ನಿಖಿಲ್ ಕುಮಾರಸ್ವಾಮಿಯನ್ನು ಹಾಡಿಹೊಗಳಿದ ಎಸ್ ಎಂ ಕೃಷ್ಣ

Recommended Video

      ನಿಖಿಲ್ ಕುಮಾರಸ್ವಾಮಿಯನ್ನ ಹಾದಿ ಹೊಗಳಿದ ಮಾಜಿ ಸಿಎಂ ಎಸ್ ಎಂ ಕೃಷ್ಣ | Oneindia Kannada

      ಬೆಂಗಳೂರು, ಜೂನ್ 1: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯ ನಡೆಯನ್ನು ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ಹಾಡಿ ಹೊಗಳಿದ್ದಾರೆ.

      ಸೋಲಿನ ನಂತರ, ನಿಮ್ಮ ಹೇಳಿಕೆಯಿಂದ ಪ್ರಭಾವಿತನಾಗಿದ್ದೇನೆ ಎಂದು ಟ್ವೀಟ್ ಮಾಡಿರುವ ಎಸ್ ಎಂ ಕೃಷ್ಣ, ನಿಮಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದಾರೆ.

      ಮೇ 31ರಂದು ಬಿಡುಗಡೆಯಾಗಿರುವ ಅಂಬರೀಶ್ ಪುತ್ರ ಅಭಿ ಮುಖ್ಯ ಭೂಮಿಕೆಯಲ್ಲಿರುವ 'ಅಮರ್' ಚಿತ್ರಕ್ಕೆ ಶುಭವಾಗಲಿ ಎಂದು ನಿಖಿಲ್ ಹಾರೈಸಿದ್ದರು. ಇದಕ್ಕೆ ಮುತ್ಸದ್ದಿ ರಾಜಕಾರಣಿ ಎಸ್ಎಂಕೆ, ಇದೊಂದು ರಾಜಕೀಯ ಪ್ರಬುದ್ದತೆ ಎಂದು ನಿಖಿಲ್ ಬೆನ್ನು ತಟ್ಟಿದ್ದಾರೆ.

      Former CM S M Krishna praised Nikhil Kumaraswamy for his tweet on Abhi on his new movie

      'ಅಭಿಗೆ ಶುಭ ಕೋರುವ ನಿಮ್ಮ ಹೇಳಿಕೆಯನ್ನು ನೋಡಿದೆ. ನಿಮ್ಮ ನಡೆಯಿಂದ ಪ್ರಭಾವಿತನಾಗಿದ್ದು, ಇದನ್ನೇ ರಾಜಕೀಯ ಪ್ರಬುದ್ಧತೆ ಎನ್ನುವುದು. ರಾಜಕೀಯ ಬದುಕಿನಲ್ಲಿ ಚುನಾವಣೆ ಬರುತ್ತದೆ, ಹೋಗುತ್ತದೆ. ನೀವು ಮುಂದೊಂದು ದಿನ ಜಯಶೀಲರಾಗುತ್ತೀರಿ' ಎಂದು ಎಸ್ ಎಂ ಕೃಷ್ಣ, ನಿಖಿಲ್ ಅವರನ್ನು ಹೊಗಳಿದ್ದಾರೆ.

      ಮಂಡ್ಯದಿಂದ ಆಯ್ಕೆಯಾಗಿರುವ ಸಂಸತ್ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಷ್ ಅವರಿಗೆ ನನ್ನ ಅಭಿನಂದನೆಗಳು. ಕೇಂದ್ರ ಸರ್ಕಾರದಿಂದ ಅಗತ್ಯ ಬೆಂಬಲ, ನೆರವು ಸಿಗದೆ ನಮ್ಮ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈಗ ಕೇಂದ್ರದಲ್ಲಿ ಆಳುವ ಪಕ್ಷದ ಬೆಂಬಲದೊಂದಿಗೆ ಇಲ್ಲಿ ನೀವು ಗೆದ್ದಿರುವುದರಿಂದ, ನಮ್ಮ ರೈತರಿಗೆ ಅರ್ಹ ನೆರವು, ಯೋಜನೆಗಳನ್ನು ತರುವಲ್ಲಿ ತಾವು ಯಶಸ್ವಿಯಾಗುವಿರಿ ಎನ್ನುವುದು ಮಂಡ್ಯದ ಜನರ ಹಾಗು ರೈತರ ನಿರೀಕ್ಷೆಯಾಗಿದೆ ಎಂದು ನಿಖಿಲ್, ಫೇಸ್ ಬುಕ್ ನಲ್ಲಿ ಶುಭ ಕೋರಿದ್ದರು.

      ಶುಕ್ರವಾರ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಚೊಚ್ಚಲಅಮರ್' ಸಿನಿಮಾ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತಿದ್ದೇನೆ. ಎಲ್ಲರೂ ದಯವಿಟ್ಟು ಥಿಯೇಟರ್ ಗಳಿಗೆ ಹೋಗಿ ಅಮರ್' ಚಿತ್ರವನ್ನು ನೋಡಿ ಎಂದು ನಿಖಿಲ್ ವಿಷ್ ಮಾಡಿದ್ದರು. ಇದಕ್ಕೆ ಧನ್ಯವಾದ ಗೆಳೆಯ ಎಂದು ಅಭಿ ಕೂಡಾ ಪ್ರತಿಕ್ರಿಯೆ ನೀಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+