ಇರುವುದು ಬೆಂಗಳೂರಲ್ಲಿ, ಗೂಗಲ್ ಮ್ಯಾಪ್ ತೋರಿಸುವುದು ತಮಿಳಿನಲ್ಲಿ!

ಬೆಂಗಳೂರು, ಸೆಪ್ಟೆಂಬರ್ 23: ಗೂಗಲ್ ಮ್ಯಾಪ್‌ನಲ್ಲಿ ಊರುಗಳ ಹೆಸರನ್ನು ಕನ್ನಡದಲ್ಲಿ ಹುಡುಕಿದರೆ ವಿಚಿತ್ರ ಹೆಸರುಗಳು ಎದುರಾಗುತ್ತವೆ. ಕೆಲವು ಹೆಸರುಗಳನ್ನು ತಿದ್ದಿ ಸರಿಪಡಿಸಲು ಅವಕಾಶವಿದೆ. ಇನ್ನು ಕೆಲವು ಊರುಗಳ ಹೆಸರನ್ನು ಸರಿಪಡಿಸಲು ಗೂಗಲ್‌ನಲ್ಲಿ ಸಾಧ್ಯವಾಗುತ್ತಿಲ್ಲ. ಆದರೆ, ಕರ್ನಾಟಕದ ಪ್ರದೇಶದ ಹೆಸರೇ ಬೇರೆ ಭಾಷೆಯಲ್ಲಿ ಬಂದರೆ?

ಬೆಂಗಳೂರಿನಲ್ಲಿ ಗೂಗಲ್ ಮ್ಯಾಪ್‌ಅನ್ನು ತೆರೆದರೆ ಎಲ್ಲ ಪ್ರಮುಖ ಪ್ರದೇಶಗಳು, ಕಟ್ಟಡಗಳ ಹೆಸರು ಇಂಗ್ಲಿಷ್ ಜತೆ ಕನ್ನಡದಲ್ಲಿಯೂ ಮೂಡುತ್ತದೆ. ಆದರೆ, ನಗರದ ಕೇಂದ್ರ ಭಾಗವಾದ ಮೆಜೆಸ್ಟಿಕ್‌ನಲ್ಲಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ'ದ ಹೆಸರು ಕನ್ನಡದ ಬದಲು ತಮಿಳಿನಲ್ಲಿ ಮೂಡುತ್ತದೆ. ಕೆಲವು ದಿನಗಳಿಂದ ಈ ವಿಚಾರ ಟ್ವಿಟ್ಟರ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿತ್ತು. 'ಒನ್ ಇಂಡಿಯಾ' ಇದರ ಕುರಿತು ವರದಿ ಪ್ರಕಟಿಸಿತ್ತು.

ಜನರ ಸತತ ಪ್ರಯತ್ನ ಕೊನೆಗೂ ಫಲಕೊಟ್ಟಿದೆ. ಈಗ ಅಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ' ಎಂಬ ಕನ್ನಡದ ಅಕ್ಷರ ಕಾಣಿಸುತ್ತಿದೆ. ಆದರೂ ತಾಂತ್ರಿಕವಾಗಿ ಅದು ಸಂಪೂರ್ಣವಾಗಿ ಸರಿಯಾಗಿಲ್ಲ. ಕೆಲವೊಮ್ಮೆ ತಮಿಳಿನ ಅಕ್ಷರಗಳಲ್ಲಿಯೇ ಹೆಸರು ಪ್ರಕಟವಾಗುತ್ತಿದೆ.

Google Maps Showed Sangolli Rayannna Railway Station In Tamil

ಇದು ಹೇಗೆ ಬಂತು, ಎಲ್ಲಿ ತಪ್ಪಾಗಿತ್ತು ಎನ್ನುವುದು ಗೊತ್ತಾಗುತ್ತಿಲ್ಲ. ಆದರೆ ಸರಿಪಡಿಸಲು ಅವಕಾಶವಿದೆ. ಅದನ್ನು ಸರಿಪಡಿಸುವುದು ಜನರ ಕೈಯಲ್ಲೇ ಇದೆ. ಎಡಿಟ್ ಅವಕಾಶ ಬಳಸಿಕೊಂಡು ಆಂದೋಲನದ ರೀತಿಯಲ್ಲಿ ಕನ್ನಡದಲ್ಲಿ ಹೆಸರು ಬರೆದು ಗೂಗಲ್‌ಗೆ ಹೆಸರು ತಪ್ಪಾಗಿರುವುದನ್ನು ಅರ್ಥ ಮಾಡಿಸುವಲ್ಲಿ ಜನರು ಯಶಸ್ವಿಯಾಗಿದ್ದಾರೆ.

ಈ ಹೆಸರನ್ನು ತಮಿಳಿನಲ್ಲಿ ಮೂಡುವಂತೆ ಕೆಲವರು ಕಿತಾಪತಿ ಮಾಡಿರಬಹುದು, ಇಲ್ಲವೇ ಕನ್ನಡದಲ್ಲಿ ಸರಿಯಾಗಿ ಬರೆದಿದ್ದರೂ ಅದು ತಪ್ಪಾದ ಸ್ಥಳದಲ್ಲಿ ತೋರಿಸಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ತಮಿಳಿನಲ್ಲಿ ಹೆಸರು ಮೂಡುತ್ತಿರುವುದಕ್ಕೆ ಗೂಗಲ್ ಇಂಡಿಯಾ ವಿರುದ್ಧ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮ್ಯಾಪ್‌ನಲ್ಲಿ ಆಯಾ ಪ್ರಾದೇಶಿಕ ಭಾಷೆಯೇ ಮೂಡುವಂತೆ ಗಮನ ಹರಿಸಿ ಎಂದು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+