ಭಾರತೀಯ ಹವಾಮಾನ ಇಲಾಖೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ
ಬೆಂಗಳೂರು, ಜನವರಿ 18 : ನಗರದ ಅರಮನೆ ರಸ್ತೆಯಲ್ಲಿರುವ ಭಾರತೀಯ ಹವಾಮಾನ ಕೇಂದ್ರವು ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.
ಕೇಂದ್ರದ ಸಂಸ್ಥಾಪನಾ ದಿನದ ಅಂಗವಾಗಿ ಜ.20 ರವರೆಗೆ ಬೆಳಗ್ಗೆ10 ರಿಂದ ಸಂಜೆ 5 ರವರೆಗೆ ನಾಗರಿಕರ ಭೇಟಿಗೆ ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕರು ಭೇಟಿ ನೀಡಿ ಕೇಂದ್ರದ ಕಾರ್ಯ ನಿರ್ವಹಣೆ ಹಾಗೂ ಹವಾಮಾನಕ್ಕೆ ಸಂಬಂಧಿಸಿದ ನಾನಾ ಮಾಹಿತಿಯನ್ನು ತಜ್ಞರಿಂದ ಪಡೆಯಬಹುದು.

ಕೇಂದ್ರದ ಕಾರ್ಯ ಚಟುವಟಿಕೆ ಕುರಿತು ಪ್ರದರ್ಶನ ವೀಕ್ಷಿಸಬಹುದು. ಉಪಗ್ರಹ ಆಧಾರಿತ ಹವಾಮಾನ ಮುನ್ಸೂಚನೆ ನೀಡುವ ವಿಧಾನ, ಮಳೆ-ಚಳಿ ಹಾಗೂ ಋತುಮಾನಗಳ ಬದಲಾವಣೆಯಲ್ಲಿನ ಮಾಹಿತಿ ಪಡೆಯಬಹುದು. ಮಳೆ ಮಾಪನ ಸಹಿತ ನಾನಾ ಉಪಕರಣಗಳನ್ನು ವೀಕ್ಷಿಸಬಹುದು. ಐಎಂಡಿ ನಿರ್ದೇಶಕ ಸುಂದರ್ ಮೇತ್ರಿ ನಾಗರಿಕರಲ್ಲಿ ಹವಾಮಾನ ಕುರಿತು ಜಾಗೃತಿ ಮೂಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.











Click it and Unblock the Notifications