Bengaluru Best: ಬೆಂಗಳೂರಿಗೆ ವಿದೇಶಿಗರ ಫುಲ್ ಮಾರ್ಕ್ಸ್: ಭಾರತದಲ್ಲಿ ವಾಸಕ್ಕೆ ಸೂಕ್ತ ನಗರ ಎಂದ ಜ್ಯಾಕ್ ಹೀಟನ್, ವಿಡಿಯೋ ವೈರಲ್

Bengaluru Best: ಬೆಂಗಳೂರು ಮಹಾನಗರದ ಬಗ್ಗೆ ಕೆಲವು ಉತ್ತರ ಭಾರತೀಯರು ಎಷ್ಟೇ ಅಪಪ್ರಚಾರ ಮಾಡಿದರೂ, ಬೆಂಗಳೂರಿನ ಬ್ರ್ಯಾಂಡಿಂಗ್ ಹಾಗೂ ಹಿರಿಮೆ ಕಡಿಮೆಯಾಗಿಲ್ಲ. ಬೆಂಗಳೂರು ಮಹಾನಗರವನ್ನು ಮೆಚ್ಚಿಕೊಳ್ಳುವವರು ಹಾಗೂ ಬೆಂಗಳೂರು ನಗರವನ್ನು ಪ್ರೇಮಿಸುವವರು ಇಂದಿಗೂ ಬೆಂಗಳೂರು ನಗರವನ್ನು ಪ್ರೀತಿಸುವುದು ಮುಂದುವರಿಯುತ್ತಲ್ಲೇ ಇದೆ. ಇದೀಗ ಬೆಂಗಳೂರು ಮಹಾನಗರದ ಬಗ್ಗೆ ವಿದೇಶಿಗರೊಬ್ಬರು ಹೇಳಿರುವ ಮಾತುಗಳು ಹಾಗೂ ರ‍್ಯಾಂಕಿಂಗ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನ ಬಗ್ಗೆ ವಿದೇಶಿ ಪ್ರವಾಸಿಗರೊಬ್ಬರು ಭವಿಷ್ಯದಲ್ಲಿ ವಾಸಿಸುವ ಭಾರತದ ಏಕೈಕ ಸ್ಥಳ ಎಂದರೆ ಅದು ಬೆಂಗಳೂರು ಮಾತ್ರ ಅಂತ ಹೇಳಿದ್ದಾರೆ. ಜ್ಯಾಕ್ ಹೀಟನ್ ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬೆಂಗಳೂರಿನ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಬೆಂಗಳೂರು - ಕರ್ನಾಟಕಕ್ಕೆ ಭೇಟಿ ನೀಡಿರುವ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ನಗರದ ಆಧುನಿಕ ಜೀವನಶೈಲಿ, ಊಟದ ವೈವಿಧ್ಯತೆ, ಹಸಿರು ಸ್ಥಳಗಳು ಮತ್ತು ನವೋದ್ಯಮ ಸಂಸ್ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Bengaluru Best

ಬೆಂಗಳೂರು ಆಧುನಿಕತೆಗೆ ಫುಲ್ ಮಾರ್ಕ್ಸ್‌ ಕೊಟ್ಟ ವಿದೇಶಿಗ

ವೈರಲ್ ವಿಡಿಯೋದಲ್ಲಿ ಹೀಟನ್ ಅವರು, ಭವಿಷ್ಯದಲ್ಲಿ ವಾಸಿಸುವುದಕ್ಕೆ ಯೋಗ್ಯವಾದ ಭಾರತದ ಏಕೈಕ ಸ್ಥಳವಾಗಿ ನಾನು ಬೆಂಗಳೂರನ್ನು ಕಂಡುಕೊಂಡಿದ್ದೇನೆ. ನಿಜವಾಗಿಯೂ ಯಾವ ನಗರ ಉತ್ತಮವಾಗಿದೆ ಎಂದು ಕಂಡುಕೊಳ್ಳುವುದಕ್ಕೆ ನಾನು ನಾನು ಭಾರತದ ಪ್ರತಿಯೊಂದು ರಾಜ್ಯಕ್ಕೂ ಭೇಟಿ ನೀಡುತ್ತಿದ್ದೇನೆ. ಮುಂದಿನದು ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನ ನೆಲೆಯಾಗಿರುವ ಕರ್ನಾಟಕ. ನಾನು ಇಲ್ಲಿ ಎರಡು ವಾರಗಳನ್ನು ಕಳೆದಿದ್ದೇನೆ ಮತ್ತು ಈ ಸುಂದರ ನಗರವನ್ನು ನೋಡಿ ಅಚ್ಚರಿಗೆ ಒಳಗಾಗಿದ್ದೇನೆ.

ಭಾರತದ ಪ್ರತಿಯೊಂದು ರಾಜ್ಯಕ್ಕೂ ನಾನು ಯಾಕೆ ಹೋಗಬೇಕು ಅನ್ನಿಸುತ್ತಿದೆ ಎನ್ನುವ ಶೀರ್ಷಿಕೆಯೊಂದಿಗೆ ವಿಶೇಷ ಬರಹವನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರತ ಬಗ್ಗೆ ಕೆಲವೊಮ್ಮೆ ತಪ್ಪು ಕಲ್ಪನೆ ಹಂಚಲಾಗಿದೆ. ಎಲ್ಲೆಡೆ ಸ್ವಚ್ಛತೆ ಕೊರತೆ ಅಥವಾ ಭದ್ರತೆ ಒಂದೇ ರೀತಿ ಇರೋದಿಲ್ಲ, ಆದರೆ ಅದಷ್ಟೇ ಅಲ್ಲ-ಒಳ್ಳೆಯ ವಿಷಯಗಳೂ ತುಂಬಾ ಇವೆ. ನಾನು ಭೇಟಿ ಮಾಡುವ ಪ್ರತಿಯೊಂದು ರಾಜ್ಯದ ಒಳ್ಳೆಯದನ್ನೂ, ನನ್ನ ನಿಜವಾದ ಅನುಭವವನ್ನೂ ಹಂಚಿಕೊಳ್ಳಬೇಕೆಂದು ನನಗೆ ಅನಿಸಿತು. ಭಾರತ ಅನ್ನೋ ದೇಶ ನನಗೆ ತುಂಬಾ ಆಸಕ್ತಿಕರ.

ಇಗೋ ಕರ್ನಾಟಕದ ಬಗ್ಗೆ

ನನಗೆ ಮೊದಲಿಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆದರೆ ಇಲ್ಲಿ ಬಂದು ನನಗೆ ತುಂಬಾ ಇಷ್ಟವಾಯಿತು. ಬೆಂಗಳೂರಿನಲ್ಲಿ (ಟ್ರಾಫಿಕ್ ಬಿಟ್ಟರೆ) ಬದುಕೋಕೆ ಸುಲಭ ಅನ್ನಿಸಿತು. ಇಲ್ಲಿ ಯುವಕರು ತುಂಬಾ ಶ್ರಮಪಟ್ಟು ತಮ್ಮ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಜೊತೆಗೆ ಜನರು ಸ್ನೇಹಪರವಾಗಿದ್ದಾರೆ. ನನ್ನ ಕೆಲ ಸ್ನೇಹಿತರು ಬೆಂಗಳೂರಿನಲ್ಲಿ ಇದ್ದರು, ಆದ್ದರಿಂದ ನನಗೆ ಸ್ಥಳೀಯ ಮಾಹಿತಿ ಸಿಕ್ಕಿತು. ಅಲ್ಲೇ ಹೋಳಿ ಹಬ್ಬ ಆಚರಿಸಿದ್ದು ನನಗೆ ವಿಶೇಷ ಅನುಭವ.

ಅದಕ್ಕಾಗಿ ಕರ್ನಾಟಕ ನನಗೆ ವಿಶೇಷವಾಗಿ ಇಷ್ಟವಾಯಿತು, ತಮಿಳುನಾಡಿಗಿಂತಲೂ ಹೆಚ್ಚು. ಎಲ್ಲರಿಗೂ ಈ ಅಭಿಪ್ರಾಯ ಇಷ್ಟವಾಗಲೇ ಬೇಕೆಂದು ಇಲ್ಲ. ಇದು ನನ್ನ ವೈಯಕ್ತಿಕ ಅನುಭವ ಮಾತ್ರ. ಎರಡೂ ರಾಜ್ಯಗಳನ್ನು ಮತ್ತೆ ಭೇಟಿ ಮಾಡಿ ಇನ್ನಷ್ಟು ತಿಳಿಯಲು ನನಗೆ ಆಸೆ ಇದೆ. ಭಾರತದ ಈ ಅದ್ಭುತ ಪ್ರಯಾಣವನ್ನು ಮುಂದುವರಿಸಲು ನನ್ನ ಜೊತೆಗೆ ಇರಿ - ಫಾಲೋ ಮಾಡಿ ಅಂತ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+