ನವೆಂಬರ್ ಅಂತ್ಯಕ್ಕೆ ವೈಟ್‌ಫೀಲ್ಡ್‌ನ ಗ್ರಾಫೈಟ್ ಕಂಪನಿಗೆ ಬೀಗ
ಬೆಂಗಳೂರು, ಅಕ್ಟೋಬರ್ 24: ವೈಟ್‌ಫೀಲ್ಡ್ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಕಪ್ಪು ಹೊಗೆ ಸೂಸುವ ಗ್ರಾಫೈಟ್ ಕಂಪನಿ ವಿರುದ್ಧ ಸ್ಥಳೀಯ ನಿವಾಸಿಗಳು ಹಲವು ವರ್ಷಗಳಿಂದ ನಡೆಸಿರುವ ಹೋರಾಟಕ್ಕೆ ಕೊನೆಗೂ ಜಯ ದೊರೆಕುವ ಲಕ್ಷಣಗಳು ಗೋಚರಿಸಿವೆ.
ನವೆಂಬರ್ ಅಂತ್ಯಕ್ಕೆ ಗ್ರಾಫೈಟ್ ಇಂಡಿಯಾ ಘಟಕ ಬೀಗ ಹಾಕಲಿದೆ ಎಂದು ವಕೀಲರು ಸುಪ್ರೀಂಕೋರ್ಟ್ ಎದುರು ಹೇಳಿಕೆ ನೀಡಿದ್ದಾರೆ. ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಬೆಂಗಳೂರಿನ ಪರಿಸರವನ್ನು ಗ್ರಾಫೈಟ್ ಇಂಡಿಯಾ ಕಂಪನಿ ಸಾಕಷ್ಟು ಹಾಳುಮಾಡಿದೆ.
ಈ ವೇಳೆ ಗ್ರಾಫೈಟ್ ಇಂಡಿಯಾ ಪರ ವಕೀಲರು ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ನವೆಂಬರ್ ತಿಂಗಳಲ್ಲಿ ಮುಚ್ಚಲಾಗುತ್ತಿದೆ ಎಂದರು ಆದರೆ ಇದಕ್ಕೆ ಸಮಾಧಾನಗೊಳ್ಳದ ಸುಪ್ರೀಂ, ನೀವು ಘಟವನ್ನೇನೋ ಮುಚ್ಚುತ್ತೀರಿ ಆದರೆ ಇಷ್ಟು ವರ್ಷಗಳ ಬೆಂಗಳೂರು ವಾಯು ಮಾಲಿನ್ಯಕ್ಕೆ ಕಾರಣವಾದ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿತು.

ಗ್ರಾಫೈಟ್ ಇಂಡಿಯಾ ಕಂಪನಿ ಪೆಟ್ ಕೋಕ್ ಬಳಕೆಯಿಂದ ಕಪ್ಪು ಮಸಿಯನ್ನು ಹೊರಕ್ಕೆ ಸೂಸುತ್ತಿತ್ತು ಇದರಿಂದ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.
ಈ ಕುರಿತಾದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 29ಕ್ಕೆ ಮುಂದೂಡಿದೆ. ಹವಾಮಾನಕ್ಕೆ ಎಥೇಚ್ಛವಾದ ಕಪ್ಪು ಮಸಿ ಸೂಸುವ ಪೆಟ್ ಕೋಕ್ ಬಳಕೆ ಮಾಡುವುದಿಲ್ಲ ಎಂದು ಈ ಹಿಂದೆ ಕಂಪನಿ ತಿಳಿಸಿತ್ತು. ಆದರೂ ನಗರದಲಲ್ಇ ಕಪ್ಪು ಧೂಳು ಹೊರ ಸೂಸುವ ಮೂಲಕ ಗ್ರಾಫೈಟ್ ಇಂಡಿಯಾ ಹೆಚ್ಚು ವಾಯುಮಾಲಿನ್ಯಕ್ಕೆ ಕಾರಣವಾಗಿತ್ತು.












Click it and Unblock the Notifications