ಬೆಂಗಳೂರು ಸಮೀಪ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಸ್ಥಳ ಗುರುತಿಸಿದ ತಮಿಳುನಾಡು ಸರ್ಕಾರ-ಇಲ್ಲಿದೆ ಮಾಹಿತಿ

ಬೆಂಗಳೂರು, ಸೆಪ್ಟೆಂಬರ್‌, 08: ಬೆಂಗಳೂರಿನ ಬಳಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡು ಸರ್ಕಾರ ಯೋಜನೆ ಹಾಕಿಕೊಂಡಿದ್ದು, ಇದೀಗ ನಗರದ 5 ಸ್ಥಳಗಳನ್ನು ಗುರುತಿಸಿದೆ ಎಂದು ತಿಳಿದುಬಂದಿದೆ. ಹಾಗಾದರೆ ಆ ಸ್ಥಳಗಳು ಎಲ್ಲಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕರ್ನಾಟಕ ಗಡಿಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಬೆಂಗಳೂರಿನ ಸುತ್ತಮುತ್ತ ಸ್ಥಳ ಹುಡುಕಾಟ ನಡೆಸಿತ್ತು. ಈಗಾಗಲೆ ಬಿಡಿದಿ, ಹೇರೋಹಳ್ಳಿ, ಕುಣಿಗಲ್, ತುಮಕೂರು ಮತ್ತು ಜಿಗಣಿ ಸುತ್ರಮುತ್ತ ಖಾಲಿ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದೆ ಎನ್ನುವ ಮಾಹಿತಿ ತಿಳಿದುಬದಿದೆ.

Government has identified 5 places for new international airport near Bengaluru

ಜಿಗಣಿ ಭಾಗದಲ್ಲಿ ಕನಿಷ್ಠ 4,000 ಹೆಕ್ಟೇರ್ ಸ್ಥಳ ಲಭ್ಯವಿಲ್ಲದ ಹಿನ್ನೆಲೆ ಬಿಡದಿ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಹೆಚ್ಚು ಆಸಕ್ತಿ ವಹಿಸುತ್ತಿದೆ. ಹಾಗಾದರೆ ಯಾವೆಲ್ಲ ಪ್ರದೇಶಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸಾಧ್ಯತೆಯಿದೆ ಎಂಬುವುದರ ಬಗ್ಗೆ ವರದಿ ಸಿದ್ದಪಡಿಸುವಂತೆ ಕೈಗಾರಿಕಾ ಇಲಾಖೆ ಖಾಸಗಿ ಸಂಸ್ಥೆಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಏಕಕಾಲಕ್ಕೆ ಎರಡು ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವಂತೆ ಕ್ಯಾಪ್ಟನ್ ಗೋಪಿನಾಥ್ ಸರ್ಕಾರಕ್ಕೆ ಸಲಹೆ ನೀಡಿದ್ದು, ಇದರಿಂದ ಕೈಗಾರಿಕೆ ಹಾಗೂ ಸಂಚಾರ ಸಂಪರ್ಕದ ಮೇಲೆ ದೂರಗಾಮಿ ಸತ್ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಆದರೆ, ತಮಿಳುನಾಡು ಸರ್ಕಾರ ಇದೀಗ ಒಂದು ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಆಸಸ್ತಿ ತೋರಿದೆ.

ಇನ್ನು ಹೊಸೂರು ಹೆಚ್ಚು ಕೈಗಾರಿಕೆಗಳು ಇರುವ ಪ್ರದೇಶವಾಗುದೆ. ಬಹುತೇಕ ಬೆಂಗಳೂರಿಗರು ಅಲ್ಲಿ ಕೆಲಸಕ್ಕೆ ಹೋಗಿ ಬರುತ್ತಾರೆ. ಎಲೆಕ್ಟ್ರಾನಿಕ್ ಸಿಟಿ, ಎಚ್‌​ಎಸ್​ಆರ್ ಲೇಔಟ್ ಸೇರಿದಂತೆ ಪ್ರತಿಷ್ಠಿತ ಪ್ರದೇಶಗಳ ನಿವಾಸಿಗಳಿಗೆ ಹೊಸೂರಿನಲ್ಲಿ ಏರ್ಪೋರ್ಟ್ ನಿರ್ಮಾಣ ಆದರೆ ಅನುಕೂಲ ಆಗಬಹುದು. ಬೆಂಗಳೂರು ಮತ್ತು ಹೊಸೂರು ಅವಳಿ ನಗರಗಳಾಗಿ ಅಭಿವೃದ್ಧಿ ಹೊಂದಲು ಸಾಧ್ಯೆವಾಗುತ್ತದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+