ಫೇಸ್‌ಬುಕ್ ನಿಂದ ಮದುವೆ ವಾಟ್ಸಪ್‌ನಿಂದ ಡಿವೊರ್ಸ್, ಇದೆಂಥಾ ಜೀವನ
ಬೆಂಗಳೂರು, ಫೆಬ್ರವರಿ 12: ಫೇಸ್‌ಬುಕ್ ಮೂಲಕ ಪರಿಚಯವಾಗಿ, ಪ್ರೀತಿ ಹುಟ್ಟಿ ಮದುವೆಯಾಗಿದ್ದ ದಂಪತಿ ಇದೀಗ ವಾಟ್ಸಪ್‌ನಿಂದ ದೂರವಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಛತ್ತೀಸ್‌ಗಢದ ರಾಯಪುರ ಮೂಲದ ಯುವತಿಗೆ ಬೆಂಗಳೂರಿನ ಯುವಕನನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದಳು. ಇಬ್ಬರಿಗೂ ಪ್ರೀತಿ ಹುಟ್ಟಿತ್ತು ಮನೆಯಲ್ಲಿ ವಿರೋಧವಿದ್ದರೂ ಮದುವೆಯಾಗಿದ್ದರು. ನಂತರ ಆಕೆಯನ್ನು ರಾಯ್ಪುರದಲ್ಲಿ ಬಿಟ್ಟು ಈತ ಬೆಂಗಳೂರಿಗೆ ಬಂದಿದ್ದ.

ಬಳಿಕ ಬೆಂಗಳೂರಿಗೆ ಕರೆಸಿಕೊಂಡಿದ್ದ, ಪತಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರಾ ಎಂದು ಪತ್ನಿ ಕಡೆಯವರು ಆಕೆಗೆಮೆಸೇಜ್ ಮಾಡಿದ್ದರು. ಇದರಿಂದ ಕೋಪಗೊಂಡ ಆತ ಪತ್ನಿ ಶೀಲ ಶಂಕಿಸಿ ಕಿರುಕುಳ ನೀಡಲು ಆರಂಭಿಸಿದ್ದ, ಗಂಡನ ಹಿಂಸೆ ಸಹಿಸಲಾಗದೆ ಊರಿಗೆ ಹಿಂದುರಿಗಿ ದೂರು ನೀಡಿದ್ದಾಳೆ.












Click it and Unblock the Notifications