ಏರೋ ಇಂಡಿಯಾ: ಡ್ರೋಣ್, ಬಲೂನ್ ಹಾರಾಟ ನಿಷೇಧ

ಬೆಂಗಳೂರು, ಫೆಬ್ರವರಿ 15: ಬೆಂಗಳೂರಲ್ಲಿ ಫೆ.20ರಿಂದ 24ರ ವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಬಲೂನ್ ಹಾಗೂ ಡ್ರೋಣ್ ಹಾರಾಟವನ್ನು ನಿಷೇಧಿಸಲಾಗಿದೆ.

ಯಲಹಂಕ ವಾಯುನೆಲೆಯಲ್ಲಿ 12ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಬಲೂನ್ ಹಾರಾಟ ನಿಷೇಧಿಸಲಾಗಿದೆ.

ಸೇನಾ ಪ್ರದೇಶ ಅಥವಾ ವಾಯುನೆಲೆ, ವಿಮಾನ ನಿಲ್ದಾಣ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶ ಅಥವಾ ಈ ಪ್ರದೇಶದಲ್ಲಿ ಡ್ರೋಣ್ ಹಾರಾಟಕ್ಕೆ ಈಗಾಗಲೇ ನಿಷೇಧವಿದೆ. ಏರೋ ಇಂಡಿಯಾ ಸಂದರ್ಭದಲ್ಲಿ ನಿತ್ಯ ಹತ್ತಾರು ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಪ್ರದರ್ಶನಗೊಳ್ಳಲಿವೆ.

Flying of drone, balloons banned during Aero india 2019

ಡ್ರೋಣ್ ಗಳು ಆಕಾಶದಲ್ಲಿ ಕನಿಷ್ಠ 1-2 ಕಿ.ಮೀ ಎತ್ತರಕ್ಕೆ ಹಾರಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಡ್ರೋಣ್ ಅಥವಾ ಯುಎವಿ ಹಾರಾಟ ನಡೆಸುತ್ತಿರುವ ಹೆಲಿಕಾಪ್ಟರ್ ಅಥವಾ ಯುದ್ಧ ವಿಮಾನಕ್ಕೆ ಬಡಿದರೆ ದುರ್ಘಟನೆ ಸಂಭವಿಸುವ ಸಾಧ್ಯತೆ ಇದೆ.

ಕ್ರೀಡಾಕೂಟ, ರಾಜಕೀಯ ಸಮಾರಂಭಗಳಲ್ಲಿ ಹೀಲಿಯಂ ತುಂಬಿದ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಉದ್ಘಾಟನೆ ಮಾಡುತ್ತಾರೆ ಇದು ಹೆಚ್ಚು ಎತ್ತರಕ್ಕೆ ಹೋಗುತ್ತವೆ ಈ ಬಲೂನ್ ಹಾರಾಟವನ್ನು ಕೂಡ ನಿಷೇಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+