ಫ್ರೇಜರ್ ಟೌನ್ ರೇಪ್: ಕೊನೆಯ ಆರೋಪಿ ಬಂಧನ

ಪಿಳ್ಳಣ್ಣ ಗಾರ್ಡನ್ ನಿವಾಸಿ ಶಫೀಕ್(27) ಬಂಧಿತ ಆರೋಪಿ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಐವರು ಆರೋಪಿಗಳು ಸೆರೆ ಸಿಕ್ಕಂತಾಗಿದೆ.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಶಫೀಕ್ ನಾಪತ್ತೆಯಾದ ಬಳಿಕ ನಿರಂತರವಾಗಿ ಮೊಬೈಲ್ ಬದಲಿಸುತ್ತಿದ್ದ. ಹೀಗಾಗಿ ಬಂಧನ ಕಷ್ಟವಾಗಿತ್ತು. ಆದರೆ, ಬಂಧಿತ ನಾಲ್ವರು ನೀಡಿದ ಮಾಹಿತಿ ಮೆರೆಗೆ ಬುಧವಾರ ಬೆಳಿಗ್ಗೆ ಬೆಂಗಳೂರಿನ ಹೊರವಲಯದಲ್ಲಿ ಶಫೀಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನಾ ದಿನ ಆರೋಪಿಗಳ ಜತೆ ಇದ್ದ ಶಫೀಕ್, ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದ. ಈತ ಹಳೆ ಕಾರುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.[ಪೊಲೀಸರಿಗೆ ಯುವತಿ ನೀಡಿದ ದೂರಿನಲ್ಲಿ ಏನಿದೆ?]
ಪ್ರಕರಣದ ಪ್ರಮುಖ ಆರೋಪಿ ಹೈದರ್ ನಾಸಿರ್ ಬಂಧನದ ನಂತರ ತಲೆಮರೆಸಿಕೊಂಡಿದ್ದ ಮಹಮದ್ ಹಫೀಜ್, ಸಾವೂದ್ ಮತ್ತು ಶೇಖ್ ಶೋಯಬ್‌ನನ್ನು ಪೊಲೀಸರು ಜು. 19ರಂದು ಹೊಸೂರಿನಲ್ಲಿ ಬಂಧಿಸಿದ್ದರು. ಆದರೆ, ಶಫೀಕ್ ಸಿಕ್ಕಿರಲಿಲ್ಲ.[ಫ್ರೇಜರ್ ಟೌನ್ ರೇಪ್ ಕೇಸ್ : ಮೂವರ ಬಂಧನ]
ಜು.11ರಂದು ರಾತ್ರಿ ಫ್ರೇಜರ್ ಟೌನ್‌ಲ್ಲಿ ತನ್ನ ಮನೆ ಮುಂದೆ ಕಾರಿನಲ್ಲಿ ಕುಳಿತಿದ್ದ ಯುವತಿಯನ್ನು ಪ್ರಮುಖ ಆರೋಪಿ ನಾಸೀರ್ ಹೈದರ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಅಪಹರಿಸಿ ಕಾರಿನಲ್ಲಿ ಅತ್ಯಾಚಾರ ಎಸಗಿದ್ದ.












Click it and Unblock the Notifications