ಜೆಡಿಎಸ್ ಮುಖಂಡನಿಂದ ಲಕ್ಷ ಲಕ್ಷ ದೋಚಿದ ಫೇಸ್‌ಬುಕ್ ಗೆಳತಿ

ಬೆಂಗಳೂರು, ಸೆ.29: ಫೇಸ್‌ಬುಕ್ ಮೂಲಕ ಯುವತಿಯೊಬ್ಬಳು ಪರಿಚಯವಾಗಿ ಜೆಡಿಎಸ್ ಮುಖಂಡನಿಂದ ಲಕ್ಷ ಲಕ್ಷ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಉದ್ಯಮಿಯ ಪುತ್ರಿ ಎಂದು ಪರಿಚಯಿಸಿಕೊಂಡ ಯುವತಿ ಜೆಡಿಎಸ್ ಮುಖಂಡನಿಂದ 9.70 ಲಕ್ಷ ರೂ ದೋಚಿದ್ದಳು, ಆಕೆಯನ್ನು ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಂದ್ರಹಳ್ಳಿ ಮುಖ್ಯರಸ್ತೆ ತಿಗಳರಪಾಳ್ಯದ ನಿವಾಸಿ ಹರಿಣಿ(25) ಸಂಬಂಧಿಗಳಾದ ರವಿ(40) ಪ್ರಕಾಶ್ (39) ಬಂಧಿತರು, ಆರೋಪಿಗಳ ಬಳಿ 4.50 ಲಕ್ಷ ರೂ ನಗದು, ಕೃತ್ಯಕ್ಕೆ ಬಳಸಿದ್ದ ಆಟೋ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

Girl cheated JDS leader as Facebook friend

ಇವರ ವಿರುದ್ಧ ಜೆಡಿಎಸ್ ಬೆಂಗಳೂರು ನಗರ ಘಟಕದ ಕಾರ್ಯದರ್ಶಿ ಎಲ್ ಶ್ರೀನಿವಾಸ್ ದೂರು ದಾಖಲಿಸಿದ್ದರು. ಆಕೆ ಆಗಸ್ಟ್ 24ರಂದು ಶ್ರೀನಿವಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಸಂದೇಶ ಕಳಿಸಿದ್ದಳು, ಅದಕ್ಕೆ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದರು, ಇದಾದ ಬಳಿಕ ಆಕೆ ಪೇ ಪದೇ ಮೆಸೇಜ್ ಕಳುಹಿಸುತ್ತಿದ್ದಾಗ ನಂಬರ್ ನ್ನು ವಿನಿಮಯ ಮಾಡಿಕೊಂಡಿದ್ದರು.

ತಾನು ಉದ್ಯಮಿಯ ಪುತ್ರಿ, ಮ್ಯೂಸಿಕಲ್ ಸಂಸ್ಥೆಯೊಂದನ್ನು ನಡೆಸುತ್ತಿರುವುದಾಗಿ ಸುಳ್ಳು ಹೇಳಿದ್ದಳು, ಸಂಸ್ಥೆ ನಡೆಸಲು ಜಾಗ ಹುಡುಕುತ್ತಿದ್ದೇನೆ ಎಂದು ಹೇಳಿ ನಂಬಿಸಿದ್ದಳು. ಆ.29ರಂದು ಶ್ರೀನಿವಾಸ್ ಗೆ ಕರೆ ಮಾಡಿ ವಿವಿಧ ಕಾರಣಗಳನ್ನು ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು.

ಶ್ರೀನಿವಾಸ್ 2.70 ಲಕ್ಷ ರೂ ನೀಡಿದ್ದ ಬಳಿಕ ಮೂರ್ನಾಲ್ಕು ಬಾರಿ ಇದೇ ರೀತಿಯಾದಾಗ ಆತನಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದ.ಇದೀಗ ಆಕೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+