ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಂಸದೆ ತೇಜಸ್ವಿನಿ ಗೌಡ ಬಿಜೆಪಿಗೆ ಸೇರ್ಪಡೆ

By Mahesh
|
Google Oneindia Kannada News

ಬೆಂಗಳೂರು, ಮಾ.12: ಕಾಂಗ್ರೆಸ್ ಮಾಜಿ ಸಂಸದೆ ತೇಜಸ್ವಿನಿ ಗೌಡ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷದ ಸೇರಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಆರ್ ಆಶೋಕ್, ಶಾಸಕ ಸಿ.ಟಿ ರವಿ, ನಿರ್ಮಲ್ ಕುಮಾರ್ ಸುರಾನಾ ಮುಂತಾದ ಬಿಜೆಪಿ ಮುಖಂಡರು ತೇಜಸ್ವಿನಿ ಅವರನ್ನು ಸ್ವಾಗತಿಸಿದರು.

ತೇಜಸ್ವಿನಿ ಶ್ರೀರಮೇಶ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಸಾಕಷ್ಟು ಕಸರತ್ತು ನಡೆಸಿ ವಿಫಲರಾಗಿದ್ದರು. ಬೆಂಗಳೂರು ಗ್ರಾಮಾಂತರಕ್ಕೆ ಹಾಲಿ ಸಂಸದ ಡಿಕೆ ಸುರೇಶ್ ಅವರು ಕಾಯಂ ಆಗಿದ್ದು, ಬೆಂಗಳೂರು ದಕ್ಷಿಣದಿಂದ ನಂದನ್ ನಿಲೇಕಣಿ ಅವರ ಹೆಸರು ಘೋಷಣೆ ಹಿನ್ನೆಲೆಯಲ್ಲಿ ತಮಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ದಕ್ಕದು ಎಂಬ ಲೆಕ್ಕಾಚಾರದಲ್ಲಿ ತೇಜಸ್ವಿನಿ ಶ್ರೀರಮೇಶ್, ಅನಿವಾರ್ಯವಾಗಿ ಅನ್ಯ ಪಕ್ಷಗಳತ್ತ ಮುಖ ಮಾಡುವಂತಾಗಿದೆ.

Former Congress MP Tejaswini Gowda joins BJP

'ಮಾಜಿ ಕಾಂಗ್ರೆಸ್‌ ಸಂಸದೆ ತೇಜಸ್ವಿನಿ ರಮೇಶ್‌ ಬಿಜೆಪಿ ಸೇರುವ ಕುರಿತಂತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಾಯಕರು ಕೂಡ ಒಪ್ಪಿಗೆ ನೀಡಿದ್ದಾರೆ' ಎಂದು ಸದಾನಂದಗೌಡ ಈ ಮುಂಚೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಇದು ಒಕ್ಕಲಿಗ ಮತಗಳನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೆಳೆಯಲು ಸಹಕಾರಿಯಾಗಬಹುದಾಗಿದೆ ಎಣಿಕೆ ಬಿಜೆಪಿಯದ್ದಾಗಿದೆ.

2004ರಲ್ಲಿ ಬೆಂಗಳೂರಿನ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು 1.22 ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಸಂಸತ್ತು ಪ್ರವೇಶಿಸುವ ಮೂಲಕ ತೇಜಸ್ವಿನಿ ಅವರು ರಾಜಕೀಯವಾಗಿ ಗುರುತಿಸಿಕೊಂಡರು. ಇದಕ್ಕೂ ಮುನ್ನ ಉದಯ ಟಿವಿಯಲ್ಲಿ ನಿರೂಪಕಿ, ಸುದ್ದಿ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸಿದ್ದರು.

ಕನಕಪುರದಲ್ಲಿ ಡಿಕೆ ಶಿವಕುಮಾರ್ ಹಾಗೂ ಅವರ ಬೆಂಬಲಿಗರು ಗೂಂಡಾಗಿರಿ ಮಾಡುತ್ತಿದ್ದಾರೆ ನನ್ನ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದಾರೆ. ನನಗೆ ಪ್ರತಿ ಸಾರಿ ಟಿಕೆಟ್ ತಪ್ಪುವಂತೆ ಮಾಡುವಲ್ಲಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ತೇಜಸ್ವಿನಿ ಗೌಡ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ತೇಜಸ್ವಿನಿ ಗೌಡ ಅವರನ್ನು ಕಾಂಗ್ರೆಸ್ ನಿಂದ ಬಿಜೆಪಿಗೆ ಕರೆ ತರುವಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಪಾತ್ರ ಹಿರಿದಾಗಿದೆ.

'ರಾಜಕಾರಣದಲ್ಲಿ ನೈತಿಕತೆ ಉಳಿದಿಲ್ಲ. ಇಲ್ಲಿ ಹಣವಿಲ್ಲದೆ ರಾಜಕಾರಣ ನಡೆಸಲು ಸಾಧ್ಯವೇ ಇಲ್ಲ. ಒಂದು ಎಂಪಿ ಸೀಟು ಗೆಲ್ಲಬೇಕು ಎಂದರೆ 20 ಕೋಟಿ ರೂ. ಬೇಕು. ಇದನ್ನು ಗಾಂಧೀಜಿ, ಅಂಬೇಡ್ಕರ್, ನಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಮೇಲೆ ಪ್ರಮಾಣ ಮಾಡಿ ಹೇಳಲೂ ಸಿದ್ಧ'' ಎಂದು ತೇಜಸ್ವಿನಿ ಈ ಹಿಂದೆ ಘೋಷಿಸಿದ್ದರು.

English summary
Former Congress MP Tejaswini Gowda joined BJP today(Mar.12) at party office Malleswaram, Bangalore. BJP President Prahlad Joshi welcomed her to the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X