• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಾಜಿನಗರದ ಹೊಸ ಸುದ್ದಿ; ರೋಷನ್ ಬೇಗ್ ಕಾಂಗ್ರೆಸ್‌ಗೆ ವಾಪಸ್?

|

ಬೆಂಗಳೂರು, ಜೂನ್ 12 : 2019ರ ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಮಾಜಿ ಸಚಿವ ರೋಷನ್ ಬೇಗ್ ಪಕ್ಷದಿಂದ ಅಮಾನತುಗೊಂಡಿದ್ದರು. ಆದರೆ, ಯಾವುದೇ ಪಕ್ಷ ಸೇರದೆ ತಟಸ್ಥವಾಗಿ ಉಳಿದಿದ್ದರು.

   ಇವರಿಗೇ ಪರಿಷತ್ ಸ್ಥಾನ ಕೊಡಬೇಕು ಎಂದ ಸಚಿವ ಎಸ್.ಟಿ ಸೋಮಶೇಖರ್ | ST Somashekar | Oneindia Kannada

   ಈಗ ಶಿವಾಜಿನಗರದಿಂದ ಹೊಸ ಸುದ್ದಿಯೊಂದು ಬಂದಿದೆ. ರೋಷನ್ ಬೇಗ್ ಕಾಂಗ್ರೆಸ್‌ಗೆ ವಾಪಸ್ ಆಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದೆ. ಕರ್ನಾಟಕ ಕಾಂಗ್ರೆಸ್‌ನ ಕೆಲವು ನಾಯಕರು ಸಹ ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

   ಶಿವಾಜಿನಗರದ ರೋಷನ್ ಬೇಗ್ ಏಕೆ ಬಿಜೆಪಿ ಸೇರುತ್ತಿಲ್ಲ?

   ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಂ. ಬಿ. ಪಾಟೀಲ್ ಈ ಕುರಿತು ಹೇಳಿಕೆ ನೀಡಿದ್ದು, "ಕಾಂಗ್ರೆಸ್‌ಗೆ ಬರುತ್ತೇವೆ ಎಂದವರನ್ನೆಲ್ಲ ಸೇರಿಸಿಕೊಳ್ಳಲು ಆಗಲ್ಲ. ಅದಕ್ಕಾಗಿಯೇ ಒಂದು ಸಮಿತಿ ಇದೆ. ಬರುವವರಿಂದ ನಮಗೆ ಹಾನಿಯಾಗಬಾರದು. ಹೋಗುವಾಗ ಏನು ಹಾನಿ ಮಾಡಿದ್ದಾರೆ? ಎಂದು ನೋಡಬೇಕಾಗುತ್ತದೆ" ಎಂದು ಹೇಳಿದ್ದಾರೆ.

   ಕಾಂಗ್ರೆಸ್‌ನಿಂದ ರೋಷನ್ ಬೇಗ್ ಅಮಾನತು, ಯಾರು ಏನು ಹೇಳಿದರು?

   ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಶಾಸಕ ಸ್ಥಾನಕ್ಕೆ ರೋಷನ್ ಬೇಗ್ ರಾಜೀನಾಮೆ ನೀಡಿದ್ದರು. ಆದರೆ, ಇತರ ಅನರ್ಹ ಶಾಸಕರ ಜೊತೆ ಅವರು ಬಿಜೆಪಿ ಸೇರಿರಲಿಲ್ಲ, ಶಿವಾಜಿನಗರ ಉಪ ಚುನಾವಣೆಯಿಂದ ಸಹ ದೂರವುಳಿದಿದ್ದರು.

   ಕಾಂಗ್ರೆಸ್ ನಾಯಕರಿಗೆ ರೋಷನ್ ಬೇಗ್ ಪ್ರಶ್ನೆಗಳು

   ಹಿರಿಯರು ತೀರ್ಮಾನ ಮಾಡುತ್ತಾರೆ

   ಹಿರಿಯರು ತೀರ್ಮಾನ ಮಾಡುತ್ತಾರೆ

   ಮಾಜಿ ಸಚಿವ ಎಂ. ಬಿ. ಪಾಟೀಲ್, "ರೋಷನ್ ಬೇಗ್ ಅವರು ಬರ್ತಾರೋ, ಇಲ್ಲವೋ ಗೊತ್ತಿಲ್ಲ. ನಮ್ಮ ನಾಯಕರ ಜೊತೆ ಚರ್ಚೆ ಮಾಡಿರಬಹುದು. ಪಕ್ಷದ ಚೌಕಟ್ಟಿನಲ್ಲಿ ಮೊದಲು ಚರ್ಚೆ ಮಾಡಬೇಕು. ಆ ನಂತರ ಹಿರಿಯರು ತೀರ್ಮಾನ ಮಾಡುತ್ತಾರೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ. ಕೆ. ಶಿವಕುಮಾರ್ ನಿರ್ಧಾರ ಮಾಡುತ್ತಾರೆ" ಎಂದು ಹೇಳಿದ್ದಾರೆ.

   ಬಿಜೆಪಿ ಏಕೆ ಸೇರಲಿಲ್ಲ?

   ಬಿಜೆಪಿ ಏಕೆ ಸೇರಲಿಲ್ಲ?

   ಮಾಜಿ ಸಚಿವ ರೋಷನ್ ಬೇಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಅಮಾನತುಗೊಂಡರೂ ಸಹ ಅವರು ಬಿಜೆಪಿ ಸೇರಲಿಲ್ಲ. ಐಎಂಎ ಹಗರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದಿತ್ತು. ಆದ್ದರಿಂದ, ಅವರು ಬಿಜೆಪಿ ಸೇರುವುದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿರಲಿಲ್ಲ ಎಂಬ ಸುದ್ದಿಗಳು ಇವೆ.

   ಉಪ ಚುನಾವಣೆ ಟಿಕೆಟ್ ಸಿಗಲಿಲ್ಲ

   ಉಪ ಚುನಾವಣೆ ಟಿಕೆಟ್ ಸಿಗಲಿಲ್ಲ

   ರೋಷನ್ ಬೇಗ್ ಅವರು ಬಿಜೆಪಿ ಸೇರಲಿಲ್ಲ. ಶಿವಾಜಿನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ. ಸರವಣ ಅವರು ಬಿಜೆಪಿಯಿಂದ ಕಣಕ್ಕಿಳಿದರೂ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ರಿಜ್ವಾನ್ ಅರ್ಷದ್ ಉಪ ಚುನಾವಣೆಯಲ್ಲಿ ಗೆದ್ದರು. ಈಗ ರೋಷನ್ ಬೇಗ್ ಕಾಂಗ್ರೆಸ್‌ಗೆ ವಾಪಸ್ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

   ಪಕ್ಷದಿಂದ ಅಮಾನತು

   ಪಕ್ಷದಿಂದ ಅಮಾನತು

   ಲೋಕಸಭೆ ಚುನಾವಣೆ ಮುಗಿದ ಬಳಿಕ ರೋಷನ್ ಬೇಗ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ವಿರುದ್ಧ ಟೀಕಾ ಪ್ರಕಾರ ನಡೆಸಿದ್ದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ 2019ರ ಜೂನ್‌ನಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.

   English summary
   Former minister and Shivaji Nagar assembly seat disqualified MLA Roshan Baig may join Congress again. He did not join BJP with 16 16 disqualified MLA's.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X