Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಜೊತೆ HAL ಪುನಾರಂಭ ಚರ್ಚೆ: ಡಬಲ್ ಗುಡ್‌ನ್ಯೂಸ್!
Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚರ್ಚೆ ನಡೆಯುತ್ತಿರುವಾಗಲೇ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣ ಪುನರಾರಂಭದ ಬಗ್ಗೆಯೂ ಚರ್ಚೆ ಶುರುವಾಗಿದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಕೇಂದ್ರ ತಂಡವು ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗಿರುವ ಪ್ರದೇಶಗಳಲ್ಲಿ ಅಧ್ಯಾಯನ ಮಾಡಿದ್ದರೂ ಇಲ್ಲಿಯ ವರೆಗೆ ವರದಿ ನೀಡಿಲ್ಲ. ಆದರೆ, ಕರ್ನಾಟಕದಿಂದ ಒತ್ತಡ ಹಾಕಲಾಗುತ್ತಿದೆ. ಇದರ ನಡುವೆ ಇದೀಗ ಎಚ್‌ಎಎಲ್ ವಿಮಾನ ನಿಲ್ದಾಣವೂ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆದಿದೆ.
ಬೆಂಗಳೂರಿಗೆ ಮೊದಲ ವಿಮಾನ ನಿಲ್ದಾಣ ಅಂದರೆ ಕೆಂಪೇಗೌಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ದೇವನಹಳ್ಳಿ) ಪ್ರಾರಂಭವಾಗುವುದಕ್ಕೂ ಮುಂಚೆ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿತ್ತು. ಆದರೆ 2008ರ ನಂತರ ಇದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆ ನಡೆದಿರುವಾಗ ಎಚ್‌ಎಎಲ್ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಎಚ್‌ಎಎಲ್ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ಪುನರಾರಂಭ ಮಾಡುವುದರಿಂದ ಯಾವುದೇ ಲಾಭವಾಗುವ ಸಾಧ್ಯತೆ ಕಡಿಮೆ ಅಂತಲೂ ಹೇಳಲಾಗುತ್ತಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿಮಾನ ನಿಲ್ದಾಣವನ್ನು ಪುನಾರಂಭ ಮಾಡಬೇಕು ಎನ್ನುವ ಒತ್ತಡ ಹೆಚ್ಚಾಗಿದೆ. ಈ ವಿಮಾನ ನಿಲ್ದಾಣವನ್ನು ಪುನಾರಂಭ ಮಾಡಬೇಕು ಎಂದು ಹಲವಾರು ಹೂಡಿಕೆದಾರರು (ಪಾಲುದಾರ ಸಂಸ್ಥೆಗಳು) ಮುಂದೆ ಬಂದಿವೆ. ಆದರೆ, ರಕ್ಷಣಾ PSU ವಾಣಿಜ್ಯ ಕಾರ್ಯಾಚರಣೆಗಳಿಗಾಗಿ ವಿಮಾನ ನಿಲ್ದಾಣವನ್ನು ಪುನರಾರಂಭಿಸುವುದರಿಂದ ಆದಾಯದ ದೃಷ್ಟಿಕೋನದಿಂದ ಅದು ಲಾಭದಾಯಕವಾಗುವ ಸಾಧ್ಯತೆ ಇಲ್ಲ ಎಂದು HAL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಸುನಿಲ್ ಅವರು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಎಚ್‌ಎಎಲ್ ಸಹ ಪುನರಾರಂಭವಾದರೆ ಭರ್ಜರಿ ಲಾಭವಾಗಲಿದೆ. ವಿದೇಶಗಳಲ್ಲಿ ಒಂದೊಂದು ನಗರಕ್ಕೂ ಎರಡು ಮೂರು ವಿಮಾನ ನಿಲ್ದಾಣಗಳಿವೆ. ಅದೇ ರೀತಿ ಬೆಂಗಳೂರಿನಲ್ಲೂ ಎರಡರಿಂದ ಮೂರು ವಿಮಾನ ನಿಲ್ದಾಣಗಳು ಇದ್ದರೆ ಲಾಭವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಸಂಸದ ತೇಜಸ್ವಿ ಸೂರ್ಯ ಅವರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಇದು ಲಾಭದಾಯಕವಲ್ಲ ಎಂದು ಹೇಳಲಾಗುತ್ತಿದೆ. ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯಾದ ನಂತರ 2008ರಲ್ಲಿ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ನಿಲ್ಲಿಸುವವರೆಗೆ HAL ವಿಮಾನ ನಿಲ್ದಾಣವು ದಶಕಗಳ ಕಾಲ ಬೆಂಗಳೂರಿನ ಪ್ರಾಥಮಿಕ ವಿಮಾನ ನಿಲ್ದಾಣವಾಗಿ ಬಳಸಲಾಗುತ್ತಿತ್ತು.
ಇನ್ನು ವಾಣಿಜ್ಯ ಕಾರ್ಯಾಚರಣೆಗಳನ್ನು ನಿಲ್ಲಿಸುವ ಮೊದಲು ವಿಮಾನ ನಿಲ್ದಾಣವನ್ನು HAL ತಯಾರಿಸಿದ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳೆರಡರಲ್ಲೂ ಮಿಲಿಟರಿ ವಿಮಾನಗಳ ಪರೀಕ್ಷೆಗೆ ಸಹ ಬಳಸಲಾಗುತ್ತಿತ್ತು. ವಿಮಾನ ನಿಲ್ದಾಣದಲ್ಲಿ ಹಾರಾಟ ಪರೀಕ್ಷೆ ಮುಂದುವರೆದಿದ್ದು, 2008 ರಿಂದ ಗಮನಾರ್ಹವಾಗಿ ಹೆಚ್ಚಾಗಿದೆ.
ದೆಹಲಿಯಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣ ಪುನರಾರಂಭದ ಬಗ್ಗೆ ಕೆಲವೊಂದು ಮಹತ್ವದ ಚರ್ಚೆಗಳು ನಡೆದಿವೆ ಎನ್ನುವುದನ್ನು ಅವರು ಖಚಿತಪಡಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) 2033 ರವರೆಗೆ ಈ ಒಪ್ಪಂದವನ್ನು ಹೊಂದಿದೆ. ಹೀಗಾಗಿ, ಅವರು ವಿಮಾನ ಹಾರಾಟಕ್ಕೆ ಒಪ್ಪದ ಹೊರತು ನಿಜವಾಗಿಯೂ ಯಾವುದೇ ಮಾರ್ಗವಿಲ್ಲ ಎಂದು ಡಾ. ಸುನಿಲ್ ಹೇಳಿದ್ದಾರೆ. ಒಟ್ಟಾರೆ ಎಚ್‌ಎಎಲ್ ಪುನಾರಂಭದ ಬಗ್ಗೆ ಈಗ ಪರಿಸ್ಥಿತಿ 50 - 50 ಇದೆ ಇದು ಮತ್ತೆ ಪ್ರಾರಂಭವಾದರೆ ಬೆಂಗಳೂರಿಗೆ ಭರ್ಜರಿ ಲಾಭವೇ ಆಗಲಿದೆ.












Click it and Unblock the Notifications