Extra Marital Affair: ಅಕ್ರಮ ಸಂಬಂಧ: ಈ ಕಾರಣಕ್ಕೆ ಬೆಂಗಳೂರಿನಲ್ಲೇ ಹೆಚ್ಚು
ಇತ್ತೀಚೆಗೆ ವಿವಾಹೇತರ ಅಕ್ರಮ ಸಂಬಂಧಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇದು ಅಪರಾಧ ಕೃತ್ಯಗಳಿಗೂ ಕಾರಣವಾಗುತ್ತಿದೆ. ಆಧುನಿಕ ಜೀವನ ನಡೆಸುತ್ತಿರುವ ಇಂದಿನ ಪೀಳಿಗೆ ಕೂಡ ಇದನ್ನು ಕಾಮನ್ ಆಗಿ ತೆಗೆದುಕೊಂಡಿದೆ. ಆದರೆ ದಾಂಪತ್ಯದಲ್ಲಿ ದ್ರೋಹ ಬಗೆಯುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಮಿತಿ ಮೀರುತ್ತಿದೆ. ಈ ವಿಚಾರದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮಂಚೂಣಿಯಲ್ಲಿದೆ. ಈ ಕಾರಣಗಳಿಗೆ ಬೆಂಗಳೂರಿನಲ್ಲೇ ಅಕ್ರಮ ಸಂಬಂಧ ಹೆಚ್ಚು ಎಂಬ ಆಘಾತಕಾರಿ ವಿಚಾರವನ್ನು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ.
ಅಕ್ರಮ ಸಂಬಂಧಗಳು ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತಿರುವುದು ಮಾತ್ರವಲ್ಲದೆ, ಕೊಲೆಯಂತಹ ಅಪರಾಧ ಕೃತ್ಯಗಳಿಗೂ ಕಾರಣವಾಗುತ್ತಿವೆ. ಬೆಂಗಳೂರಿನಲ್ಲಿ ಸದ್ಯ ಹೊರಗಿನವರೇ ಹೆಚ್ಚಾಗಿ ನೆಲೆಸಿರುವುದರಿಂದ ಪಾಶ್ಚಿಮಾತ್ಯ ಸಂಸ್ಕೃತಿಗೆ ಒಗ್ಗಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ದಿನೇ ದಿನೇ ಇಂತಹ ಅಕ್ರಮ ಸಂಬಂಧ ಹಾಗೂ ದಾಂಪತ್ಯ ದ್ರೋಹ ಪ್ರಕರಣಗಳು ಹೆಚ್ಚುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣಗಳೇನು ಎಂದೂ ಪಟ್ಟಿ ಮಾಡಲಾಗಿದೆ.

ದಂಪತಿಗಳ ನಡುವೆ ಬಯಕೆಗಳು ಈಡೇರದೆ ಇರುವುದು, ಭಾವನಾತ್ಮಕ ಅತೃಪ್ತಿ ಮತ್ತು ಅನ್ಯೋನ್ಯತೆಯ ಕೊರತೆಯೇ ದಾಂಪತ್ಯ ವಿರಸ ಹಾಗೂ ಅಕ್ರಮ ಸಂಬಂಧಗಳಿಗೆ ಕಾರಣವಾಗುತ್ತಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಆಗಿರುವ ಗ್ಲೀಡೆನ್ ಕೂಡ ಬೆಂಗಳೂರಿನಲ್ಲಿ ಇಂತಹ ವಿವಾಹೇತರ ಸಂಬಂಧಗಳನ್ನು ಉಲ್ಲೇಖಿಸಿದೆ.
ಯಾವ ವಯಸ್ಸಿನವರಲ್ಲಿ ಹೆಚ್ಚು?
ಗ್ಲೀಡೆನ್‌ನ ಬಳಕೆದಾರರಲ್ಲಿ ಬೆಂಗಳೂರಿನವರು ಶೇ 17ರಷ್ಟು ಮಂದಿ ಹೆಚ್ಚಾಗಿ 30-45 ವರ್ಷ ವಯಸ್ಸಿನ ವೃತ್ತಿಪರರು ಇರುವುದು ತಿಳಿದುಬಂದಿದೆ. ಇವರಲ್ಲಿ ಭಾವನಾತ್ಮಕ ಅತೃಪ್ತಿಯೇ ಮುಖ್ಯ ಕಾರಣ ಕಾರಣ ಎಂಬುದು ಪತ್ತೆಯಾಗಿದೆ. ಅನೇಕರು ದೈಹಿಕ ಒಡನಾಟಕ್ಕಿಂತ ಭಾವನಾತ್ಮಕತೆಯನ್ನು ಬಯಸುತ್ತಾರೆ ಎಂಬ ಅಂಶವನ್ನು ಪತ್ತೆ ಹಚ್ಚಿದೆ. ಇವರಲ್ಲಿ ಸುಮಾರು ಶೇ 65ರಷ್ಟು ಬಳಕೆದಾರರು ಪುರುಷರು ಹಾಗೂ ಶೇ 35ರಷ್ಟು ಮಹಿಳೆಯರಿದ್ದಾರೆ. ಇವರೆಲ್ಲರೂ ಹೆಚ್ಚಾಗಿ ಶ್ರೀಮಂತರು, ಫೈನಾನ್ಸ್, ಕಾನೂನು, ಇಂಜಿನಿಯರಿಂಗ್ ಅಥವಾ ಉದ್ಯಮಿಗಳು ಎಂದು ಬಹಿರಂಗಪಡಿಸಿದೆ.
ಈ ಆ್ಯಪ್‌ನ 12 ನಗರಗಳಲ್ಲಿ ಸಮೀಕ್ಷೆ ಮಾಡಿದೆ. ಇವರಲ್ಲಿ 18ರಿಂದ 60 ವರ್ಷ ವಯಸ್ಸಿನ ಸುಮಾರು 1,510 ಜನರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಬೆಂಗಳೂರಿನ ಶೇಕಡಾ 29ರಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಫ್ಲರ್ಟಿಂಗ್ ಮಾಡುವುದನ್ನು ಒಪ್ಪಿಕೊಂಡಿದ್ದಾರೆ. ಶೇಕಡಾ 53ರಷ್ಟು ಮಂದಿ ದಾಂಪತ್ಯ ದ್ರೋಹವನ್ನು ಒಪ್ಪಿದ್ದಾರೆ. ದೈಹಿಕ ಬಯಕೆ, ಭಾವನಾತ್ಮಕ ಬಯಕೆಗಳೇ ಇದಕ್ಕೆ ಕಾರಣ ಎಂದು ಹೇಳಿಕೊಂಡಿದ್ದಾರೆ. ಈ ಅಕ್ರಮ ಸಂಬಂಧಗಳಲ್ಲಿ 30ರಿಂದ 50 ವಯಸ್ಸಿನವರೇ ಹೆಚ್ಚಾಗಿದ್ದು, ಎಲ್ಲ ಪ್ರಕರಣಗಳಲ್ಲಿ ದಾಂಪತ್ಯ ದ್ರೋಹ ಡಿವೋರ್ಸ್‌ಗೆ ಕಾರಣವಾಗುವುದಿಲ್ಲ ಎಂದೂ ಹೇಳಿದ್ದಾರೆ.

ಒಂದು ಸಂಬಂಧದಲ್ಲಿರುವಾಗ ಹೊಂದಾಣಿಕೆಯಾಗದೆ ಇರುವುದು, ಕೆಲಸದ ಸ್ಥಳ ಅಥವಾ ಡೇಟಿಂಗ್ ಅಪ್ಲಿಕೇಶನ್‌ಗಳಿಂದಾಗಿ ಇಂತಹ ಅನ್ಯ ಸಂಬಂಧಗಳ ಮೊರೆ ಹೋಗುತ್ತಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಮಧ್ಯಮ ಮತ್ತು ಮೇಲ್ವರ್ಗದ ಕುಟುಂಬಗಳ 27-38 ವರ್ಷ ವಯಸ್ಸಿನ ಪುರುಷರು ಇದರಲ್ಲಿ ಭಾಗಿಯಾಗಿದ್ದಾರೆ. ಮಹಿಳೆಯರು ಸಾಮಾನ್ಯವಾಗಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಿವಾಹೇತರ ಸಂಬಂಧಗಳಲ್ಲಿ ತೊಡಗುತ್ತಿದ್ದಾರೆ. ಇದು ಕೆಲಸದ ಸ್ಥಳಗಳಲ್ಲಿ ಸಹೋದ್ಯೋಗಿಗಳು ಅಥವಾ ಸ್ನೇಹಿತರ ಪರಿಚಯದಿಂದ ಶುರುವಾಗಿ, ಭಾವನಾತ್ಮಕ ಹಾಗೂ ದೈಹಿಕವಾಗಿ ಹೆಚ್ಚಿನ ವಿವಾಹೇತರ ಸಂಬಂಧಗಳು ಬೆಳೆಯುತ್ತವೆ ಎಂದೂ ತಿಳಿದುಬಂದಿದೆ.












Click it and Unblock the Notifications