Good News: ಫ್ರೀ ಗ್ರಾಫಿಕ್ ಡಿಸೈನ್‌, ವೀಡಿಯೊ ಎಡಿಟಿಂಗ್ ಕೋರ್ಸ್: ಯಾರೆಲ್ಲ ಅರ್ಜಿ ಸಲ್ಲಿಸಬಹುದು ನೋಡಿ

ವಿಡಿಯೋ ಹಾಗೂ ಗ್ರಾಫಿಕ್‌ ಡಿಸೈನ್‌ ಮಾಡುವ ಆಸಕ್ತಿ ಇರುವವರಿಗೆ ಬಿಗ್‌ಗುಡ್‌ನ್ಯೂಸ್‌ವೊಂದು ಇಲ್ಲಿದೆ. ಗ್ರಾಫಿಕ್ ಡಿಸೈನರ್ ಮತ್ತು ವೀಡಿಯೊ ಎಡಿಟಿಂಗ್‌ಗೆ ಭರ್ಜರಿ ಅವಕಾಶವೊಂದನ್ನು ನೀಡಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಮಾಧ್ಯಮವು ವೇಗವಾಗಿ ಬೆಳೆಯುತ್ತಿದ್ದು, ಡಿಜಿಟಲ್‌ನಲ್ಲಿ ವಿಡಿಯೋ ಮೇಕಿಂಗ್ ಹಾಗೂ ಎಡಿಟಿಂಗ್‌ಗೆ ಭರ್ಜರಿ ಅವಕಾಶಗಳು ಹೆಚ್ಚಾಗುತ್ತಿವೆ. ಇದೀಗ ಈ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರಿಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಗ್ರಾಫಿಕ್ ಡಿಸೈನರ್‌ಗಳು ಮತ್ತು ವೀಡಿಯೊ ಎಡಿಟಿಂಗ್‌ಗೆ ಈಗ ಸಾಕಷ್ಟು ಅವಕಾಶಗಳು ಇವೆ. ಇನ್ನು ಡಿಜಿಟಲ್‌ನಲ್ಲಿ ಕೆರಿಯರ್ ಕಟ್ಟಿಕೊಳ್ಳಲು ಇಚ್ಛಿಸುವವರಿಗೆ ಭರ್ಜರಿ ಗುಡ್‌ನ್ಯೂಸ್‌ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗಿದೆ.

ಗ್ರಾಫಿಕ್ ಡಿಸೈನಿಂಗ್ ಮತ್ತು ವೀಡಿಯೊ ಎಡಿಟಿಂಗ್ ಕೋರ್ಸ್‌ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಡಿಜಿಟಲ್‌ ಕ್ಷೇತ್ರವು ಇಂದು ಸಾಕಷ್ಟು ಅಭಿವೃದ್ಧಿಯಾಗಿದೆ. ಡಿಜಿಟಲ್‌ ಹಾಗೂ ವಿಡಿಯೋ ಎಡಿಟ್‌ಗೆ ಭಾರೀ ಡಿಮ್ಯಾಂಡ್‌ ಇದೆ. ವಿವಿಧ ಕ್ಷೇತ್ರಗಳಲ್ಲಿ ಈ ಕೋರ್ಸ್‌ಗಳನ್ನು ಮಾಡಿರುವವರಿಗೆ ಭರ್ಜರಿ ಅವಕಾಶಗಳು ಸಿಗಲಿವೆ. ಇನ್ನು ಈ ಕೋರ್ಸ್‌ಗಳನ್ನು ಮಾಡಿದರೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವುದಕ್ಕೂ ಅವಕಾಶ ಇದೆ.

Good News Free Graphic Design Video Editing Course See who can apply

ವಿದ್ಯಾರ್ಥಿಗಳು ಹಾಗೂ ಡಿಜಿಟಲ್‌ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವವರಿಗೆ ಗ್ರಾಫಿಕ್ ಡಿಸೈನ್‌ ಹಾಗೂ ವೀಡಿಯೊ ಎಡಿಟಿಂಗ್‌ಗೆ ಭರ್ಜರಿ ಅವಕಾಶ ನೀಡಲಾಗುತ್ತಿದೆ. ಈ ಕೋರ್ಸ್‌ಗಳೊಂದಿಗೆ ವಿವಿಧ ಕೋರ್ಸ್‌ಗಳನ್ನು ಸಹ ಇದೇ ಸಂದರ್ಭದಲ್ಲಿ ಹೇಳಿಕೊಡಲಾಗುತ್ತದೆ. ಈ ಕೋರ್ಸ್ 90 ದಿನಗಳು ಇರಲಿವೆ. ಅಂದರೆ 3 ತಿಂಗಳು ಈ ಕೋರ್ಸ್‌ ಇರಲಿದೆ. ಈ ಕೋರ್ಸ್‌ನಲ್ಲಿ ಭಾಗವಹಿಸುವವರು ಗ್ರಾಫಿಕ್ ವಿನ್ಯಾಸ ಮತ್ತು ವೀಡಿಯೊ ಎಡಿಟಿಂಗ್‌ನಲ್ಲಿ ವಿವಿಧ ಅವಕಾಶಗಳು ಸಿಗಲಿವೆ.

ಅಲ್ಲದೆ ಈ ಕೋರ್ಸ್‌ನಲ್ಲಿ ಅಡೋಬ್ ಫೋಟೋಶಾಪ್, ಕೋರೆಲ್‌ಡ್ರಾವ್ ಮತ್ತು ಅಡೋಬ್ ಪ್ರೀಮಿಯರ್ ಪ್ರೊನಂತಹ ವಿಷಯಗಳ ಬಗ್ಗೆಯೂ ಇಂದು ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಕ್ಯಾನ್ವಾ, ಚಾಟ್‌ಜಿಪಿಟಿ ಮತ್ತು ನುಡಿಯಂತಹ ಹೆಚ್ಚುವರಿ ಸಾಫ್ಟ್‌ವೇರ್‌ಗಳನ್ನು ಸಹ ಹೇಳಿಕೊಡಲಾಗುತ್ತದೆ.

Good News Free Graphic Design Video Editing Course See who can apply

ಈ ಕೋರ್ಸ್‌ನಲ್ಲಿ ವಿಡಿಯೋ ಎಡಿಟಿಂಗ್ ಹಾಗೂ ಗ್ರಾಫಿಕ್ಸ್‌ನೊಂದಿಗೆ ವಿವಿಧ ವಿಷಯಗಳ ಬಗ್ಗೆಯೂ ಹೇಳಿಕೊಡಲಾಗುತ್ತದೆ. ಇದರಿಂದ ಕೆಲಸ ಹುಡುಕುವ ಸಂದರ್ಭದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

* ಮಾದರಿ1 - ಅಡೋಬ್ ಫೋಟೋಶಾಪ್

*ಮಾದರಿ2 - ಕೋರೆಲ್ ಡ್ರಾ

*ಮಾದರಿ3 - ಅಡೋಬ್ ಪ್ರೀಮಿಯರ್ ಪ್ರೊ

*ಮಾದರಿ4- ಕ್ಯಾನ್ವಾ

*ಮಾದರಿ5 - ಚಾಟ್ ಜಿಪಿಟಿ

*ಮಾದರಿ6 - ನುಡಿ

*ಮಾದರಿ7- ವ್ಯಕ್ತಿತ್ವ ಅಭಿವೃದ್ಧಿ

*ಮಾದರಿ8- ಸಂವಹನ ಕೌಶಲ್ಯ

ಅರ್ಹತಾ ಮಾನದಂಡಗಳು: ಈ ಕೋರ್ಸ್‌ಗೆ 18 ವರ್ಷದಿಂದ 45 ವರ್ಷದ ಒಳಗಿನವರು ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ಯಾವುದೇ ಡಿಪ್ಲೊಮಾ, ಯಾವುದೇ ಪದವಿ ಅಥವಾ ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಬೆಸಿಕ್ ಕಂಪ್ಯೂಟರ್‌ ಹಾಗೂ ಇಂಟರ್‌ನೆಟ್‌ ಬಳಕೆಯ ಬಗ್ಗೆ ತಿಳುದುಕೊಂಡಿರಬೇಕು. ಪ್ರಾದೇಶಿಕ ಭಾಷೆ ಕನ್ನಡ ಗೊತ್ತಿದ್ದರೆ ಉತ್ತಮ. ಸಫಾಯಿ ಕರ್ಮಚಾರಿ ಕುಟುಂಬದವರು ಹಾಗೂ ವಿವಿಧ ಕುಟುಂಬವರಿಗೆ ಮೊದಲ ಆದ್ಯತೆ ಇರಲಿದೆ.

ಬೇಕಾಗುವ ದಾಖಲೆಗಳು

* ಕರ್ನಾಟಕದ ನಿವಾಸಿಯಾಗಿರಬೇಕು.

* ಅರ್ಜಿ ಸಲ್ಲಿಸುವಾಗ ಸ್ಥಳೀಯ ಪುರಾವೆ ಅಗತ್ಯವಿದೆ

* ಶೈಕ್ಷಣಿಕ ಅರ್ಹತೆಯ ಪುರಾವೆ (ಅಕಪಟ್ಟಿ/ಪ್ರಮಾಣಪತ್ರ)

*ವಾಸದ ಪುರಾವೆ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಅಥವಾ ಸರ್ಕಾರ ನೀಡಿದ ಯಾವುದೇ ಇತರ ದಾಖಲೆ)

*ಗುರುತಿನ ಪುರಾವೆ (ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿ)

* ಪಾಸ್‌ಪೋರ್ಟ್ ಗಾತ್ರದ ಪೋಟೋ

ಇನ್ನು ಈ ಕೋರ್ಸ್ ಮಾಡುವವರಿಗೆ 90 ದಿನಗಳವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ಈ ಕೋರ್ಸ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ 30-12-2024 ಆಗಿರಲಿದೆ. ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+