ಸ್ನೇಹಿತೆಯನ್ನು ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ: ಯುವಕನ ಮೇಲೆ ಎಫ್‌ಐಆರ್
ಬೆಂಗಳೂರು, ಮಾರ್ಚ್ 25: ಸ್ನೇಹಿತೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಯುವಕನ ಮೇಲೆ ಎಫ್‌ಐಆರ್ ದಾಖಲಾಗಿದೆ.
24 ವರ್ಷದ ಯುವತಿ ನೀಡಿರುವ ದೂರಿನ ಮೇರೆಗೆ ಕೊತ್ತನೂರು ಪೊಲೀಸರು ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಯುವತಿಯು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಯುವಕ ಇರುವ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಯುವಕ ಶದತ್ ಮೊಹಮ್ಮದ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಯುವತಿ ಹಾಗೂ ಶದ್ದತ್ ಇಂದಿರಾನಗರದಲ್ಲಿರುವ ಕ್ಲಬ್ ಒಂದಕ್ಕೆ ತೆರಳಿದ್ದರು. ಎಲ್ಲರೂ ಶದ್ದತ್ ಅವರ ಅಪಾರ್ಟ್‌ಮೆಂಟ್‌ನಲ್ಲೇ ಉಳಿಯಲು ನಿರ್ಧರಿಸಿದರು.

ಆಕೆ ನಿದ್ರೆಯಲ್ಲಿರುವಾಗ ಬೆಳಗಿನ ಜಾವ ಸುಮಾರು 6 ಗಂಟೆಯ ವೇಳೆಗೆ ಆಕೆ ಮಲಗಿದ್ದ ರೂಮಿಗೆ ಬಂದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಆಕೆಯ ಮೈಮೇಲಿದ್ದ ಬಟ್ಟೆಯನ್ನು ತೆಗೆಯಲು ಯತ್ನಿಸಿದ್ದ ಹಾಗೂ ಲೈಂಗಿಕ ಕಿರುಕುಳ ನೀಡಿದ್ದ ಕೊನೆಗೆ ಸ್ನೇಹಿತರ ಸಹಾಯದಿಂದ ಮನೆಯಿಂದ ಹೊರಗೆ ಬಂದೆ ಎಂದು ಆಕೆ ತಿಳಿಸಿದ್ದಾರೆ.












Click it and Unblock the Notifications