ಹಸೆ ಮಣೆ ಏರಬೇಕಿದ್ದ ಜಿಮ್ ಇನ್‌ಸ್ಟ್ರಕ್ಟರ್ ಅತ್ಯಾಚಾರ ಆರೋಪ ಹೊತ್ತು ಜೈಲಿಗೆ

ಬೆಂಗಳೂರು, ಮೇ 10: ಮದುವೆ ಫಿಕ್ಸ್ ಆಗಿದೆ, ಆಮಂತ್ರಣ ಹಂಚಿಯೂ ಆಗಿದೆ, ವಧು,ವರರಿಬ್ಬರು ಮುಂದಿನ ಜೀವನದ ಕನಸು ಕಾಣುತ್ತಿರುವ ಹೊತ್ತಿನಲ್ಲಿ ವರನನ್ನು ಪೊಲೀಸರು ಬಂಧಿಸಿದ್ದಾರೆ.

ಗೌತಮ್(31) ದೊಡ್ಡ ಬಳ್ಳಾಪುರದ ಕೋರ್ಟ್‌ ರೋಡ್ ನಿವಾಸಿಯಾಗಿದ್ದಾರೆ. ಅವರ ವಿರುದ್ಧ ಅತ್ಯಾಚಾರ, ಮೋಸ ಆರೋಪದಡಿ ಅವನನ್ನು ಪೊಲೀಸರು ಬಂಧಿಸಿದ್ದಾರೆ.

ದೂರುದಾರ ಯುವತಿ ದೊಡ್ಡಬಳ್ಳಾಪುರದಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಆಕೆಯೇ ಮನೆಯಲ್ಲಿ ಎಲ್ಲರಿಗಿಂತ ಕಿರಿಯವಳಾಗಿದ್ದಾಳೆ. ಆಕೆ ಗೌತಮ್ ಅವರ ಬುಲೆಟ್‌ ಜಿಮ್‌ಗೆ 2018ರಲ್ಲಿ ಸೇರಿಕೊಂಡಿದ್ದಾಳೆ. ನಂತರ ಆಕೆಯ ನಂಬರ್ ಪಡೆದು ಆಕೆಯ ಜೊತೆ ಸ್ನೇಹ ಬೆಳೆಸಿದ್ದ, ಏಪ್ರಿಲ್ ತಿಂಗಳಿನಲ್ಲಿ ಆಕೆಗೆ ಮೊದಲೇ ಮದುವೆಯಾಗಿತ್ತು. ಆಕೆಯ ಕಳೆದ ಒಂದು ವರ್ಷದ ಹಿಂದೆ ಗಂಡನನ್ನು ಬಿಟ್ಟಿರುವ ಸುದ್ದಿ ತಿಳಿಸಿದ್ದಾಳೆ.

Gym instructor held for raping student

ಅದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಗೌತಮ್ ಮದುವೆಯಾಗುವುದಾಗಿ ನಂಬಿಸಿ ಜಿಮ್‌ನೊಳಗೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಆಕೆಯ ಯಾವಾಗ ಗರ್ಭಿಣಿ ಎಂದು ತಿಳಿಯಿತೋ ಗರ್ಭಪಾತ ಮಾಡಿಸಲು ಮುಂದಾಗಿದ್ದ. ಮದುವೆಯ ಬಳಿಕ ಮಕ್ಕಳನ್ನು ಮಾಡಿಕೊಳ್ಳೋಣ ಎಂದು ನಂಬಿಸಿದ್ದ.

ಬಳಿಕ ಗೌತಮ್ ತಂದೆಯ ಬಳಿ ಆಕೆ ಮಾತನಾಡಿದ್ದಳು. ಆದರೆ ತಂದೆ ಈ ಮದುವೆಗೆ ಒಪ್ಪಿರಲಿಲ್ಲ. ಆಕೆಯನ್ನು ಪರಿಚಯಸ್ಥರ ಮನೆಯಲ್ಲಿ ಇರಿಸಿದ್ದ,ಅಲ್ಲಿಯೂ ಹೋಗಿ ಮತ್ತೆ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದ.

ಮತ್ತೆ ಆಕೆ ಗರ್ಭಿಣಿ ಎಂದು ತಿಳಿದಾಗ ಆಕೆಯಿಂದ ದೂರ ಇರಲು ಪ್ರಾರಂಭಿಸಿದ್ದ. ಮೇ 8ರಂದು ಬೇರೆ ಹುಡುಗಿ ಜೊತೆಗೆ ಮದುವೆ ನಿಶ್ಚಯವಾಗಿತ್ತು, ಆತ ತನಗೆ ಮೋಸ ಮಾಡುತ್ತಿದ್ದಾನೆ ಎಂದು ತಿಳಿದಾಗ ಆಕೆ ದೂರು ನೀಡಿ ಗೌತಮ್‌ನನ್ನು ಜೈಲಿಗೆ ಕಳುಹಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+