ಲಾಜಿಸ್ಟಿಕ್ ಕಂಪನಿ ಗೋದಾಮಿನಲ್ಲಿ ಛಾವಣಿ ಕುಸಿತ: ನಾಲ್ವರು ಸಿಲುಕಿದ ಶಂಕೆ
ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನ ಲಾಜಿಸ್ಟಿಕ್ ಕಂಪನಿ ಗೋಡೌನ್‌ನಲ್ಲಿ ಛಾವಣಿ ಕುಸಿದುಬಿದ್ದು ಅವಘಡ ಸಂಭವಿಸಿದೆ. ಅವಶೇಷಗಳಡಿ ನಾಲ್ವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ವೈಟ್ ಫೀಲ್ಡ್‌ನಲ್ಲಿರುವ ಓ ಫಾರ್ಮ್ ಕಂಪನಿ ಬಳಿಯ ಗೋದಾಮು ಇದಾಗಿದೆ. ಗೋದಾಮಿನಲ್ಲಿ ಏಕಾಏಕಿ ಛಾವಣಿ ಕುಸಿದುಬಿದ್ದಿದೆ. ಛಾವಣಿ ಅಡಿ ನಾಲ್ಕು ಮಂದಿ ಸಿಲುಕಿರುವ ಸಾಧ್ಯತೆ ಇದೆ. ಲಾಜಿಸ್ಟಿಕ್ ಕಂಪನಿಯ ಅಧಿಕಾರಿಗಳೆಲ್ಲರೂ ದೌಡಾಯಿಸಿದ್ದಾರೆ, ಪೊಲೀಸರು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ಕಂಪನಿಯ ಗೋದಾಮು ಎಷ್ಟು ವರ್ಷ ಹಳೆಯದ್ದು, ಅದು ಕುಸಿದು ಬೀಳಲು ಕಾರಣವೇನು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದೀಗ ಅವಶೇಷಗಳಡಿ ಸಿಲುಕಿರುವವರನ್ನು ಹೊರಕ್ಕೆ ತೆಗೆಯುವ ಪ್ರಕ್ರಿಯೆ ಆರಂಭವಾಗಿದೆ. ಕಾಡುಗೋಡಿ ಪೊಲೀಸರು ಭೇಟಿ ನೀಡಿದ್ದಾರೆ.













Click it and Unblock the Notifications