ಗೃಹಜ್ಯೋತಿ ಫಲಾನುಭವಿಗಳಿಗೆ ಬೆಸ್ಕಾಂ ಅಪ್ಡೇಟ್ಸ್: ಜುಲೈನಲ್ಲಿ ಮೀಟರ್ ರೀಡಿಂಗ್ ಇಲ್ಲ, 3 ತಿಂಗಳ ಬಿಲ್ ಪಾವತಿಸಬೇಕು!
Gruha Jyothi Scheme: ಕರ್ನಾಟಕ ಸರ್ಕಾರವು ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಗೆ ಮುಂದಾಗಿದ್ದು, ಇದರ ನಡುವೆ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಮತ್ತೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಮೂರು ವರ್ಷಗಳ ನಂತರ ಗೃಹಜ್ಯೋತಿ ಯೋಜನೆಯ ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗಿದೆ. ಜುಲೈ 1ರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಉಚಿತ ವಿದ್ಯುತ್ ಯೋಜನೆಯ ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ಇದೀಗ ಬೆಂಗಳೂರಿನ ಗ್ರಾಹಕರಿಗೆ ಬೆಸ್ಕಾಂ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರವು ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಈಗಾಗಲೇ ಕರ್ನಾಟಕದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಾರಂಭವಾಗಿದೆ. ಇದರೊಂದಿಗೆ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯೂ ನಡೆಯುವ ಸಾಧ್ಯತೆ ಇದೆ. ಉಚಿತ ವಿದ್ಯುತ್ ಯೋಜನೆಯಾಗಿರುವ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆದಿದೆ. ಇದೀಗ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ಮಹತ್ವದ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ.

Gruha Jyothi Scheme: ಬೆಂಗಳೂರಲ್ಲಿ ಜುಲೈನಲ್ಲಿ ಮೀಟರ್ ರೀಡಿಂಗ್ ಇಲ್ಲ
ಇನ್ನು ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಯ ಸಂದರ್ಭದಲ್ಲಿಯೇ ಬೆಂಗಳೂರಲ್ಲಿ ಜುಲೈನಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ತಿಳಿಸಿದೆ. ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ - ಮನೆ ಪರಿಶೀಲನಾ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್‌ಗಳನ್ನು ನಿಯೋಜಿಸಿರುವುದರಿಂದ 2026ರ ಜುಲೈ ತಿಂಗಳಲ್ಲಿ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಮುಂದುವರಿದು ಬದಲಾಗಿ, ಗ್ರಾಹಕರಿಗೆ ಸರಾಸರಿ ಬಿಲ್ ನೀಡಲಾಗುವುದು. ಕಳೆದ 3 ತಿಂಗಳ ನಿಮ್ಮ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ ತಿಂಗಳ ಬಿಲ್ ಸಿದ್ಧಪಡಿಸಲಾಗುವುದು ಎಂದು ಹೇಳಲಾಗಿದೆ. ಈ ನಿಯಮ ಎಚ್.ಟಿ ಗ್ರಾಹಕರು, 40 ಎಚ್.ಪಿ ಹಾಗೂ ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್.ಟಿ ಗ್ರಾಹಕರು, ಸೋಲಾರ್ ರೂಫ್‌ಟಾಪ್ (SRTPV) ಗ್ರಾಹಕರು ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವವರಿಗೆ ಅನ್ವಯಿಸುವುದಿಲ್ಲ. ಅವರಿಗೆ ಎಂದಿನಂತೆ ಮೀಟರ್ ರೀಡಿಂಗ್ ಮಾಡಲಾಗುವುದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಇದೊಂದು ಸ್ಕ್ಯಾಮ್ ಎಂದ ಗ್ರಾಹಕರು
ಇನ್ನು ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಈಗ ಪರಿಶೀಲನೆ ಮಾಡುತ್ತಿರುವುದು ಹಾಗೂ ಹೊಸದಾಗಿ ದಾಖಲೆಗಳ ಸಲ್ಲಿಕೆ ವಿಚಾರವು ನಿರ್ದಿಷ್ಟವಾಗಿ ಈ ಮೂರು ತಿಂಗಳಲ್ಲೇ ಪ್ರಾರಂಭಿಸಿರುವ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೇಸಿಗೆ ಅವಧಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಿದ್ದರಿಂದ ಜನರು ಹೆಚ್ಚು ಯೂನಿಟ್‌ಗಳನ್ನು ಬಳಸಿದ್ದರು. ಈಗ ಮಳೆಗಾಲ ಆರಂಭವಾಗಿರುವುದರಿಂದ ಜುಲೈನಲ್ಲಿ ಸಹಜವಾಗಿಯೇ ವಿದ್ಯುತ್ ಬಳಕೆ ಕಡಿಮೆಯಾಗಲಿದೆ. ಆದರೆ ಈ ಲಾಭ ಗ್ರಾಹಕರಿಗೆ ಸಿಗದಂತೆ ಮಾಡಲು ಕಳೆದ ಮೂರು ತಿಂಗಳ ಸರಾಸರಿ ಬಳಕೆಯನ್ನು ಆಧಾರವಾಗಿಟ್ಟುಕೊಳ್ಳುವ ಯೋಜನೆ ರೂಪಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.














Click it and Unblock the Notifications