13 ವರ್ಷದ ಮಗಳ ಹಠಕ್ಕೆ ಮಣಿದು ಬರೋಬ್ಬರಿ 2.12 ಲಕ್ಷ ಬೆಲೆಯ ಐಫೋನ್ 18 ಪ್ರೊ ಮ್ಯಾಕ್ಸ್ ಕೊಡಿಸಿದ ತಂದೆ: ಇದು ಸರಿನಾ?

ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಚಿಕ್ಕ ಮಕ್ಕಳ ಕೈಯಲ್ಲಿ ಸ್ಮಾರ್ಟ್‌ಫೋನ್ ನೋಡುವುದು ಸಾಮಾನ್ಯ ವಿಚಾರ. ಆದರೆ, ಕೇವಲ 13 ವರ್ಷದ ಬಾಲಕಿಯೊಬ್ಬಳು ಲಕ್ಷಾಂತರ ರೂಪಾಯಿ ಬೆಲೆಬಾಳುವ ಮೊಬೈಲ್ ಬೇಕೇ ಬೇಕು ಎಂದು ಹಠ ಹಿಡಿದು, ಅದನ್ನ ಪೋಷಕರಿಂದ ಕೊಡಿಸಿಕೊಂಡಿರುವ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಅಷ್ಟಕ್ಕೂ ಆಕೆ ಕೇಳಿದ್ದು ಸಾಮಾನ್ಯ ಫೋನ್ ಅಲ್ಲ, ಬದಲಿಗೆ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮೌಲ್ಯದ ಐಫೋನ್. ಹೌದು, ತನ್ನ 13 ವರ್ಷದ ಮಗಳಿಗೆ ಐಫೋನ್ ಕೊಡಿಸಲು ತಂದೆಯೊಬ್ಬರು ಪಟ್ಟ ಪರದಾಟ ಹಾಗೂ ಮಗಳ ದುಬಾರಿ ಬೇಡಿಕೆ ಇದೀಗ ಮಾಡರ್ನ್‌ ಪೇರೆಂಟಿಂಗ್‌ ಬಗ್ಗೆ ಗಂಭೀರ ಪ್ರಶ್ನೆಗಳನ್ನ ಹುಟ್ಟುಹಾಕಿದೆ.

Father Buys 2 12 Lakh iPhone 18 Pro Max for 13-Year-Old Daughter Is It the Right Parenting

ಐಫೋನ್ 18 ಪ್ರೊ ಮ್ಯಾಕ್ಸ್: ಮಗಳ ಹಠಕ್ಕೆ ಮಣಿದ ತಂದೆ

ಇತ್ತೀಚೆಗಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಅತ್ಯಾಧುನಿಕ ಐಫೋನ್ 18 ಪ್ರೊ ಮ್ಯಾಕ್ಸ್ ಕೊಳ್ಳುವುದು ಬಹುತೇಕರ ಕನಸು. ಇದರ ಬೆಲೆ ಬರೋಬ್ಬರಿ 2,12,000 ರೂಪಾಯಿಗಳು. ಇಷ್ಟು ದೊಡ್ಡ ಮೊತ್ತದ ಮೊಬೈಲ್ ಅನ್ನು 13 ವರ್ಷದ ಬಾಲಕಿಯೊಬ್ಬಳು ತನಗೆ ಬೇಕೇ ಬೇಕು ಎಂದು ಹಠ ಹಿಡಿದಿದ್ದಾಳೆ.

ಮಗಳ ಮೇಲಿನ ಅತಿಯಾದ ಪ್ರೀತಿಯಿಂದಲೋ ಅಥವಾ ಆಕೆಯ ಹಠವನ್ನ ತಾಳಲಾರದೆಯೋ, ತಂದೆಯೊಬ್ಬರು ಮಳಿಗೆಗೆ ಹೋಗಿ ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಈ ದುಬಾರಿ ಫೋನ್ ಅನ್ನ ಖರೀದಿಸಿದ್ದಾರೆ. ಫೋನ್ ಖರೀದಿಸಿ ಬಿಲ್ ಪಾವತಿಸುವಾಗ ಆ ತಂದೆಯ ಮುಖದಲ್ಲಿ ಆತಂಕ ಮತ್ತು ಆರ್ಥಿಕ ಹೊರೆಯ ಚಿಂತೆ ಸ್ಪಷ್ಟವಾಗಿ ಅವರ ಮುಖದಲ್ಲಿ ಕಾಣುತ್ತಿತ್ತು ಎನ್ನಲಾಗಿದೆ.

ಆದರೆ, ದುಬಾರಿ ಉಡುಗೊರೆ ಪಡೆದ ಮಗಳು ಮಾತ್ರ ಅತ್ಯಂತ ಖುಷಿಯಿಂದ ಕುಣಿಯುತ್ತಿದ್ದಳು. ಫೋನ್ ಕೈಸೇರಿದ ತಕ್ಷಣ ಆಕೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, "ನನ್ನ ತಂದೆ ನನಗೆ ಕೇವಲ ಐಫೋನ್ ಪ್ರೊ ಮ್ಯಾಕ್ಸ್ ಉಡುಗೊರೆಯಾಗಿ ನೀಡಿಲ್ಲ... ಬದಲಿಗೆ ಅವರು ತಮ್ಮ ಪ್ರೀತಿಯ ಒಂದು ಸಣ್ಣ ಭಾಗವನ್ನ ನನಗೆ ನೀಡಿದ್ದಾರೆ" ಎಂದು ಬರೆದುಕೊಂಡು ಸಂಭ್ರಮಿಸಿದ್ದಾಳೆ.

ಸೋನಾಲಿ ಎಕ್ಸ್ ಪೋಸ್ಟ್: ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ

ಬಾಲಕಿಯ ಈ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಗೂ ಘಟನೆಯ ವಿವರವನ್ನ ಸೋನಾಲಿ ಎಂಬುವವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸೋನಾಲಿ ಎಕ್ಸ್ ಪೋಸ್ಟ್ ಇದೀಗ ವೈರಲ್ ಆಗಿದ್ದು, "13 ವರ್ಷದ ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳು ಇಷ್ಟೊಂದು ದುಬಾರಿ ವಸ್ತುವಿಗಾಗಿ ಹಠ ಹಿಡಿಯುವುದು ಎಷ್ಟರಮಟ್ಟಿಗೆ ಸರಿ?" ಎಂದು ಅವರು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ.

ಮಕ್ಕಳ ಪ್ರತಿಯೊಂದು ಬೇಡಿಕೆಯನ್ನ ಈಡೇರಿಸುವುದು ಪೋಷಕರ ಜವಬ್ದಾರಿ, ಆದರೆ ಎಲ್ಲವನ್ನೂ ಕೇಳಿದ ತಕ್ಷಣ ಒದಗಿಸುವುದು ನಿಜವಾದ ಪಾಲನೆಯೇ ಎಂಬ ಗಂಭೀರವಾದ ಚರ್ಚೆಯನ್ನ ಈ ಪೋಸ್ಟ್ ಹುಟ್ಟುಹಾಕಿದೆ. ಇದಕ್ಕೆ ಸಾವಿರಾರು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಪೋಷಕರು ಮಕ್ಕಳಿಗೆ ದುಬಾರಿ ವಸ್ತುಗಳನ್ನು ಕೊಡುವ ಬದಲು ಹಣದ ಮೌಲ್ಯವನ್ನ ಕಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೋಷಕರ ಜವಾಬ್ದಾರಿ: ಮಕ್ಕಳ ದುಬಾರಿ ಬೇಡಿಕೆ ಈಡೇರಿಸುವುದು ಸರಿಯೇ?

ಮಕ್ಕಳ ಮುಖದಲ್ಲಿ ನಗು ನೋಡಲು ಪೋಷಕರು ತಮ್ಮ ಶಕ್ತಿಮೀರಿ ಕಷ್ಟಪಡುತ್ತಾರೆ. ಆದರೆ, ವಯಸ್ಸಿಗೆ ಮೀರಿದ ಮಕ್ಕಳ ದುಬಾರಿ ಬೇಡಿಕೆಗಳನ್ನ ಈಡೇರಿಸುವುದು ಅವರ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಮನೋವಿಜ್ಞಾನಿಗಳು ಎಚ್ಚರಿಸುತ್ತಾರೆ.

ಇಷ್ಟು ಸಣ್ಣ ವಯಸ್ಸಿಗೆ 2.12 ಲಕ್ಷ ರೂ. ಬೆಲೆಯ ವಸ್ತು ಸಿಕ್ಕಾಗ, ಅವರಿಗೆ ವಸ್ತುಗಳ ನಿಜವಾದ ಮೌಲ್ಯ ಮತ್ತು ಆ ಹಣ ಸಂಪಾದಿಸಲು ಪೋಷಕರು ಪಡುವ ಕಷ್ಟದ ಅರಿವು ಇಲ್ಲದಂತಾಗುತ್ತದೆ. ಪ್ರತಿಯೊಂದು ಹಠವೂ ಸುಲಭವಾಗಿ ಈಡೇರಿದಾಗ, ಮಕ್ಕಳು ಮುಂದೆ ಜೀವನದಲ್ಲಿ ಎದುರಾಗುವ ಸಣ್ಣ ನಿರಾಕರಣೆಯನ್ನೂ ಸಹಿಸಿಕೊಳ್ಳಲಾಗದಷ್ಟು ದುರ್ಬಲರಾಗಬಹುದು.

ಕೇವಲ ದುಬಾರಿ ವಸ್ತುಗಳನ್ನು ನೀಡುವುದೇ ಪ್ರೀತಿಯಲ್ಲ; ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ, ಹಣದ ಮಹತ್ವ ಹಾಗೂ ಶಿಸ್ತನ್ನು ಕಲಿಸುವುದು ಅತ್ಯುತ್ತಮ ಪಾಲನೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+