ಬೆಂಗಳೂರಿನ ವುಡ್‌ವರ್ಕ್ಸ್ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ
ಬೆಂಗಳೂರು, ಫೆಬ್ರವರಿ 18: ನಗರದ ವುಡ್‌ವರ್ಕ್ಸ್ ಗೋದಾಮಿನಲ್ಲಿ ಸೋಮವಾರ ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ.
ಚಾಮರಾಜಪೇಟೆಯಲ್ಲಿರುವ ವುಡ್‌ವರ್ಕ್ಸ್ ಗೋದಾಮು ಹೊತ್ತಿ ಉರಿದಿದೆ. ಎರಡು ಅಗ್ನಿ ಶಾಮಕ ವಾಹನಗಳೊಂದಿಗೆ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಕ ಪಕ್ಕ ಮನೆಗಳಿರುವ ಕಾರಣ ಬೆಂಕಿ ತಗುಲುವ ಅಪಾಯವಿತ್ತು ಆದರೆ ಅದೃಷ್ಟವಶಾತ್ ಯಾವುದೇ ಅನಾಹುತಗಳಾಗಿಲ್ಲ. ಆದರೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.

ಬೆಂಕಿ ಆವರಿಸುತ್ತಿದ್ದಂತೆ ಸ್ಥಳೀಯರು ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಶೀಘ್ರವೇ ಆಗಮಿಸಿ ಬೆಂಕಿ ನಂದಿಸಿದ್ದಾರೆ.












Click it and Unblock the Notifications