ಬೆಂಗಳೂರಿಗರಿಗೆ ಭರ್ಜರಿ ಗುಡ್‌ನ್ಯೂಸ್: 13 ಆಶಾಕಿರಣ ದೃಷ್ಟಿ ಕೇಂದ್ರ, ಏನಿದು ಯೋಜನೆ ಇಲ್ಲಿದೆ ಮಾಹಿತಿ!
ಬೆಂಗಳೂರಿನ ಜನರಿಗೆ ಕಣ್ಣಿನ ಆರೋಗ್ಯದ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಲಾಗಿದೆ. ಬೆಂಗಳೂರಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮಹತ್ವದ ಯೋಜನೆ ಇದಾಗಿದೆ. ಕರ್ನಾಟಕದಾದ್ಯಂತ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಆಶಾಕಿರಣ ದೃಷ್ಟಿ ಕೇಂದ್ರ ಯೋಜನೆಯನ್ನು ಪರಿಚಯಿಸಿದೆ. ಅಶಾಕಿರಣ ಕಾರ್ಯಕ್ರಮ ಸಿ.ಎಸ್.ಆರ್ ಸಂಸ್ಥೆ ಅವರ ಸಹಯೋಗದೊಂದಿಗೆ - ಆಶಾಕಿರಣ ಕಾರ್ಯಕ್ರಮದಡಿಯಲ್ಲಿ, ಒಟ್ಟು 13 ಅಶಾಕಿರಣ ದೃಷ್ಟಿ ಕೇಂದ್ರಗಳು ವಿವಿಧ ಸಿ.ಎಸ್.ಆರ್ ಪಾಲುದಾರರ ಸಹಭಾಗಿತ್ವದಲ್ಲಿ ಮಾಡಲಾಗಿದೆ. ಈ ಕೇಂದ್ರಗಳು ನಮ್ಮ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 393 ನಿಗದಿತ ಅಶಾಕಿರಣ ದೃಷ್ಟಿ ಕೇಂದ್ರಗಳ ಭಾಗವಾಗಿವೆ ಎಂದು ಹೇಳಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಅಂಧತ್ವ ಹಾಗೂ ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮ ಹಾಗೂ ಸೈಟ್ ಸೇವರ್ ಸ್ವಯಂ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರಿನ ಗೋವಿಂದರಾಜನಗರ ಎಂ.ಸಿ. ಲೇಔಟ್‌ನ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಡಿದ್ದ "ಆಶಾಕಿರಣ ದೃಷ್ಟಿ ಕೇಂದ್ರ" ವನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹಾಗೂ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 11 ಆಶಾಕಿರಣ ದೃಷ್ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ಇದರಲ್ಲಿ 5 ಕೇಂದ್ರಗಳು ಸಿ.ಎಸ್.ಆರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮಾನವ ಸಂಪನ್ಮೂಲ, ಉಪಕರಣಗಳು ಹಾಗೂ ಕನ್ನಡಕ ವಿತರಣೆಗಳ ಸೇವೆಗಳನ್ನು ನೀಡಲು ಒಪ್ಪಿದ್ದಾರೆ. ಸಿ.ಎಸ್.ಆರ್ ಪ್ರಾಯೋಜಿತ ಕೇಂದ್ರಗಳು ಮಾನವ ಸಂಪತ್ತು, ಉಪಕರಣಗಳು ಮತ್ತು ಉಚಿತ ಕನ್ನಡಕಗಳನ್ನು ಒದಗಿಸಲಾಗುತ್ತಿದೆ. ಅಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ಮೂಲಸೌಕರ್ಯ ಮತ್ತು ಸಂಪನ್ಮೂಲಗಳನ್ನು ವೃದ್ಧಿಸುವ ಮೂಲಕ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಕರ್ನಾಟಕ ಸರ್ಕಾರದ ಆಶಾಕಿರಣ ಯೋಜನೆಯು ದೃಷ್ಟಿ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿ ಪ್ರಮುಖ ಹೆಜ್ಜೆ ಇರಿಸಲಾಗಿದೆ. ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಿರುವ, ಶಾಶ್ವತ ಆಶಾಕಿರಣ ದೃಷ್ಟಿ ಕೇಂದ್ರಗಳ ಮೂಲಕ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ದೃಷ್ಟಿ ದೋಷವಿರುವವರಿಗೆ ಉಚಿತ ಕನ್ನಡಕ ವಿತರಣೆ ಹಾಗು ಕಣ್ಣಿನ ಸೇವೆಗಳನ್ನು ನೀಡುವುದಾಗಿದೆ ಎಂದು ಹೇಳಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 11 ಆಶಾಕಿರಣ ದೃಷ್ಟಿ ಕೇಂದ್ರಗಳ ವಿವರ:
* ಜೆ.ಜೆ.ಆರ್ ನಗರ ಸಾರ್ವಜನಿಕ ಆಸ್ಪತ್ರೆ
* ಹಲಸೂರು ಹೆರಿಗೆ ಆಸ್ಪತ್ರೆ
* ಹೆಚ್. ಸಿದ್ದಯ್ಯ ರಸ್ತೆ ಹೆರಿಗೆ ಆಸ್ಪತ್ರೆ
* ಹೊಸಹಳ್ಳಿ ಹೆರಿಗೆ ಆಸ್ಪತ್ರೆ
* ಆರ್.ಸಿ ಪುರ ಹೆರಿಗೆ ಆಸ್ಪತ್ರೆ
* ಬನಶಂಕರಿ ಹೆರಿಗೆ ಆಸ್ಪತ್ರೆ
* ಗೌರಿ ಪಾಳ್ಯ ಹೆರಿಗೆ ಆಸ್ಪತ್ರೆ
* ರಾಂಪುರ ಆಸ್ಪತ್ರೆ
* ಇಂದಿರಾನಗರ ಸಾರ್ವಜನಿಕ ಆಸ್ಪತ್ರೆ
* ಜಯನಗರ ಸಾರ್ವಜನಿಕ ಆಸ್ಪತ್ರೆ
* ಕೆಸಿ ಜನರಲ್ ಆಸ್ಪತ್ರೆ, ಮಲ್ಲೇಶ್ವರಂ












Click it and Unblock the Notifications