ರೆಸಾರ್ಟ್ ನಲ್ಲಿ ಗುಜರಾತಿನ ಶಾಸಕರಿಗೆ ವಾಂತಿ ಬೇಧಿ
ಬೆಂಗಳೂರು, ಆಗಸ್ಟ್ 2: ನಗರದ ಬಿಡದಿಯ 'ಈಗಲ್ಟನ್ - ದಿ ಗಾಲ್ಫ್ ವಿಲೇಜ್' ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಕಾಂಗ್ರೆಸ್ ನ ಕೆಲ ಶಾಸಕರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆಹಾರ ವ್ಯತ್ಯಾಸದಿಂದ ಕೆಲ ಶಾಸಕರು ವಾಂತಿ ಬೇಧಿಗೆ ತುತ್ತಾಗಿದ್ದಾರೆ.
'ಬಂಗಾರದ ಪಂಜರ'ದಂಥ ರೆಸಾರ್ಟ್‌ನಲ್ಲಿರುವ ಶಾಸಕರಿಗೆ ಮೊದಲ ಕೆಲವು ದಿನ ಸ್ಥಳೀಯ ಆಹಾರಗಳನ್ನು ನೀಡಲಾಗಿತ್ತು. ಗುಜರಾತ್ ಶೈಲಿಯ ತಿನಿಸು ತಿನ್ನುತ್ತಿದ್ದ ಶಾಸಕರಿಗೆ ಈ ಆಹಾರ ಒಗ್ಗದ ಕಾರಣ ವಾಂತಿ ಬೇಧಿಗೆ ಗುರಿಯಾಗಿದ್ದಾರೆ.

ಸುಮಾರು 4-5 ಶಾಸಕರು ವಾಂತಿ ಬೇಧಿಗೆ ತುತ್ತಾಗಿದ್ದು, ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ಆದರೆ ಸುದ್ದಿಯನ್ನು ತಳ್ಳಿ ಹಾಕಿರುವ ಆತಿಥ್ಯದ ಉಸ್ತುವಾರಿ ಹೊತ್ತಿರುವ ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ ಹಾಗೂ ಎಸ್. ರವಿ, "ಶಾಸಕರಿಗೆ ಗುಜರಾತಿ ಶೈಲಿಯ ಖಾದ್ಯಗಳನ್ನೇ ನೀಡಲಾಗುತ್ತಿದೆ. ಹೀಗಾಗಿ ಯಾರಿಗೂ ಆರೋಗ್ಯ ಸಮಸ್ಯೆ ಆಗಿಲ್ಲ," ಎಂದು ಪ್ರಜಾವಾಣಿಗೆ ತಿಳಿಸಿದ್ದಾರೆ.












Click it and Unblock the Notifications