Gold: ಚಿನ್ನ ಖರೀದಿ & ಇನ್ವೆಸ್ಟ್‌ಮೆಂಟ್‌ಗೆ ಈಗ ಬೆಸ್ಟ್ ಟೈಮ್, ಮಿಸ್ ಮಾಡ್ಲೇಬೇಡಿ
ಚಿನ್ನ ಖರೀದಿ ಹಾಗೂ ಚಿನ್ನದ (ಇನ್ವೆಸ್ಟ್‌ಮೆಂಟ್) ಹೂಡಿಕೆ ಬೆಸ್ಟ್ ಇನ್ವೆಸ್ಟ್‌ಗಳಲ್ಲಿ ಒಂದು. ಚಿನ್ನ ಖರೀದಿ ಹಾಗೂ ಚಿನ್ನದ ಮೇಲಿನ ಹೂಡಿಕೆ ಸದಾ ಲಾಭದಾಯಕವೇ. ಚಿನ್ನ ಖರೀದಿಯಿಂದ ನೀವು ಸಂಕಷ್ಟದ ಸಮಯದಲ್ಲಿ ಪರದಾಡುವುದು ತಪ್ಪುತ್ತೆ. ಈಗ ಸಾಲು ಸಾಲು ಹಬ್ಬಗಳ ಸೀಸನ್ ಈ ಸಮಯದಲ್ಲಿ ನೀವು ಚಿನ್ನದ ಮೇಲೆ ಇನ್ವೆಸ್ಟ್ ಮಾಡಿದರೆ, ಖಂಡಿತವಾಗಿಯೂ ನಿಮಗೆ ಲಾಭ ಮಿಸ್ ಆಗಲ್ಲ. ಚಿನ್ನದ ಮೇಲೆ ಸಾವಿರಾರು ರೂಪಾಯಿ ಇನ್ವೆಸ್ಟ್ ಮಾಡಬೇಕೆಂದಿಲ್ಲ. ಸಣ್ಣ ಸಣ್ಣ ಉಳಿತಾಯವೂ ಸಹ ನಿಮಗೆ ಲಾಭದಾಯಕವೇ ಆಗಿದೆ. ಚಿನ್ನ ಖರೀದಿ, ಹೂಡಿಕೆ ಹೇಗೆ ಲಾಭದಾಯಕ ಎನ್ನುವ ಮಾಹಿತಿ ಇಲ್ಲಿದೆ.
ಭಾರತೀಯರಿಗೆ ಚಿನ್ನ - ಬೆಳ್ಳಿ ಎಂದರೆ ಎಲ್ಲಿಲ್ಲದ ವ್ಯಾಮೋಹ. ಚಿನ್ನ ಕೇವಲ ಆಭರಣ ಹಾಗೂ ವ್ಯಾಮೋಹವಾಗಿ ಉಳಿದಿಲ್ಲ. ಅದೊಂದು ಹೂಡಿಕೆಯೂ ಹೌದು. ಚಿನ್ನ ಖರೀದಿ ಮಾಡುವುದನ್ನು ಮಂಗಳಕರ ಎಂದು ಪರಿಗಣಿಸುವುದೂ ಸಹ ಇದೆ. ಮನೆಯಲ್ಲಿ ಇದ್ದರೆ ಚಿನ್ನ ಚಿಂತೆ ಯಾಕೆ ಅಂತ ಕೇಳಿಲ್ವಾ. ಮದುವೆ, ಹಬ್ಬ, ಅಕ್ಷಯ ತೃತೀಯ ಹಾಗೂ ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿ ಕಾಮನ್. ಸಣ್ಣ ಪ್ರಮಾಣದಲ್ಲಾದರೂ ಚಿನ್ನ ಖರೀದಿ ಮಾಡುವವರು ಇದ್ದಾರೆ. ಈಗ ದೇಶದಲ್ಲಿ ಸಾಲು ಸಾಲು ಹಬ್ಬಗಳು ಬರ್ತಿವೆ. ದಸರಾ, ದೀಪಾವಳಿ ಮುಂದೆ ಹೊಸ ವರ್ಷ ಆ ಮೇಲೆ ಸಂಕ್ರಾಂತಿ. ಈ ಹಬ್ಬದ ಸಮಯದಲ್ಲಿ ನಿಮ್ಮ ಕೈನಲ್ಲಿರುವ ಹಣವನ್ನು ಚಿನ್ನದ ಮೇಲೆ ಇನ್ವೆಸ್ಟ್ ಮಾಡಿ. ಚಿನ್ನದ ಮೇಲೆ ಇನ್ವೆಸ್ಟ್ ಮಾಡುವುದರಿಂದ ನಿಮ್ಮ ಕಷ್ಟದ ಸಮಯದಲ್ಲಿ ಸಹಾಯವಾಗುತ್ತೆ. ಅಲ್ಲದೇ ಮುಂದೆ ಚಿನ್ನದ ಬೆಲೆ ಹೆಚ್ಚಳವಾದರೆ ಆಗಲೂ ನಿಮಗೆ ಲಾಭವೇ. ಕಳೆದ ಒಂದು ವರ್ಷದ ಅವಧಿಯಲ್ಲೇ ಚಿನ್ನದ ಬೆಲೆಯಲ್ಲಿ ಹಲವು ಏರುಪೇರಾಗಿದೆ. ಆರು ತಿಂಗಳ ಅವಧಿಗೆಲ್ಲ ಚಿನ್ನದ ಬೆಲೆ ಹೆಚ್ಚಳವಾಗಿದ್ದೂ ಇದೆ.

ಹಬ್ಬಗಳ ಸಮಯದಲ್ಲಿ ಹಣದ ವಹಿವಾಟು ಸಾಮಾನ್ಯ ದಿನಗಳಿಗಿಂತ ಹೆಚ್ಚು ಇರುತ್ತದೆ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ನೀವು ಚಿನ್ನ ತಗೊಂಡರೆ ಮುಂದೆ ಲಾಭ ಖಂಡಿತ. ಅಷ್ಟೇ ಅಲ್ಲ ಯಾರ ಮುಂದೆಯೂ ಕಾಸಿಗೆ ಕೈಚಾಚುವ ಅನಿವಾರ್ಯತೆ ಎದುರಾಗಲ್ಲ. ಸಣ್ಣ ಸಣ್ಣ ಕಂತುಗಳಲ್ಲಿ ಚಿನ್ನ ಖರೀದಿ ಮಾಡುವುದಕ್ಕೂ ಹಲವು ಆಯ್ಕೆಗಳಿವೆ. ಇಎಂಐ ಮಾದರಿಯಲ್ಲೂ ನೀವು ಚಿನ್ನ ಖರೀದಿ ಮಾಡುವುದಕ್ಕೆ ಅವಕಾಶ ಇದೆ.
ಚಿನ್ನ ಖರೀದಿಯ ಮುಂಚೆ ಈ ಅಂಶಗಳನ್ನು ಗಮನಹರಿಸಿ
ಚಿನ್ನ ಖರೀದಿ ಹೊಸ ಹೂಡಿಕೆ ಹಾಗೂ ಲಾಭದಾಯಕ ನಿಜ. ಅದೇ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡುವಾಗ ನೀವು ಕೆಲವೊಂದು ಎಚ್ಚರಿಕೆಗಳನ್ನು ಅನುಸರಿಸಲೇಬೇಕು. ನೀವು ಖರೀದಿ ಮಾಡುವ ಚಿನ್ನದ ಮೇಲೆ ಬಿಐಎಸ್ ಹಾಲ್‌ಮಾರ್ಕ್ ಇದೆಯೇ ಎನ್ನುವುದನ್ನು ತಪ್ಪದೇ ಖಚಿತಪಡಿಸಿಕೊಳ್ಳಿ. ಚಿನ್ನ ಖರೀದಿ ಯಾವಾಗಲೂ ಒಳ್ಳೆಯದೇ. ಆದರೆ, ಉತ್ತಮ ಕಂಪನಿಗಳಿಂದ ಚಿನ್ನ ಖರೀದ ಮಾಡಿ. ಖರೀದಿಗೆ ಮುಂಚೆ ಬಿಐಎಸ್ ಹಾಲ್‌ಮಾರ್ಕ್ ಸೇರಿದಂತೆ ಎಲ್ಲ ನಿಯಮಗಳನ್ನೂ ಚೆಕ್ ಮಾಡುವುದನ್ನು ಮರೆಯಬೇಡಿ.
ಚಿನ್ನ ಖರೀದಿ ಮಾಡುವುದಕ್ಕಿಂತ ಮುಂಚೆ ಎಲ್ಲಿ ಖರೀದಿ ಮಾಡುತ್ತಿದ್ದೀರಿ ಗಮನಿಸಿ. ನಿರ್ದಿಷ್ಟ ಕಂಪನಿಯಲ್ಲಿ ಸಣ್ಣ ಪ್ರಮಾಣದ ಚಿನ್ನ ಖರೀದಿ ಮಾಡುವುದಿದ್ದರೂ, ಕಂಪನಿಯ ವೆಬ್‌ಸೈಟ್ ನೋಡಿ. ವೆಬ್‌ಸೈಟ್‌ನಲ್ಲಿ ಈಗಾಗಲೇ ಇಲ್ಲಿಂದ ಚಿನ್ನ ಖರೀದಿ ಮಾಡಿರುವವರ ಅಭಿಪ್ರಾಯ ಇರುತ್ತದೆ. ಚಿನ್ನದ ಗುಣಮಟ್ಟ,ರೇಟ್ ಹಾಗೂ ಆ ಕಂಪನಿ ಯಾವ ರೀತಿಯ ಸೇವೆ ಗ್ರಾಹಕರಿಗೆ ಕೊಡುತ್ತಿದೆ ಅಂತ ನೋಡಿಕೊಳ್ಳಿ. ಒಂದೊಮ್ಮೆ ಬಹಳಷ್ಟು ಜನ ಆ ಕಂಪನಿಯ ಚಿನ್ನ ಹಾಗೂ ಸೇವೆಯ ಬಗ್ಗೆ ನೆಗೆಟಿವ್ ಹೇಳಿದ್ದರೆ ಬೇರೆ ಕಡೆ ಚಿನ್ನ ಖರೀದಿಸಿ.
ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ತಿಳಿದುಕೊಂಡಿರಿ. ಇದರಿಂದ ಚಿನ್ನ ಖರೀದಿಗೆ ಸಹಾಯವಾಗಲಿದೆ. ಒಂದೊಂದು ಕಂಪನಿಯಲ್ಲೂ ಚಿನ್ನದ ಬೆಲೆಯಲ್ಲಿ (ಮೇಕಿಂಗ್ ಜಾರ್ಜ್) ವ್ಯತ್ಯಾಸ ಆಗುವುದಿದೆ. ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಹಾಗೂ ವಾರದಿಂದ ವಾರಕ್ಕೆ ಬದಲಾಗುವ ಸಾಧ್ಯತೆ ಇರುತ್ತದೆ.












Click it and Unblock the Notifications