Get Updates
Get notified of breaking news, exclusive insights, and must-see stories!

Good News: ಏರ್‌ಪೋರ್ಟ್‌ ಟ್ಯಾಕ್ಸಿ ಇನ್ಮುಂದೆ ಕೇವಲ ಇಷ್ಟು ರೂ.ಗೆ

ಬೆಂಗಳೂರಿನಿಂದ ಏರ್‌ಪೋರ್ಟ್‌ಗೆ ಹೋಗುವವರಿಗೆ ಇಲ್ಲೊಂದು ಗುಡ್‌ನ್ಯೂಸ್‌ ಇದೆ. ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಹೋಗುವುದಕ್ಕೆ ನೀವು ಇನ್ಮುಂದೆ ತುಂಬಾ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಬೆಂಗಳೂರಿನ ವಿವಿಧ ಭಾಗದಿಂದ ಏರ್‌ಪೋರ್ಟ್‌ಗೆ ಹೋಗುವುದಕ್ಕೆ ಸಾಕಷ್ಟು ಸೌಲಭ್ಯ ಇದೆ. ಬಸ್‌ನಲ್ಲಿ, ಟ್ರೈನ್‌ ಇಲ್ಲ ಟ್ಯಾಕ್ಸಿಗಳಲ್ಲೂ ನೀವು ಹೋಗಬಹುದು. ಕೆಲವೊಂದು ಟ್ಯಾಕ್ಸಿಗಳನ್ನು ಹೊರತುಪಡಿಸಿ, ಕಡಿಮೆ ಖರ್ಚಿನಲ್ಲಿಯೇ ನೀವು ಏರ್‌ಪೋರ್ಟ್‌ ತಲುಪಬಹುದು. ಆದರೆ, ಬೆಂಗಳೂರಿನಲ್ಲಿ ಎಂಡ್‌ ಟು ಎಂಡ್‌ ಕನೆಕ್ಟಿವಿಟಿ ಸಮಸ್ಯೆ ಇದೆ. ಅದಕ್ಕೂ ಈಗ ಪರಿಹಾರ ಸಿಕ್ಕಿದೆ.

ಬೆಂಗಳೂರಿನಿಂದ ಯಾವುದೇ ಏರ್‌ಪೋರ್ಟ್‌ಗೆ ಹೋಗಬೇಕೆಂದರೂ ಕನಿಷ್ಠ ಒಂದು ಸಾವಿರ ರೂಪಾಯಿಯ ಮೇಲೆ ಖರ್ಚು ಮಾಡಬೇಕು. ಬೆಂಗಳೂರಿನ ಹೊರ ವಲಯ ಇಲ್ಲವೇ ಕೆಲವು ಭಾಗಗಳಿಂದ ಹೋಗಬೇಕೆಂದರೆ ಇನ್ನೂ ಹೆಚ್ಚು ಖರ್ಚಾಗಲಿದೆ. ಈ ಸಮಸ್ಯೆಯನ್ನು ತಪ್ಪಿಸಲು ಇದೀಗ ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದೆ. ಹೊಸ ಎಲೆಕ್ಟ್ರಿಕ್ ಏರ್‌ಪೋರ್ಟ್ ಟ್ಯಾಕ್ಸಿ ಸೇವೆ ಪರಿಚಯಿಸಲಾಗಿದೆ.

Good News Airport taxi from now on for just Rs 699

ಇದನ್ನು ರೆಫೆಕ್ಸ್ ಇವೀಲ್ಜ್ ನಿರ್ವಹಣೆಯ ಸಂಸ್ಥೆ ಪರಿಚಯಿಸುತ್ತಿದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಈ ಹೊಸ ಸೇವೆಗೆ ಚಾಲನೆ ನೀಡಿದ್ದಾರೆ. ಹೊಸ ಟ್ಯಾಕ್ಸಿ ಸೇವೆ ಇದರಲ್ಲೇನು ವಿಶೇಷ ಇದೆ ಅಂತೀರಾ. ಇದರಲ್ಲಿ ನೀವು ಅಚ್ಚರಿಗೆ ಒಳಗಾಗುವ ಆಫರ್‌ ಒಂದಿದೆ. ಬೆಂಗಳೂರಿನ ಯಾವುದೇ ಪ್ರದೇಶದಿಂದಾದರೂ ಏರ್‌ಪೋರ್ಟ್‌ಗೆ ಹೋಗುವುದಕ್ಕೆ ಏನಿಲ್ಲ ಅಂದರೂ ಕನಿಷ್ಠ 1,000 ಸಾವಿರ ರೂಪಾಯಿ ಬೇಕೇ ಬೇಕು.

ಆದರೆ, ಹೊಸ ಏರ್‌ಪೋರ್ಟ್ ಆಪರೇಟರ್‌ ಸಹಯೋಗದಲ್ಲಿ ಏರ್‌ಪೋರ್ಟ್ ಟ್ಯಾಕ್ಸಿ ಸೇವೆ ಕಲ್ಪಿಸಲಾಗುತ್ತಿದ್ದು. ಈ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಟ್ಯಾಕ್ಸಿ ಸೇವೆ ನಿಮಗೆ ಸಿಗಲಿದೆ. ಬೆಂಗಳೂರಿನಿಂದ ಏರ್‌ಪೋರ್ಟ್‌ಗೆ ಈಗಾಗಲೇ 200 ಎಲೆಕ್ಟ್ರಿಕ್ ಕಾರುಗಳು ಸೇವೆ ಇದೆ. ಇದರೊಂದಿಗೆ 170 ಎಲೆಕ್ಟ್ರಿಕ್ ಕಾರುಗಳು ಸೇವೆಗೆ ಸೇರ್ಪಡೆಯಾಗಿದೆ. ಬೆಂಗಳೂರಿನ ಯಾವುದೇ ಪ್ರದೇಶದಿಂದಾರೂ, ನೀವು ಬೆಂಗಳೂರಿನ ಯಾವುದೇ ಭಾಗದಿಂದಾದರೂ ಏರ್‌ಪೋರ್ಟ್‌ಗೆ ಕೇವಲ 699 ರೂಪಾಯಿಯಲ್ಲಿ ತಲುಪಬಹುದಾಗಿದೆ.

ಆದರೆ, ಈ ಕಂಪನಿಯು ಕೆಲವೊಂದು ನಿರ್ದಿಷ್ಟ ಷರತ್ತುಗಳನ್ನು ಸಹ ವಿಧಿಸಿದೆ. ಬಹು ಮಾದರಿಯ ಎಲೆಕ್ಟ್ರಿಕ್ ಟ್ಯಾಕ್ಸಿಗಳನ್ನು ಪ್ರಯಾಣಿಕರು ಬುಕ್ ಮಾಡಿಕೊಳ್ಳಬಹುದು. ಅಲ್ಲದೇ ನೀವು ಬೆಂಗಳೂರಿನ ಯಾವುದೇ ಭಾಗದಿಂದಾರೂ ಏರ್‌ಪೋರ್ಟ್‌ಗೆ ಹೋಗಬೇಕೆಂದರೂ, ಕೇವಲ 699 ರೂಪಾಯಿ ಸಾಕು. ರೆಫೆಕ್ಸ್ ಇವೀಲ್ಜ್ ಎನ್ನುವ ಕಂಪನಿಯ ಆ್ಯಪ್​ ಮೂಲಕ ಮಾತ್ರ ಈ ಸೇವೆ ಲಭ್ಯವಿರಲಿದೆ. ಅಲ್ಲದೇ ಟ್ಯಾಕ್ಸಿ ಸೇವೆ ಬೇಕೆಂದರೆ, ಸಾಮಾನ್ಯ ಟ್ಯಾಕ್ಸಿ ಬುಕ್‌ ಮಾಡುವ ಮಾದರಿ ಇರುವುದಿಲ್ಲ. ಅಂದರೆ ನೀವು ಮುಂಚಿತವಾಗಿಯೇ ಟ್ಯಾಕ್ಸಿ ಬುಕ್‌ ಮಾಡಬೇಕಾಗುತ್ತದೆ. ಅಲ್ಲದೇ ಈ ವಿಶೇಷ ಆಫರ್ ನಿರ್ದಿಷ್ಟ ಅವಧಿಯವರೆಗೆ ಮಾತ್ರ ಇರಲಿದೆ ಎಂದು ಕಂಪನಿ ಹೇಳಿದೆ.

ಡಿ.ಕೆ ಶಿವಕುಮಾರ್‌ ಟ್ವೀಟ್: ಹೊಸ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ. ರೆಫೆಕ್ಸ್ ಇವೀಲ್ಜ್ ಗ್ರೂಪ್‌ನಿಂದ ನಿಯೋಜಿಸಲಾಗಿರುವ 170 ಎಲೆಕ್ಟ್ರಿಕ್ ಕಾರುಗಳ ಸೇವೆಗೆ ಚಾಲನೆ ನೀಡಿರುವುದು ಸಂತೋಷವನ್ನುಂಟು ಮಾಡಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 200 ಎಲೆಕ್ಟ್ರಿಕ್ ಕಾರುಗಳೊಂದಿಗೆ ಸೇರ್ಪಡೆಯಾಗಲಿದೆ. ನಮ್ಮ ಬೆಂಗಳೂರನ್ನು ಸ್ವಚ್ಛವಾಗಿ ಹಾಗೂ ಹಸರೀಕರಣವಾಗಿ ಇರಿಸಿಕೊಳ್ಳಲು ಈ ಸೇವೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+