Final E- khata: ಬ್ಯಾಂಕ್‌, ಹಣಕಾಸು ಸಂಸ್ಥೆಯ ಪರವಾಗಿ ಆಸ್ತಿಗಳಿಗೆ ಅಂತಿಮ ಇ-ಖಾತಾ: ಹೊಸ ಅಪ್‌ಡೇಟ್‌

ಬಿಬಿಎಂಪಿಯು ಖಾತಾ ಹಾಗೂ ಇ ಖಾತಾಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಆದೇಶಗಳನ್ನು ಹೊರಡಿಸುತ್ತಿದೆ. ಬಿಬಿಎಂಪಿಯು ಇದೀಗ ಅಂತಿಮ ಇ ಖಾತಾಗೆ ಸಂಬಂಧಿಸಿದಂತೆ ಪ್ರಮುಖ ಸುತ್ತೊಲೆಯೊಂದನ್ನು ಹೊರಡಿಸಿದೆ. ಸರ್ಫೇಸಿ ಕಾಯ್ದೆಯಡಿಯಲ್ಲಿ ಮಾರಾಟ ಪ್ರಮಾಣಪತ್ರವನ್ನು ಕಾರ್ಯರೂಪಕ್ಕೆ ತರುವುದಕ್ಕೆ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಯ ಪರವಾಗಿ ಆಸ್ತಿಗಳಿಗೆ ಅಂತಿಮ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸುವ ವಿಧಾನಕ್ಕೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು ಪ್ರಮುಖ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.

ಕರ್ನಾಟಕ ಸರ್ಕಾರವು ದಾಖಲೆಗಳ ನೋಂದಣಿ ಒಳಗೊಂಡಂತೆ ಆಸ್ತಿ ವಹಿವಾಟುಗಳಿಗೆ ಇ-ಖಾತಾವನ್ನು ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸೆಕ್ಯುರಿಟೈಸೇಶನ್ ಮತ್ತು ಪುನರ್‌ ನಿರ್ಮಾಣ ಹಾಗೂ ಸೆಕ್ಯುರಿಟಿ ಬಡ್ಡಿ ಜಾರಿ ಕಾಯ್ದೆ 2002 with Securitization and Reconstruction of Financial Assets and Enforcement of Security Interest Act 2002 ಅನ್ನು ಇನ್ಮುಂದೆ ಇದನ್ನು ಸರ್ಫೇಸಿ ಕಾಯ್ದೆ ಎಂದು ಕರೆಯಲಾಗುತ್ತದೆ) ನಿಬಂಧನೆಗಳ ಅಡಿಯಲ್ಲಿ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಆಸ್ತಿಗಳಿಗೆ ಮಾರಾಟ ಪ್ರಮಾಣಪತ್ರವನ್ನು ನೋಂದಾಯಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

Final E-khata for Assets on Behalf of Banks and Financial Institutions

ಮುಂದುವರಿದು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪಾಲಿಕೆಯ ಆಸ್ತಿತೆರಿಗೆ ವಹಿಗಳಲ್ಲಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಯ ಪರವಾಗಿ ಅಂತಿಮ ಇ-ಖಾತಾ ಹಲವು ವಿಧಾನವನ್ನು ರಚಿಸಿರುವುದಾಗಿ ಬಿಬಿಎಂಪಿ ಹೇಳಿದೆ. ಸರ್ಫೇಸಿ ಕಾಯ್ದೆ ಅಡಿಯಲ್ಲಿ, ಒಂದು ಸ್ವತ್ತನ್ನು ಅಡಮಾನವಿಟ್ಟು ಸಾಲ ಪಡೆದು, ಸಾಲ ಮರುಪಾವತಿಸುವಲ್ಲಿ ವಿಫಲವಾದರೆ.

ಆಸ್ತಿಯನ್ನು ಮಾರಾಟ ಮಾಡಿದಾಗ, ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದ ನಂತರ ಬ್ಯಾಂಕ್/ಹಣಕಾಸು ಸಂಸ್ಥೆಗಳು ಮಾರಾಟ ಪ್ರಮಾಣಪತ್ರದ ಮೂಲಕ ಮಾರಾಟವನ್ನು ಕಾರ್ಯಗತಗೊಳಿಸುತ್ತದೆ. ಆದರೆ ಏತನ್ಮಧ್ಯೆ ಆಸ್ತಿ ನೋಂದಣಿಗೆ ಇ-ಖಾತಾ ಈಗ ಕಡ್ಡಾಯವಾಗಿರುವುದರಿಂದ, ಹಾಲಿ ಪಾಲಿಕೆಯ ಖಾತೆದಾರರು ಇಂತಹ ಸಂದರ್ಭಗಳಲ್ಲಿ ಸಹಕರಿಸದಿರಬಹುದು ಎಂದು ಹೇಳಲಾಗಿದೆ.

Final E-khata for Assets on Behalf of Banks and Financial Institutions

ಹೀಗಾಗಿ, ಈ ಗೊಂದಲಗಳನ್ನು ಸುಗಮಗೊಳಿಸಲು, ಬ್ಯಾಂಕ್‌ಗಳು/ಹಣಕಾಸು ಸಂಸ್ಥೆಗಳು ಇ-ಆಸ್ತಿ ವೆಬ್‌ಸೈಟ್‌ನಲ್ಲಿ ಸುತ್ತೋಲೆಯಲ್ಲಿ ನೋಡಿರುವ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ತಮ್ಮ ಹೆಸರಿನಲ್ಲಿ ಇ-ಖಾತಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಹೊಸ ಖಾತಾಗೆ ಹೊಸ ವೆಬ್‌ಸೈಟ್‌: ಇನ್ನು ಬಿಬಿಎಂಪಿಯು ಬೆಂಗಳೂರಿನಲ್ಲಿ ಖಾತಾ ಇಲ್ಲದೆ ಇರುವವರಿಗೆ ಸಹಾಯ ಮಾಡುವುದಕ್ಕೆ ಹೊಸ ವೆಬ್‌ಸೈಟ್‌ ಪರಿಚಯಿಸಿದೆ. ಬೆಂಗಳೂರಿನಲ್ಲಿ ಯಾವುದೇ ಖಾತಾ ಮಾಡಿಸಿಕೊಳ್ಳದೆ ಇರುವವರ ಸಂಖ್ಯೆ ಅಂದಾಜು 5ಲಕ್ಷಕ್ಕೂ ಹೆಚ್ಚಾಗಿ ಇದೆ ಎಂದು ಹೇಳಲಾಗಿದೆ. 5 ಲಕ್ಷಕ್ಕೂ ಹೆಚ್ಚು ಸ್ವತ್ತುಗಳಿಗೆ ಯಾವುದೇ ಖಾತಾ ಇಲ್ಲ ಎಂದು ಹೇಳಲಾಗಿದೆ.

ಈ ನಿರ್ದಿಷ್ಟ ಸ್ವತ್ತುಗಳಿಗೆ ಇಲ್ಲಿಯವರೆಗೆ ಯಾವುದೇ ಖಾತಾ ಇಲ್ಲದೆ. ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ವಹಿವಾಟು ನಡೆಯುತ್ತಿದೆ. ಇವುಗಳಲ್ಲಿ ಹಲವು ಸ್ವತ್ತುಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿದ್ದು. ಎಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+