Gold Price: ಚಿನ್ನ ಬೆಲೆ ಭರ್ಜರಿ ಏರಿಕೆ, ಎಷ್ಟಿದೆ ಇಂದಿನ ಚಿನ್ನ & ಬೆಳ್ಳಿ ಬೆಲೆ ?
ಚಿನ್ನದ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲ್ಲೇ ಇತ್ತು. ಇದೀಗ ಚಿನ್ನದ ಬೆಲೆಯು ಬಹುತೇಕ 80,000 ಸಾವಿರದ ಹತ್ತಿರಕ್ಕೆ ಬಂದಿದೆ. ಕಳೆದ ಒಂದು ವಾರದಿಂದಲೂ ಚಿನ್ನದ ಬೆಲೆಯು ಹಾವು - ಏಣಿ ಆಟದಂತೆ ಇತ್ತು. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಇದೀಗ ಪ್ರತಿ 100 ಗ್ರಾಂಗೆ 7,96,400 ರೂಪಾಯಿ ಆಗಿದೆ. ಚಿನ್ನದ ಬೆಲೆಯು ಒಂದು ವಾರದಿಂದಲೂ ಹೆಚ್ಚಾಗುತ್ತಲ್ಲೇ ಇದ್ದು, ಇದು ಚಿನ್ನ ಖರೀದಿಗೆ ಕಾದು ನಿಂತಿರುವ ಚಿನ್ನ ಪ್ರಿಯರ ಆತಂಕವನ್ನು ಹೆಚ್ಚಿಸಿದೆ.
ಇನ್ನು ನವೆಂಬರ್ 17ರಿಂದಲೂ ಚಿನ್ನದ ಬೆಲೆ ಹೆಚ್ಚಳವಾಗುತ್ತಲ್ಲೇ ಇದೆ. ಚಿನ್ನದ ಬೆಲೆ ಕಡಿಮೆಯಾಗಬಹುದು ಎಂದು ಕಾಯುತ್ತಿದ್ದವರಿಗೆ ಶಾಕ್ ಆಗುತ್ತಲ್ಲೇ ಇದೆ. ಇನ್ಮುಂದೆ ಚಿನ್ನದ ಬೆಲೆ ಇನ್ನೆಷ್ಟು ಹೆಚ್ಚಳವಾಗುತ್ತೋ ಅಂತ ಜನ ಆತಂಕದಲ್ಲಿ ಇದ್ದಾರೆ. ಹಾಗಾದರೆ ಇಂದಿನ ಚಿನ್ನ & ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಚಿನ್ನ ಎಂದರೆ ಹೂಡಿಕೆ
ಚಿನ್ನ ಎಂದರೆ ಹೂಡಿಕೆ ಅಂತಲೇ ಹೇಳಲಾಗುತ್ತದೆ. ಕಷ್ಟದ ಕಾಲದಲ್ಲಿ ಚಿನ್ನ ಯಾವಾಗಲೂ ಕೈಹಿಡಿಯುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಅವರ ಬಳಿ ಸ್ವಲ್ಪ ಹಣವಿದ್ದರೂ, ಅದನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಅದರ ಹಿಂದೆ ಇರುವ ಲೆಕ್ಕಾಚಾರ ಕಷ್ಟ ಬಂದ ಸಮಯದಲ್ಲಿ ಅದನ್ನು ಅಡಮಾನ ಇರಿಸಿ ಅದರಿಂದ ಹಣವನ್ನು ಪಡೆದುಕೊಳ್ಳುವುದೇ ಆಗಿದೆ. ಚಿನ್ನಾಭರಣವನ್ನು ಖರೀದಿ ಮಾಡುವುದರ ಹಿಂದೆ ಇರುವುದು ವಿಚಾರ ಅಂತಲೇ ಹೇಳಬಹುದು.
ಈ ವಿಷಯ ಭಾರತದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಳವಾದಾಗ ಬಯಲಾಗಿತ್ತು. ದೇಶದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಳವಾಗಿ ದೇಶದಾದ್ಯಂತ ಲಾಕ್‌ಡೌನ್ ಆಗಿ ಜನ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಮೊದಲು ನೆರವಿಗೆ ಬಂದಿದ್ದೇ ಚಿನ್ನ. ಚಿನ್ನವನ್ನು ಅಡಮಾನ ಇರಿಸಿ ಅದರಿಂದ ಬಂದ ಹಣದಲ್ಲಿ ಸಂಕಷ್ಟದ ದಿನಗಳನ್ನು ದೂಡಿದ್ದರು.
ಇದೀಗ ಚಿನ್ನದ ಬೆಲೆ ಹೆಚ್ಚಳವಾಗುತ್ತಿದ್ದರೂ ಜನ ಚಿನ್ನ ಖರೀದಿ ಮಾಡುವುದನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ಅದರ ಹಿಂದೆ ಎರಡು ಲೆಕ್ಕಾಚಾರಗಳು ಇವೆ. ಮೊದಲನೆಯದಾಗಿ ಇನ್ನು ಮುಂದಿನ ದಿನಗಳಲ್ಲಿ ಚಿನ್ನ ಬೆಲೆ ಇನ್ನಷ್ಟು ಹೆಚ್ಚಳವಾಗಬಹುದು ಎನ್ನುವುದು. ಮತ್ತೊಂದು ಚಿನ್ನವನ್ನು ಈಗ ಖರೀದಿ ಮಾಡಿಟ್ಟುಕೊಂಡರೆ, ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿ ಸಹಾಯವಾಗಬಹುದು ಎನ್ನುವ ನಿರೀಕ್ಷೆ ಇದೆ.

ಇನ್ನು ನೂರು ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು ಹೆಚ್ಚಳವಾಗಿದೆ. ಇದೀಗ 100 ಗ್ರಾಂ ಚಿನ್ನದ ಬೆಲೆಯು ನವೆಂಬರ್ 23ಕ್ಕೆ 8,200 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಚಿನ್ನದ ಬೆಲೆಯು 7,96,400 ರೂಪಾಯಿ ಆಗಿದೆ. ನವೆಂಬರ್ 22ಕ್ಕಿಂತಲೂ ಚಿನ್ನದ ಬೆಲೆ ನವೆಂಬರ್ 23ಕ್ಕೆ ಬರೋಬ್ಬರಿ 8,200 ರೂಪಾಯಿ ಜಾಸ್ತಿಯಾಗಿದೆ.
ನವೆಂಬರ್ 23ರ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ?
24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ: ಶುದ್ಧ ಚಿನ್ನದ 24 ಕ್ಯಾರೆಟ್ ಚಿನ್ನದ ಬೆಲೆಯು 100 ಗ್ರಾಂಗೆ 7,96,400 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 820 ರೂಪಾಯಿ ಹೆಚ್ಚಳವಾಗಿದೆ. ಅಲ್ಲದೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 79,640 ರೂಪಾಯಿ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ: 22 ಕ್ಯಾರೆಟ್ ಚಿನ್ನದ ಬೆಲೆ ಸಹ ಹೆಚ್ಚಳವಾಗಿದೆ. 22 ಕ್ಯಾರೆಟ್ ಚಿನ್ನದ ದರವು ಪ್ರತಿ 100 ಗ್ರಾಂಗೆ 7,30,000 ರೂಪಾಯಿ ಆಗಿದೆ ಎಂದು ವರದಿಯಾಗಿದೆ. ಇನ್ನು 10 ಗ್ರಾಂಗೆ 73,000 ಮುಟ್ಟಿದೆ. ಪ್ರತಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ 7,300 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ ಎಷ್ಟಿದೆ ?
ರಾಜ್ಯದಲ್ಲಿ ಬೆಳ್ಳಿಯ ಬೆಲೆಯಲ್ಲಿ ಚಿನ್ನದ ಬೆಲೆಯಂತೆ ವ್ಯತ್ಯಾಸ ಕಂಡು ಬಂದಿಲ್ಲ. ಬೆಳ್ಳಿ ಬೆಲೆಯು ಯಥಾಸ್ಥಿತ ಮುಂದುವರಿದಿದೆ. 1 ಗ್ರಾಂ ಬೆಳ್ಳಿ ಬೆಲೆ 92 ರೂಪಾಯಿ ಇದೆ. ಅಲ್ಲದೇ 1 ಕೆ.ಜಿ ಬೆಳ್ಳಿ ಬೆಲೆ 92,000 ಸಾವಿರ ರೂಪಾಯಿ ಇದೆ. 10 ಗ್ರಾಂ 920 ರೂಪಾಯಿ ಇದ್ದರೆ, ನೂರು ಗ್ರಾಂ ಬೆಳ್ಳಿ ಬೆಲೆಯು 9,200 ರೂಪಾಯಿ ಮುಟ್ಟಿದೆ.












Click it and Unblock the Notifications