸಂಘಗಳು ಒತ್ತಾಯದ ಮೇರೆಗೆ ಮೊದಲ 2 ಕಿ.ಮೀಗೆ 30 ರೂ ಹಾಗೂ ನಂತರದ ಪ್ರತಿ ಕಿ.ಮೀಗೆ 17 ರೂ. ನಿಗದಿಪಡಿಸಿತ್ತು. ಆದರೆ ಕ್ಯಾಬ್ ಸೇವೆಗಳಲ್ಲಿ ಪ್ರತಿ ಕಿ.ಮೀ ಗೆ 8 ರಿಂದ 12 ರೂ. ಇರುವುದರಿಂದ ಹೆಚ್ಚಿನ ಜನರು ಕ್ಯಾಬ್ ಗಳ ಸೇವೆಯನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+