ಗೊಟ್ಟಿಗೆರೆ-ನಾಗವಾರ ಮೆಟ್ರೋ: ಹಳೆ ವಿನ್ಯಾಸದಂತೆಯೇ ಮಾರ್ಗ ನಿರ್ಮಾಣ

ಬೆಂಗಳೂರು, ಜನವರಿ 17: ನಮ್ಮ ಮೆಟ್ರೋ 2 ನೇ ಹಂತದಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗವನ್ನು ಹಳೆಯ ವಿನ್ಯಾಸದಂತೆಯೇ ನಿರ್ಮಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಸುರಂಗ ಮಾರ್ಗದ ವಿನ್ಯಾಸವನ್ನು ಬದಲಿಸುವ ಕುರಿತು ಚಿಂತನೆ ನಡೆದಿತ್ತು, ಇದೀಗ ಹಳೆಯ ವಿನ್ಯಾಸದಂತೆಯೇ ಕಾಮಗಾರಿ ಮುಂದುವರೆಸಲು ಚಿಂತನೆ ನಡೆಸಿದೆ. ಈ ಮಾರ್ಗದಲ್ಲಿ 12 ಮಾರ್ಗಗಳು ನಿರ್ಮಾಣಗೊಳ್ಳಲಿವೆ.

12 ಸುರಂಗ ನಿಲ್ದಾಣಗಳ ಬದಲು 5-6 ಎತ್ತರಿಸಿದ ಮಾರ್ಗ ಮಾಡಬೇಕೆಂಬುದು ಮೊದಲ ತೀರ್ಮಾನವಾಗಿತ್ತು. ಆದರೆ ಅನೇಕ ಪ್ರದೇಶಗಳಲ್ಲಿ ಭೂಸ್ವಾಧೀನ ಸಮಸ್ಯೆ ಕಂಡುಬಂದಿದೆ. ಈಗ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ ಕಾಮಗಾರಿ ಆರಂಭಕ್ಕೆ ಹಲವಾರು ವರ್ಷಗಳೇ ಬೇಕಾಗಬಹುದು. ಇವೆಲ್ಲ ಹೊಸ ಸಮಸ್ಯೆಗಳನ್ನು ಎದುರಿಸುವ ಬದಲು ಮತ್ತೊಮ್ಮೆ ಟೆಂಡರ್ ಕರೆದು ಸೂಕ್ತ ಕಂಪನಿಗಳಿಗೆ ಟೆಂಡರ್ ನೀಡಲು ನಿರ್ಧರಿಸಿದೆ.

21.42 ಕಿ.ಮೀ ಉದ್ದದ ಮಾರ್ಗ

21.42 ಕಿ.ಮೀ ಉದ್ದದ ಮಾರ್ಗ

21.4 ಕಿ.ಮೀ ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ 13.91 ಕಿ.ಮೀ ಸುರಂಗ ಮಾರ್ಗವಿದೆ. ಕಳೆದ ವರ್ಷ ಸುರಂಗ ಮಾರ್ಗ ನಿರ್ಮಾಣಕ್ಕೆ ನಾಲ್ಕು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಟೆಂಡರ್‌ಗೆ ಅರ್ಜಿ ಸಲ್ಲಿಸಿದ ಕಂಪನಿಗಳು ಅಂದಾಜು ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಉಲ್ಲೇಖಿಸಿದ್ದವು. ಇದರಿಂದಾಗಿ ಅನಿವಾರ್ಯವಾಗಿ ಟೆಂಡರ್ ರದ್ದಾಯಿತು.

12 ನಿಲ್ದಾಣಗಳ ಬದಲು 5-6 ನಿಲ್ದಾಣಗಳ ನಿರ್ಮಾಣ

12 ನಿಲ್ದಾಣಗಳ ಬದಲು 5-6 ನಿಲ್ದಾಣಗಳ ನಿರ್ಮಾಣ

ಸುರಂಗ ಕೊರೆಯುವ ಕಾಮಗಾರಿಗೆ ಕಂಪನಿಗಳು ಮುಂದೆ ಬರುವುದು ಅನುಮಾನವಾಗಿದ್ದರಿಂದ 12 ನಿಲ್ದಾಣಗಳ ಬದಲು 5-6 ನಿಲ್ದಾಣಗಳನ್ನು ಮಾತ್ರ ಸುರಂಗವಾಗಿಸಿ, ಉಳಿದವನ್ನು ಎತ್ತರಿಸಿದ ಮಾರ್ಗದಲ್ಲೇ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಮಾರ್ಗದ ಕಾಮಗಾರಿ ಬೇಗ ಮುಗಿಯಬೇಕಾದರೆ ತುರ್ತು ಇರುವ ಸಮಯದಲ್ಲಿ ವಿನ್ಯಾಸ ಬದಲಿಸುತ್ತಿದ್ದರೆ ಕಾಮಗಾರಿ ಮತ್ತಷ್ಟು ವರ್ಷಕ್ಕೆ ಮುಂದಕ್ಕೆ ಹೋಗುವುದು ಖಚಿತ.

ಹಳೆಯ ವಿನ್ಯಾಸದಂತೆಯೇ ಮೆಟ್ರೋ ಮಾರ್ಗ ನಿರ್ಮಾಣ

ಹಳೆಯ ವಿನ್ಯಾಸದಂತೆಯೇ ಮೆಟ್ರೋ ಮಾರ್ಗ ನಿರ್ಮಾಣ

ಹಳೆಯ ವಿನ್ಯಾಸದಂತೆಯೇ ನಿರ್ಮಿಸಲು ನಿರ್ಧರಿಸಲಾಗಿದೆ. ಎತ್ತರಿಸಿದ ಮಾರ್ಗಕ್ಕೆ ಹೋಲಿಸಿದರೆ ಸುರಂಗಕ್ಕೆ ಅಧಿಕ ಖರ್ಚಾಗಲಿದೆ. ಸುರಂಗ ಕೊರೆಯುವ ಕಾಮಗಾರಿ ಮಾಡಿದ ಅನುಭವವಿರುವ ಕಂಪನಿಗಳು ಕೆಲವೇ ಇವೆ. ಬಿಎಂಆರ್‌ಸಿಎಲ್ ಇದರ ಖರ್ಚನ್ನು ಅಂದಾಜಿಸಿದರೂ ಅದು ಗುತ್ತಿಗೆ ಕಂಪನಿಗಳ ಅಂದಾಜು ಮೊತ್ತಕ್ಕೆ ಸರಿ ಹೊಂದುತ್ತಿಲ್ಲ. ಎರಡನೇ ಹಂತದ ಮೆಟ್ರೋ ಯೋಜನೆಯಲ್ಲಿ ಇದು ಅತಿ ಉದ್ದದ ಮಾರ್ಗ ಹಾಗೂ ಇಡೀ ಮೆಟ್ರೋ ಯೋಜನೆಯಲ್ಲಿ ಅತಿ ಉದ್ದದ ಸುರಂಗ ಮಾರ್ಗವಾಗಲಿದೆ. ಈ ಕಾಮಗಾರಿಗೆ ಕನಿಷ್ಠ 12 ಸುರಂಗ ಕೊರೆಯುವ ಯಂತ್ರಗಳು ಬೇಕಾಗಲಿವೆ.

ಎತ್ತರಿಸಿದ ಮಾರ್ಗದ ನಿಲ್ದಾಣಗಳು

ಎತ್ತರಿಸಿದ ಮಾರ್ಗದ ನಿಲ್ದಾಣಗಳು

ಗೊಟ್ಟಿಗೆರೆ, ಹುಳಿಮಾವು, ಐಐಎಂಬಿ, ಜೆಪಿನಗರ ನಾಲ್ಕನೃ ಹಂತ, ಜಯದೇವ ಆಸ್ಪತ್ರೆ, ಸ್ವಾಗತ್ ಕ್ರಾಸ್ ಬರಲಿವೆ.

ಸುರಂಗ ಮಾರ್ಗದ ನಿಲ್ದಾಣಗಳು

ಸುರಂಗ ಮಾರ್ಗದ ನಿಲ್ದಾಣಗಳು

ಡೈರಿ ಸರ್ಕಲ್, ಮೈಕೊ , ಲ್ಯಾಂಗ್‌ಫೋರ್ಡ್ ಟೌನ್, ವೆಲ್ಲಾರ ಜಂಕ್ಷನ್, ಎಂಜಿ ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್, ಟ್ಯಾನರಿ ಟೌನ್, ವೆಂಕಟೇಶಪುರ, ಅರೇಬಿಕ್ ಕಾಲೇಜು, ನಾಗವಾರ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+