ನಟಿ ಸಂಜನಾಗೆ ಅಶ್ಲೀಲ ಸಂದೇಶ: ಫ್ಯಾಷನ್ ಡಿಸೈನರ್ ಪುತ್ರ ಪೊಲೀಸರ ವಶಕ್ಕೆ
ಬೆಂಗಳೂರು, ಮಾ. 04: ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಸಂದೇಶ ರವಾನಿಸಿದ ಆರೋಪದಡಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರನನ್ನು ಇಂದಿರಾನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಳೆದ ಫೆ. 25 ರಂದು ರಾತ್ರಿ 12 ಗಂಟೆ ಸುಮಾರಿನಲ್ಲಿ ನಟಿ ಸಂಜನಾ ಅವರಿಗೆ ಕೆಟ್ಟ ಸಂದೇಶ ರವಾನಿಸಲಾಗಿದೆ. ಅಶ್ಲೀಲ ಸಂದೇಶ, ವಾಟ್ಸಪ್ ಚಾಟ್ ಸಮೇತ ಸಂಜನಾ ಇಂದಿರಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಇಂದಿರಾನಗ ಪೊಲೀಸರು ಫ್ಯಾಷನ್ ಡಿಸೈಬರ್ ಪ್ರಸಾದ್ ಬಿದ್ದಪ್ಪ ಅವರ ಮಗನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಕೊಡಗಿನ ಹೋಮ್ ಸ್ಟೇ ನಲ್ಲಿದ್ದ ಪ್ರಸಾದ್ ಬಿದ್ದಪ್ಪನ ಪುತ್ರನನ್ನು ವಿಚಾರಣೆ ನಡೆಸಿದಾಗ, ನಾನು ಯಾವುದೇ ರೀತಿಯ ಅಶ್ಲೀಲ ಸಂದೇಶ ರವಾನಿಸಿಲ್ಲ. ನಾನು ಸಂಜನಾ ಅವರ ನಂಬರ್ ಬ್ಲಾಕ್ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ನಟಿ ಸಂಜನಾ ನೀಡಿರುವ ದಾಖಲೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ.

ಸೈಬರ್ ವಂಚಕರ ಸೆರೆ: ಸೈಬರ್ ವಂಚಕರಿಗೆ ಸಿಮ್ ಕಾರ್ಡ್ ನೀಡಿ ದೋಖಾ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಹರ್ಷಾ, ಚೇತನ್, ಮತ್ತು ರಾಜೇಶ್ವರ್ ಬಂಧಿತರು. ರೇವಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿಗೆ ಇಸಿಎಂ ಬದಲಿಗೆ ಕಂಪ್ಯೂಟರ್ ಸೈನ್ಸ್ ಕೊಡಿಸುವುದಾಗಿ ನಂಬಿಸಿ 1.27 ಲಕ್ಷ ರೂ. ಹಣ ಪಡೆದು ಮೋಸ ಮಾಡಿದ್ದರು. ರಾಜೇಶ್ವರ್ ಎಂಬಾತ ಹಣ ಪಡೆದು ವಂಚಿಸಿದ್ದ. ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಈಶಾನ್ಯ ವಿಭಾಗದ ಸೈಬರ್ ಪೊಲೀಸರು ರಾಜೇಶ್ವರ್‌ನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಮತ್ತಿಬ್ಬರು ಅರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತ ಚೇತನ್ ಮತ್ತು ಹರ್ಷಾ, ಸೈಬರ್ ಕ್ರಿಮಿನಲ್‌ಗಳಿಗೆ ಅಗತ್ಯ ಡಾಟಾ ಕೊಟ್ಟು ಹಣ ಪಡೆದು ಮೋಸ ಮಾಡುತ್ತಿದ್ದರು ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಬಂಧಿತರಿಂದ ಏಳು ಲಕ್ಷ ರೂ. ಬೆಲೆ ಬಾಳುವ ವಸ್ತು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications