ಬಾಡಿಗೆ ಮನೆ ಕೊಡಿಸುವುದಾಗಿ ಕರೆಸಿ ಅತ್ಯಾಚಾರ ಮಾಡಿದ ಫೇಸ್‌ಬುಕ್ ಸ್ನೇಹಿತ

ಬೆಂಗಳೂರು, ಜೂನ್ 25: ಬಾಡಿಗೆ ಮನೆ ಕೊಡಿಸುವುದಾಗಿ ನಂಬಿಸಿ ಮನೆಗೆ ಕರೆಸಿ ಫೇಸ್‌ಬುಕ್ ಸ್ನೇಹಿತನೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿಯೊಬ್ಬಳು ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ದಿನ ಆರೋಪಿ ಸಂತ್ರಸ್ಥೆಯ ಕಚೇರಿಗೆ ಹೋಗಿದ್ದ, ಅದಾದ ಬಳಿಕ ನಿತ್ಯ ಸಾಕಷ್ಟು ಗಂಟೆಗಳ ಕಾಲ ಇಬ್ಬರೂ ಮೊಬೈಲ್‌ನಲ್ಲಿ ಮಾತನಾಡಿಕೊಳ್ಳುತ್ತಿದ್ದರು.

ಆಕೆ ಬಾಡಿಗೆ ಮನೆ ಹುಡುಕುತ್ತಿದ್ದಳು, ಆರೋಪಿ ತಿಪ್ಪೇಸ್ವಾಮಿ ಬಾಡಿಗೆ ಮನೆ ಕೊಡಿಸುವುದಾಗಿ ನಂಬಿಸಿ ರೆಸ್ಟೋರೆಂಟ್‌ ಒಂದಕ್ಕೆ ಕರೆಸಿಕೊಂಡಿದ್ದ , ಮತ್ತು ಬರುವ ಔಷಧವನ್ನು ಬೆರೆಸಿ ಜ್ಯೂಸ್ ಕುಡಿಸಿ, ಬಳಿಕ ಆಕೆಯನ್ನು ಹೋಟೆಲ್‌ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ.

Facebook invites to hotel and rapes her

ಆಕೆ ಎಚ್ಚರವಾದ ಬಳಿಕ ನಡೆದಿರುವ ವಿಚಾರ ಅರ್ಥವಾಗಿತ್ತು. ರಾತ್ರಿ 11.45ರ ಸುಮಾರಿಗೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದ, ಹೋಟೆಲ್‌ ರೂಮಿನಲ್ಲಿ ಆತ ಕೆಲವು ಫೋಟೊಗಳನ್ನು ತೆಗೆದುಕೊಂಡಿದ್ದ ಆ ಫೋಟೊಗಳನ್ನಿಟ್ಟುಕೊಂಡು ಬ್ಯ್ಲಾಕ್‌ಮೇಲ್ ಮಾಡುತ್ತಿದ್ದ.

50 ಸಾವಿರ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಅಪ್‌ಲೋಡ್‌ ಮಾಡುವುದಾಗಿ ಬೆದರಿಕೆ ಹಾಕಿದ್ದ. ಯುವತಿ ಕೊಟ್ಟ ದೂರಿನ ಮೇರೆಗೆ ಆತನ ಮೊಬೈಲ್ ಪರಿಶೀಲಿಸಿದಾಗ ಫೋಟೊಗಳು ಲಭ್ಯವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+